ಕಾರು, ಬೈಕ್, ಬಸ್ಸುಗಳಲ್ಲಿ ಪ್ರಯಾಣಿಸುವಾಗ ತಿಂಡಿ ಪೊಟ್ಟಣಗಳು, ಪ್ಲಾಸ್ಟಿಕ್ ಕವರ್ ಗಳು, ನೀರಿನ ಬಾಟಲಿಗಳು ಹಣ್ಣಿನ ಸಿಪ್ಪೆ ಸೇರಿದಂತೆ ಇತರ ತ್ಯಾಜ್ಯಗಳನ್ನು ರಸ್ತೆಗಳಲ್ಲಿ ಎಸೆಯುವವರು ಈ ವೀಡಿಯೋವನ್ನು ತಪ್ಪದೇ ವೀಕ್ಷಿಸಲೇಬೇಕು!!!


COMMERCIAL BREAK
SCROLL TO CONTINUE READING

ಅಂತಹದ್ದೇನಿದೆ ಈ ವೀಡಿಯೋದಲ್ಲಿ ಎಂದು ಆಲೋಚಿಸುತ್ತಿದ್ದೀರಾ? ಉಪಯುಕ್ತವಾದ ಮಾಹಿತಿ ಖಂಡಿತಾ ಇದೆ. ಬೀಚಿಂಗ್'ನಲ್ಲಿ ರೆಕಾರ್ಡ್ ಆಗಿರುವ ಈ ವೀಡಿಯೋದಲ್ಲಿ ಕಾರಿನಿಂದ ಕಸವನ್ನು ಎಸೆದ ಮಹಿಳೆಗೆ ಬೈಕ್ ಸವಾರನೊಬ್ಬ ತಕ್ಕ ಪಾಠ ಕಲಿಸಿದ್ದಾನೆ. ಇದನ್ನು ಆಕೆ ಎಂದಿಗೂ ಮರೆಯುವುದಿಲ್ಲ ಎನಿಸುತ್ತದೆ. 


ಚೈನಾ ಗ್ಲೋಬಲ್ ಟೆಲಿವಿಷನ್ ನೆಟ್ವರ್ಕ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೋ ಶೇರ್ ಮಾಡಿದೆ. ಇದರಲ್ಲಿ ಟ್ರಾಫಿಕ್ ಸಿಗ್ನಲ್ ನಲ್ಲಿ ಬಂದು ನಿಂತ ಕಾರಿನ ಕಿಟಕಿಯಿಂದ ಯಾರೋ ಕಸವನ್ನು ರಸ್ತೆಗೆ ಎಸೆಯುತ್ತಾರೆ. ಕಸ ಎಸೆದ ಕೆಲವೇ ಕ್ಷಣಗಳಲ್ಲಿ ಆ ಸ್ಥಳಕ್ಕೆ ಬೈಕ್'ನಲ್ಲಿ ಬಂದ ವ್ಯಕ್ತಿಯೊಬ್ಬ ಆ ಕಸವನ್ನು ತೆಗೆದು ಪುನಃ ಕಾರಿನೊಳಗೆ ಎಸೆದು ಹೋಗುತ್ತಾನೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 



ಈ ವೀಡಿಯೋ ನೋಡಿ ಪ್ರತಿಕ್ರಿಯಿಸಿರುವ ಟ್ವಿಟ್ಟಿಗರು, ಸಾರ್ವಜನಿಕ ಸ್ಥಳಗಳ ಸ್ವಚ್ಚತೆ ಪಾಲಿಸದವರಿಗೆ ಇದು ತಕ್ಕ ಪಾಠ ಎಂದು ಶ್ಲಾಘಿಸಿದ್ದಾರೆ.