close

News WrapGet Handpicked Stories from our editors directly to your mailbox

Video: ಪಾಕ್ ಹೂಡಿಕೆದಾರರ ಸಮಾವೇಶದಲ್ಲಿ ಬೆಲ್ಲಿ ಡ್ಯಾನ್ಸ್...!

 ಪಾಕಿಸ್ತಾನದ ಸರ್ಹಾದ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಸ್ಸಿಸಿಐ) ಇತ್ತೀಚೆಗೆ ಅಜರ್ಬೈಜಾನ್‌ನಲ್ಲಿ ತನ್ನ ಆರ್ಥಿಕ ಉತ್ತೇಜನಕ್ಕಾಗಿ ಹೂಡಿಕೆ ಶೃಂಗಸಭೆಯನ್ನು ಆಯೋಜಿಸಿತ್ತು, ಅಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ಈ ಕಾರ್ಯಕ್ರಮದಲ್ಲಿ ಬೆಲ್ಲಿ ನೃತ್ಯಗಾರರು ಪ್ರದರ್ಶನ ಏರ್ಪಡಿಸಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Updated: Sep 9, 2019 , 03:56 PM IST
Video: ಪಾಕ್ ಹೂಡಿಕೆದಾರರ ಸಮಾವೇಶದಲ್ಲಿ ಬೆಲ್ಲಿ ಡ್ಯಾನ್ಸ್...!
Photo courtesy: Twitter (screen grab)

ಇಸ್ಲಾಮಾಬಾದ್:  ಪಾಕಿಸ್ತಾನದ ಸರ್ಹಾದ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಸ್ಸಿಸಿಐ) ಇತ್ತೀಚೆಗೆ ಅಜರ್ಬೈಜಾನ್‌ನಲ್ಲಿ ತನ್ನ ಆರ್ಥಿಕ ಉತ್ತೇಜನಕ್ಕಾಗಿ ಹೂಡಿಕೆ ಶೃಂಗಸಭೆಯನ್ನು ಆಯೋಜಿಸಿತ್ತು, ಅಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ಈ ಕಾರ್ಯಕ್ರಮದಲ್ಲಿ ಬೆಲ್ಲಿ ನೃತ್ಯಗಾರರು ಪ್ರದರ್ಶನ ಏರ್ಪಡಿಸಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಸೆಪ್ಟೆಂಬರ್ 4 ರಿಂದ 8 ರವರೆಗೆ ಬಾಕುವಿನಲ್ಲಿ ಖೈಬರ್ ಪಖ್ತುನ್ಖ್ವಾ ಹೂಡಿಕೆ ಅವಕಾಶಗಳ ಸಮಾವೇಶ ಎಂಬ ಶೀರ್ಷಿಕೆಯಲ್ಲಿ  ಶೃಂಗಸಭೆಯನ್ನು ಆಯೋಜಿಸಲಾಗಿದ್ದು, ಈ ಸಂದರ್ಭದಲ್ಲಿ ಆಯೋಜಕರು ಬೆಲ್ಲಿ ಡ್ಯಾನ್ಸ್ ಪ್ರದರ್ಶನಕ್ಕೆ ಅವಕಾಶ ನೀಡಿದ್ದಾರೆ. ಈ ವಿಡಿಯೋವನ್ನು ಪಾಕಿಸ್ತಾನದ ಗುಲ್ ಬುಖಾರಿ ಎನ್ನುವ ಪತ್ರಕರ್ತರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. 

ಈ ಟ್ವೀಟ್ ನಲ್ಲಿ ಅವರು ಬೆಲ್ಲಿ ನರ್ತಕಿಯರು ಹೂಡಿಕೆದಾರರನ್ನು ಡ್ಯಾನ್ಸ್ ಮೂಲಕ ಆಮಿಷ ಒಡ್ಡಲು ಪ್ರಯತ್ನಿಸಿದಾಗ ಎಂದು ಬರೆದುಕೊಂಡಿದ್ದಾರೆ. ಯಾವಾಗ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತೋ ಆಗ ಅವರು ತಕ್ಷಣ ಪ್ರತಿಕ್ರಿಯೆ ನೀಡಿ 'ನಯಾ ಪಾಕಿಸ್ತಾನದ ಮಾರ್ಗ' ಎಂದು ಬಣ್ಣಿಸಿದ್ದಾರೆ. ಇನ್ನೊಬ್ಬ ಟ್ವಿಟ್ಟರ್ ಬಳಕೆದಾರ ಪಾಕಿಸ್ತಾನ ಔಟ್ ಆಫ್ ಬಾಕ್ಸ್ ಮೂಲಕ ಆರ್ಥಿಕತೆಯನ್ನು ಸರಿ ಪಡಿಸಲು ಮುಂದಾಗಿದೆ ಎಂದು ಬರೆದುಕೊಂಡಿದ್ದಾರೆ.