Viral Video: ವೃದ್ದೆಯಿಂದ ಹಣ ನಿರಾಕರಿಸಿ ಆಕೆಗೆ ಮುತ್ತಿಟ್ಟ ದರೋಡೆಕೋರ....!

ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಬ್ರೆಜಿಲ್ ದೇಶದ ಫಾರ್ಮಸಿಯಲ್ಲಿ ಶಸ್ತ್ರಸಜ್ಜಿತ ದರೋಡೆಕೋರರು ಹಣವನ್ನು ದೊಚಿಸಿದ್ದಾರೆ.ಈ ಸಂದರ್ಭದಲ್ಲಿ ಆತನ ಸಹಚರನಾಗಿದ್ದ ಮತ್ತೊಬ್ಬ ಕಳ್ಳನು ವೃದ್ದ ಮಹಿಳೆಯಿಂದ ಹಣವನ್ನುನಿರಾಕರಿಸಿ ಆಕೆಗೆ ಮುತ್ತಿಟ್ಟು ಸಮಾಧಾನಪಡಿಸಿದ್ದಾನೆ.

Last Updated : Oct 19, 2019, 03:05 PM IST
Viral Video: ವೃದ್ದೆಯಿಂದ ಹಣ ನಿರಾಕರಿಸಿ ಆಕೆಗೆ ಮುತ್ತಿಟ್ಟ ದರೋಡೆಕೋರ....! title=
Photo courtesy: YouTube

ನವದೆಹಲಿ: ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಬ್ರೆಜಿಲ್ ದೇಶದ ಫಾರ್ಮಸಿಯಲ್ಲಿ ಶಸ್ತ್ರಸಜ್ಜಿತ ದರೋಡೆಕೋರರು ಹಣವನ್ನು ದೊಚಿಸಿದ್ದಾರೆ.ಈ ಸಂದರ್ಭದಲ್ಲಿ ಆತನ ಸಹಚರನಾಗಿದ್ದ ಮತ್ತೊಬ್ಬ ಕಳ್ಳನು ವೃದ್ದ ಮಹಿಳೆಯಿಂದ ಹಣವನ್ನುನಿರಾಕರಿಸಿ ಆಕೆಗೆ ಮುತ್ತಿಟ್ಟು ಸಮಾಧಾನಪಡಿಸಿದ್ದಾನೆ.

ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗಿದೆ.ಈ ಘಟನೆ ಮಂಗಳವಾರ ಈಶಾನ್ಯ ಬ್ರೆಜಿಲ್‌ನ ಅಮರಾಂಟೆಯಲ್ಲಿ ನಡೆದಿದೆ ಎನ್ನಲಾಗಿದೆ.ಸಂಜೆ 5 ಗಂಟೆ ಸುಮಾರಿಗೆ ಕಳ್ಳರು ಫಾರ್ಮಿಸಿಗೆ ಆಗಮಿಸಿದ್ದಾರೆ. ಆ ಸಮಯದಲ್ಲಿ ಔಷಧಾಲಯದಲ್ಲಿ ಉದ್ಯೋಗಿ ಮತ್ತು ವೃದ್ಧ ಮಹಿಳೆ ಇದ್ದರು ಎನ್ನಲಾಗಿದೆ. ಕಳ್ಳರು ಫಾರ್ಮಸಿ ಒಳಗಡೆ ಪ್ರವೇಶಿಸಿ ಎಲ್ಲಾ ಹಣವನ್ನು ರವಾನಿಸಲು ಕೇಳಿಕೊಂಡರು ಎಂದು ಅಲ್ಮೇಡಾ ಬ್ರೆಜಿಲಿಯನ್ ಸುದ್ದಿವಾಹಿನಿಗೆ ತಿಳಿಸಿದ್ದಾರೆ.

ಕಳ್ಳತನದ ವೇಳೆ ಅಲ್ಲೇ ಉಪಸ್ಥಿತರಿದ್ದ ವೃದ್ದೆ ಹಣ ನೀಡಲು ಮುಂದಾದಾಗ ಅದಕ್ಕೆ ಆ ಕಳ್ಳನು ಮುತ್ತಿಟ್ಟು 'ಇಲ್ಲ ಮಾಮ್ ನೀವು ಸುಮ್ಮನಿರಿ ನಿಮ್ಮ ಹಣ ನನಗೆ ಬೇಡ' ಎಂದು ಹೇಳಿದನು ಎನ್ನಲಾಗಿದೆ. ಸುಮಾರು 1,000 ಡಾಲರ್ ನಗದು ಮತ್ತು ಕೆಲವು ಸರಕುಗಳೊಂದಿಗೆ ಅಂಗಡಿಯಿಂದ ತಪ್ಪಿಸಿಕೊಂಡಿದ್ದಾರೆ. ಈಗ ಈ ದೃಶ್ಯಾವಳಿಗಳು ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಸೆರೆಯಾಗಿದೆ. ದರೋಡೆ ನಂತರ ಮಿಲಿಟರಿ ಪೊಲೀಸರು ಈ ಪ್ರದೇಶದಲ್ಲಿ ಹುಡುಕಾಟ ನಡೆಸಿದರು, ಆದರೆ ಇದುವರೆಗೂ ಯಾವುದೇ ಶಂಕಿತರನ್ನು ಬಂಧಿಸಿಲ್ಲ ಎನ್ನಲಾಗಿದೆ.
 

Trending News