Sonyಯ ಈ AC ಬಟ್ಟೆಯೊಳಗೆ ಧರಿಸಿ, ಶಕೆಯಿಂದ ಬಚಾವಾಗಿ

ತಂತ್ರಜ್ಞಾನದ ಖ್ಯಾತ ಕಂಪನಿ ಸೋನಿ ಸಣ್ಣ ಗಾತ್ರದ ACಯೊಂದನ್ನು ಬಿಡುಗಡೆಗೊಳಿಸಿದ್ದು, ಇದನ್ನು ನೀವು ಧರಿಸಿರುವ ಬಟ್ಟೆಯಲ್ಲಿಯೂ ಕೂಡ ಧರಿಸಬಹುದಾಗಿದ್ದು, ಇದನ್ನು ಧರಿಸಿದವರಿಗೆ ಇದು ಥಂಡಾ ಥಂಡಾ, ಕೂಲ್ ಕೂಲ್ ಆಗಿಡುತ್ತದೆ. 

Updated: Jul 9, 2020 , 01:35 PM IST
Sonyಯ ಈ AC ಬಟ್ಟೆಯೊಳಗೆ ಧರಿಸಿ, ಶಕೆಯಿಂದ ಬಚಾವಾಗಿ

ನವದೆಹಲಿ: ತಂತ್ರಜ್ಞಾನದ ಖ್ಯಾತ ಕಂಪನಿ ಸೋನಿ ಸಣ್ಣ ಗಾತ್ರದ ACಯೊಂದನ್ನು ಬಿಡುಗಡೆಗೊಳಿಸಿದ್ದು, ಇದನ್ನು ನೀವು ಧರಿಸಿರುವ ಬಟ್ಟೆಯಲ್ಲಿಯೂ ಕೂಡ ಧರಿಸಬಹುದಾಗಿದ್ದು, ಇದನ್ನು ಧರಿಸಿದವರಿಗೆ ಇದು ಥಂಡಾ ಥಂಡಾ, ಕೂಲ್ ಕೂಲ್ ಆಗಿಡುತ್ತದೆ. ಸದ್ಯ ಈ AC ಸೇಲ್ ಆರಂಭಗೊಂಡಿದ್ದು, ಆಕಾರದಲ್ಲಿ ಇದು ಕಂಪ್ಯೂಟರ್ ಮೌಸ್ ಗಿಂತಲೂ ಕೂಡ ಚಿಕ್ಕದಾಗಿದೆ. ಸೋನಿ ಬಿಡುಗಡೆಗೊಳಿಸಿರುವ ಈ AC ಅನ್ನು ನೀವು ನಿಮ್ಮ ಪಾಕೆಟ್ ನಲ್ಲಿಯೂ ಕೂಡ ಇರಿಸಬಹುದಾಗಿದ್ದು, ನಿಮ್ಮ ಮೊಬೈಲ್ ನಲ್ಲಿರುವ ಅಂಡ್ರಾಯಿಡ್ ಹಾಗೂ ಐಓಎಸ್ ಸ್ಮಾರ್ಟ್ಫೋನ್ ನಲ್ಲಿರುವ ಆಪ್ ಸಹಾಯದಿಂದ ಇದನ್ನು ಆಪರೇಟ್ ಮಾಡಬಹುದಾಗಿದೆ.

ನವದೆಹಲಿ: ಬಿಸಿಲಿನ ಬೇಗೆಯಿಂದ ಪಾರಾಗಲು ಜನ ಏನೆಲ್ಲಾ ಕಸರತ್ತು ಮಾಡುತ್ತಾರೆ. ಹೋದಲ್ಲೆಲ್ಲ ನಮ್ಮ ಜೊತೆಗೆ ನಮ್ಮ AC ಇದ್ದರೆ ಎಷ್ಟೊಂದು ಚೆನ್ನಾಗಿರುತ್ತದೆ ಅಂತ ನಿಮಗೂ ಹಲವಾರು ಬಾರಿ ಅನ್ನಿಸಿರಬಹುದು. ಆದರೆ ಯಾವುದೇ ಒಂದು AC ಅನ್ನು ನೀವು ನಿಮ್ಮ ಶರ್ಟ್ ರೀತಿ ಧರಿಸಬಹುದು ಅಂತ ನೀವು ಎಂದಿಗೂ ಊಹಿಸಿರಲಿಕ್ಕಿಲ್ಲ. ಆದರೆ, ಇಂತಹುದೇ ಒಂದು AC ತಂತ್ರಜ್ಞಾನ ಕ್ಷೇತ್ರದ ಮುಂಚೂಣಿಯಲ್ಲಿರುವ ಕಂಪನಿ ಸೋನಿ ಪರಿಚಯಿಸಿದೆ. ಹೌದು Reon Pocket ಹೆಸರಿನ Sony ಈ ವಿಯರೆಬಲ್ ಏರ್ ಕಂಡಿಷನರ್ ಸೇಲ್ ಕೂಡ ಇದೀಗ ಆರಂಭಗೊಂಡಿದ್ದು, ಕೇಳದ ವರ್ಷ ಬೇಸಿಗೆ ಕಾಲದಲ್ಲಿ ಕಂಪನಿ ಇದನ್ನು ಅನಾವರಣಗೊಳಿಸಿತ್ತು.

