Viral Video: ಪರ್ಸ್ ಕದ್ದ ಕಳ್ಳನನ್ನು ಪತ್ತೆಹಚ್ಚಲು ಹೋದವರಿಗೆ ಕಂಡಿದ್ದೇನು ಗೊತ್ತೇ?

ಹಿಂದಿನಿಂದ ಸದ್ದಿಲ್ಲದೇ ಬಂದ ನಾಯಿಯೊಂದು ಕಳ್ಳತನ ಮಾಡುವುದು ದೊಡ್ಡ ಕೆಲಸವೇ ಅಲ್ಲ ಎಂಬಂತೆ ಬಹಳ ನಾಜೂಕಾಗಿ ವ್ಯಕ್ತಿಯ ಪರ್ಸ್ ತೆಗೆದುಹೊಂದು ಹೋಗಿದೆ. 

Last Updated : Sep 5, 2018, 08:59 PM IST
Viral Video: ಪರ್ಸ್ ಕದ್ದ ಕಳ್ಳನನ್ನು ಪತ್ತೆಹಚ್ಚಲು ಹೋದವರಿಗೆ ಕಂಡಿದ್ದೇನು ಗೊತ್ತೇ? title=

ಕಳ್ಳನನ್ನು ಕಂಡುಹಿಡಿಯಲು ಪೊಲೀಸರು ಸಿಸಿಟಿವಿ ಫೂಟೇಜ್ ನೋಡೋದು ಸಾಮಾನ್ಯ. ಆದರೆ, ಅದರಲ್ಲಿ ಕಳ್ಳನಿಗೆ ಬದಲಾಗಿ ಒಂದು ನಾಯಿ ಕಂಡು ಬಂದರೆ ಹೇಗನ್ನಿಸಬೇಡ? ಇದೀಗ ಇಂತಹ ಒಂದು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಇಂಥ ಒಂದು ಘಟನೆ ನಡೆದಿರುವುದು ಚೀನಾದ ಕ್ಲಬ್'ವೊಂದರಲ್ಲಿ. ಅಲ್ಲಿ ಜನರು ಕಾರ್ಡ್ಸ್ ಆಡುತ್ತಾ ಕುಳಿತಿದ್ದರೆ, ಹಿಂದಿನಿಂದ ಸದ್ದಿಲ್ಲದೇ ಬಂದ ನಾಯಿಯೊಂದು ಕಳ್ಳತನ ಮಾಡುವುದು ದೊಡ್ಡ ಕೆಲಸವೇ ಅಲ್ಲ ಎಂಬಂತೆ ಬಹಳ ನಾಜೂಕಾಗಿ ವ್ಯಕ್ತಿಯ ಪರ್ಸ್ ತೆಗೆದುಹೊಂದು ಹೋಗಿದೆ. ಪರ್ಸ್ ಕಳೆದು ಹೋಗಿರುವ ಬಗ್ಗೆ ಪತ್ತೆಹಚ್ಚಲು ಸಿಸಿಟಿವಿ ಫೂಟೇಜ್ ನೋಡಿದವರಿಗೆ ಕಂಡು ಬಂದ ದೃಶ್ಯ ಇದು. 

ಇದೀಗ ಈ ವೀಡಿಯೋವನ್ನು ಪಿಪಲ್ಸ್ ಡೈರಿ, ಚೀನಾ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದೆ. ಇದನ್ನು ನೋಡಿದ ಕೆಲವರು 'ಗುಡ್ ಡಾಗ್' ಎಂದು ಕಮೆಂಟ್ ಮಾಡಿದರೆ, ಮತ್ತೆ ಕೆಲವರು 'ಇದು ಪಳಗಿರುವ ನಾಯಿ' ಎಂದು ಕಮೆಂಟ್ ಮಾಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಆ 'ಸ್ಮೂತ್ ಕ್ರಿಮಿನಲ್' ಅನ್ನು ನೀವೂ ನೋಡಿ...

Trending News