ಯಶಸ್ವಿ ವ್ಯಕ್ತಿಗಳು ಅನುಸರಿಸುವ ಮೊದಲ ನಿಯಮವೇ ಸಮಯ ನಿರ್ವಹಣೆ. ಜೀವನದಲ್ಲಿಯೇ ಯಾವುದೇ ಕೆಲಸಕ್ಕೆ ಸಮಯ ಅನ್ನೋದು ತುಂಬಾ ಮುಖ್ಯ.
ಯಶಸ್ವಿ ವ್ಯಕ್ತಿಗಳು ಯಾವಾಗಲೂ ಹಾರ್ಡ್ ವರ್ಕ್ ಮಾಡುವುದಿಲ್ಲ. ಅವರು ಸ್ಮಾರ್ಟ್ ವರ್ಕ್ ಮೂಲಕ ಯಶಸ್ವಿಯಾಗುತ್ತಾರೆ.
ಯಶಸ್ವಿ ವ್ಯಕ್ತಿಗಳು ಯಾವಾಗಲೂ ಹೊಸದನ್ನು ಕಲಿಯಲು ಉತ್ಸುಕತೆ ಹೊಂದಿರುತ್ತಾರೆ. ಹೀಗಾಗಿ ಅವರು ಬಹುಬೇಗನೇ ಯಶಸ್ವಿಯಾಗುತ್ತಾರೆ.
ಯಶಸ್ವಿ ವ್ಯಕ್ತಿಗಳು ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹೀಗಾಗಿ ಅವರು ಪ್ರತಿಯೊಂದರಲ್ಲಿಯೂ ಯಶಸ್ವಿಯಾಗುತ್ತಾರೆ.
ಯಶಸ್ವಿ ವ್ಯಕ್ತಿಗಳು ಯಾವಾಗಲೂ ತಮ್ಮ ತಪ್ಪುಗಳಿಂದ ಕಲಿಯುತ್ತಾರೆ. ಮಾಡಿದ ತಪ್ಪುಗಳನ್ನು ಅವರು ಮತ್ತೆ ಮಾಡುವುದಿಲ್ಲ.
ಯಶಸ್ವಿ ವ್ಯಕ್ತಿಗಳು ಯಾವಾಗಲೂ ಸ್ವಯಂ ಅಧ್ಯಯನ ಮಾಡುತ್ತಾರೆ. ಸ್ವಯಂ ಅಧ್ಯಯನದ ಬಗ್ಗೆ ಗಮನಹರಿಸಿದಾಗ ಮಾತ್ರ ಯಾವುದೇ ವ್ಯಕ್ತಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ.
ಅಂದುಕೊಂಡಿದ್ದು ಆಗದಿದ್ದರೆ ಯಶಸ್ವಿ ವ್ಯಕ್ತಿಗಳು ಜಾಸ್ತಿ ಚಿಂತೆ ಮಾಡುವುದಿಲ್ಲ. ತಮ್ಮ ತಿಳುವಳಿಕೆಗೆ ಒತ್ತು ನೀಡಿ ಆ ವಿಷಯದಲ್ಲಿ ಪ್ರಾವಿಣ್ಯತೆ ಗಳಿಸುತ್ತಾರೆ.