ಈ ಪಾಕೆಟ್ ಸೈಜ್ ಎಸಿಯ ಮಾರುಕಟ್ಟೆ ಬೆಲೆಯನ್ನು ಸೋನಿ 13,000 ಜಪಾನಿ ಯೆನ್ ನಿಗದಿಪಡಿಸಿದೆ. ಭಾರತದಲ್ಲಿ ಇದರ ಬೆಲೆ ಸುಮಾರು 9000 ರೂ.ಗಳಷ್ಟು ಇರಲಿದೆ. ಆದರೆ ಸದ್ಯ ಈ ಧರಿಸಬಲ್ಲ ಎಸಿಯನ್ನು ನೀವು ಜಪಾನ್ ನಲ್ಲಿ ಮಾತ್ರ ಖರೀದಿಸಬಹುದಾಗಿದೆ. ಇ-ಕಾಮರ್ಸ್ ಸೈಟ್ ಆಗಿರುವ ಅಮೆಜಾನ್ ಜೊತೆಗೆ ಸೋನಿಯ ಆನ್ಲೈನ್ ಸ್ಟೋರ್ ನಲ್ಲಿಯೂ ಕೂಡ ಈ AC ಲಭ್ಯವಿದೆ. ಆಕಾರದಲ್ಲಿ ತುಂಬಾ ಚಿಕ್ಕದಾಗಿರುವ ಈ ಎಸಿ ನಿಮ್ಮನ್ನು ಬೇಸಿಗೆಯ ಕಾಲದಲ್ಲಿ ತಂಪಿನ ಅನುಭವ ನೀಡಿದೆ.

ಪಾಕೆಟ್ ನಲ್ಲಾಗುತ್ತೆ ಫಿಟ್ 
ನೋಡಲು ಈ ವಿಯರೆಬಲ್ AC ಆಪಲ್ ಕಂಪನಿಯ ಮ್ಯಾಜಿಕ್ ಮೌಸ್ ಆಕಾರದಷ್ಟಿದೆ ಹಾಗೂ ಇದು ಸುಲಭವಾಗಿ ನಿಮ್ಮ ಅಂಗೈನಲ್ಲಿ ಫಿಟ್ ಆಗುತ್ತದೆ. ಆಕಾರದಲ್ಲಿ ತುಂಬಾ ಚಿಕ್ಕದಾಗಿರುವ ಕಾರಣ ಇದನ್ನು ನೀವು ನಿಮ್ಮ ಪಾಕೆಟ್ ನಲ್ಲಿ ಕೂಡ ಇಡಬಹುದು. ಇದರ ಜೊತೆಗೆ ವಿಶೇಷವಾಗಿ ಸಿದ್ಧಪಡಿಸಲಾಗಿರುವ ಟಿ-ಶರ್ಟ್ ನಲ್ಲಿಯೂ ಕೂಡ ನೀವು ಇದನ್ನು ಧರಿದಬಹುದಾಗಿದೆ. 

ಆಪ್ ಸಹಾಯದಿಂದ ನಿಯಂತ್ರಣ
ಈ ಎಸಿಯಲ್ಲಿ ಚಿಕ್ಕದಾಡ ಒಂದು ಫ್ಯಾನ್ ಕೂಡ ನೀಡಲಾಗಿದ್ದು, ಇದು ಧರಿಸಿದವರೇ ಶರೀರದಿಂದ ಬಿಸಿ ಗಾಳಿ ಹೊರಹಾಕುತ್ತದೆ. ಆದ್ರೆ, ಇದು ಧರಿಸಿದವರೇ ಮುಖಕ್ಕೆ ಮಾತ್ರ ತಂಪಿನ ಅನುಭವ ನೀಡುವುದಿಲ್ಲ. ಈ AC ಅನ್ನು ನೀವು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿರುವ ಆಪ್ ಜೊತೆಗೆ ಲಿಂಕ್ ಮಾಡಬಹುದು. ಈ ಆಪ್ ಅಂಡ್ರಾಯಿಡ್ ಹಾಗೂ ಐಓಎಸ್ ಎರಡರಲ್ಲೂ ಲಭ್ಯವಿದೆ. ಈ ಆಪ್ ಸಹಾಯದಿಂದ ನೀವು ಧರಿಸಿರುವ ACಯ ಉಷ್ಣಾಂಶ ಮಟ್ಟವನ್ನು ನಿಯಂತ್ರಿಸಬಹುದಾಗಿದೆ. ಇದರಲ್ಲಿ ನೀವು ಆಟೋಮ್ಯಾಟಿಕ್ ಮೋಡ್ ಅನ್ನು ಮೋಡ್ ಅನ್ನು ಕೂಡ ನೀವು ಸಿಲೆಕ್ಟ್ ಮಾಡಬಹುದು.

ಸೋನಿ ಬಿಡುಗಡೆಗೊಳಿಸಿರುವ ಈ ಚಿಕ್ಕ ಗಾತ್ರದ ACಯ ಬ್ಯಾಟರಿ, ಸಿಂಗಲ್ ಚಾರ್ಚ್ ನಲ್ಲಿ 2 ರಿಂದ 4 ಗಂಟೆ ಬ್ಯಾಕಪ್ ನೀಡುತ್ತದೆ. 0 ನಿಂದ ಹಿಡಿದು ಫುಲ್ ಚಾರ್ಜ್ ಆಗಲು ಇದಕ್ಕೆ 2 ಗಂಟೆ ಕಾಲಾವಕಾಶ ಬೇಕಾಗುತ್ತದೆ. ಚಳಿಗಾಲದಲ್ಲಿ ಇದನ್ನು ನೀವು ಒಂದು ಹೀಟರ್ ಆಗಿ ಕೂಡ ಬಳಸಬಹುದಾಗಿದೆ ಎಂಬುದು ಇದರ ಇನ್ನೊಂದು ವಿಶೇಷತೆ.