Google Year in Search 2025 : ನಮ್ಮ ನೆರೆಯ ದೇಶ ಪಾಕಿಸ್ತಾನವು ವಿವಿಧ ಕಾರಣಗಳಿಂದ ಯಾವಾಗಲೂ ಸುದ್ದಿಯಲ್ಲಿರುತ್ತದೆ. ರಾಜಕೀಯ ಅಸ್ಥಿರತೆ, ಆರ್ಥಿಕ ಏರಿಳಿತ ಅಥವಾ ಕ್ರಿಕೆಟ್ ಪಂದ್ಯಗಳಾಗಿಂದ ಚರ್ಚೆಯಲ್ಲಿರುತ್ತದೆ. ಪಾಕಿಸ್ತಾನದ ಸಾಮಾನ್ಯ ಜನರು ತಮ್ಮ ದೈನಂದಿನ ಜೀವನದಲ್ಲಿ ಇಂಟರ್ನೆಟ್‌ನಲ್ಲಿ, ವಿಶೇಷವಾಗಿ ಗೂಗಲ್‌ನಲ್ಲಿ ಏನನ್ನು ಹೆಚ್ಚು ಹುಡುಕುತ್ತಾರೆ ಅಂತ ನಿಮಗೆ ಗೊತ್ತೆ?
ಕ್ರಿಕೆಟ್ ಕ್ರೇಜ್ : ಭಾರತದಂತೆಯೇ ಪಾಕಿಸ್ತಾನದಲ್ಲೂ ಕ್ರಿಕೆಟ್ ಜ್ವರ ಜೋರಾಗಿದೆ. 'ಕ್ರಿಕೆಟ್' ವಿಭಾಗದಲ್ಲಿ, ಜನರು ಪಾಕಿಸ್ತಾನ vs ದಕ್ಷಿಣ ಆಫ್ರಿಕಾ ಪಂದ್ಯವನ್ನು ಹೆಚ್ಚು ಹುಡುಕಿದ್ದಾರೆ. ಟಾಪ್ 5 ರಲ್ಲಿ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್), ಏಷ್ಯಾ ಕಪ್, ಪಾಕಿಸ್ತಾನ vs ಭಾರತ ಮತ್ತು ಪಾಕಿಸ್ತಾನ vs ನ್ಯೂಜಿಲೆಂಡ್‌ನಂತಹ ಪ್ರಮುಖ ಪಂದ್ಯಾವಳಿಗಳು ಮತ್ತು ಪಂದ್ಯಗಳು ಸೇರಿವೆ.
ಇದನ್ನೂ ಓದಿ: ಭಾರತೀಯರಿಗೆ ಬಿಗ್ ಶಾಕ್ ಕೊಟ್ಟ ಅಮೆರಿಕಾ! ವಿದೇಶಿಗರ ಮೇಲೆ ಹಿಡಿತ ಸಾಧಿಸಲು ಮಾಸ್ಟರ್ ಪ್ಲ್ಯಾನ್!
ತಂತ್ರಜ್ಞಾನ: ಪಾಕಿಸ್ತಾನದಲ್ಲಿ ಹಣದುಬ್ಬರ ಮತ್ತು ಆರ್ಥಿಕ ಸಮಸ್ಯೆಗಳ ಹೊರತಾಗಿಯೂ, ಇಲ್ಲಿನ ಜನ ತಂತ್ರಜ್ಞಾನದ ವಿಷಯದಲ್ಲಿ ತಮ್ಮನ್ನು ತಾವು ಅಭಿವೃದ್ಧಿ ಪಡಿಸಿಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಅವರು ಗೂಗಲ್‌ನಲ್ಲಿ ಹುಡುಕಿದ ವಿಷಯಗಳು. 'ತಂತ್ರಜ್ಞಾನ' ವಿಭಾಗದಲ್ಲಿ, ಜನರು ಗೂಗಲ್‌ನ ಅತ್ಯಂತ ಮಹತ್ವಾಕಾಂಕ್ಷೆಯ ಉತ್ಪನ್ನಗಳಲ್ಲಿ ಒಂದಾದ ಜೆಮಿನಿಯನ್ನು ಹೆಚ್ಚು ಹುಡುಕಿದ್ದಾರೆ.
ಟಾಪ್ ಟ್ರೆಂಡ್: ಇದಲ್ಲದೆ, ಜನರು DeepSeek, Google AI ಸ್ಟುಡಿಯೋ, myco ಮತ್ತು On4t ನಂತಹ ತಂತ್ರಜ್ಞಾನ ಸಂಬಂಧಿತ ವಿಷಯಗಳನ್ನು ಹುಡುಕಿದ್ದಾರೆ. ಆಶ್ಚರ್ಯಕರವಾಗಿ, ಟಾಪ್ ಹುಡುಕಾಟಗಳಲ್ಲಿ ಐಫೋನ್ 17 ಸೇರಿದೆ. ದುಬಾರಿ ವಸ್ತುಗಳ ಹೊರತಾಗಿಯೂ, ಜನರು ಭವಿಷ್ಯದ ತಂತ್ರಜ್ಞಾನದ ಬಗ್ಗೆ ಮಾಹಿತಿಯನ್ನು ಹುಡುಕುತ್ತಿದ್ದಾರೆ.
ಇದನ್ನೂ ಓದಿ:ಕೋಳಿಯನ್ನು ರಾಷ್ಟ್ರೀಯ ಪಕ್ಷಿಯನ್ನಾಗಿ ಘೋಷಿಸಿದ ದೇಶ ಯಾವುದು ಗೊತ್ತಾ?
ಇ-ಚಲನ್ ಪರಿಶೀಲಿಸುವುದು ಹೇಗೆ? ಡಿಲೀಟ್ ಆದ ಇನ್‌ಸ್ಟಾಗ್ರಾಮ್ ಸಂದೇಶಗಳನ್ನು ಹೇಗೆ ನೋಡುವುದು ಹೇಗೆ..? ಕ್ರಿಪ್ಟೋ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಹೇಗೆ? ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಹೇಗೆ..? ಹೀಗೆ ಹಲವಾರು ವಿಷಯಗಳ ಕುರಿತು ಸರ್ಚ್ ಮಾಡಿದ್ದಾರೆ.









