)
ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರು ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.ಆದರೆ ಅಚ್ಚರಿ ಎನ್ನುವಂತೆ ಈ ಪ್ರಶಸ್ತಿಯನ್ನು ಅವರು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಅರ್ಪಿಸಿದ್ದಾರೆ
'ಇಂದು ನಾವು ವಿಜಯದ ಹೊಸ್ತಿಲಲ್ಲಿದ್ದೇವೆ, ಮತ್ತು ಈಗ ಎಂದಿಗಿಂತಲೂ ಹೆಚ್ಚಾಗಿ, ನಮಗೆ ಅಧ್ಯಕ್ಷ ಟ್ರಂಪ್, ಅಮೇರಿಕನ್ ಜನರು, ಲ್ಯಾಟಿನ್ ಅಮೇರಿಕನ್ ದೇಶಗಳು ಮತ್ತು ವಿಶ್ವದ ಪ್ರಜಾಪ್ರಭುತ್ವ ಶಕ್ತಿಗಳ ಬೆಂಬಲ ಬೇಕು. ಅವರು ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕೆ ನಮ್ಮ ಅತ್ಯುತ್ತಮ ಭರವಸೆ' ಎಂದು ಮಚಾದೊ ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ.'ನಾನು ಈ ನೊಬೆಲ್ ಪ್ರಶಸ್ತಿಯನ್ನು ವೆನೆಜುವೆಲಾದ ತುಳಿತಕ್ಕೊಳಗಾದ ಜನರಿಗೆ ಮತ್ತು ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಅಧ್ಯಕ್ಷ ಟ್ರಂಪ್ಗೆ ಅರ್ಪಿಸುತ್ತೇನೆ' ಎಂದು ಅವರು ಹೇಳಿದರು.
This recognition of the struggle of all Venezuelans is a boost to conclude our task: to conquer Freedom.
We are on the threshold of victory and today, more than ever, we count on President Trump, the people of the United States, the peoples of Latin America, and the democratic…
— María Corina Machado (@MariaCorinaYA) October 10, 2025
ಯಾರು ಈ ಮಾರಿಯಾ ಕೊರಿನಾ ಮಚಾದೊ?
ನಿಕೋಲಸ್ ಮಡುರೊ ಅವರ ಸರ್ವಾಧಿಕಾರದ ವಿರುದ್ಧ ಬಹಿರಂಗವಾಗಿ ಮಾತನಾಡಿದ ಮೊದಲ ಮಹಿಳೆಯರಲ್ಲಿ ಮಾರಿಯಾ ಕೊರಿನಾ ಮಚಾದೊ ಸಹ ಒಬ್ಬರು. 2024 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅವರನ್ನು ನಿಷೇಧಿಸಲಾಯಿತು, ಆದರೂ ಚುನಾವಣೆಗಳನ್ನು ಅಂತರರಾಷ್ಟ್ರೀಯವಾಗಿ ನ್ಯಾಯಯುತ' ಎಂದು ಪರಿಗಣಿಸಿಲ್ಲ ಅಂದಿನಿಂದ ಮಚಾದೊ ಭೂಗತರಾಗಿದ್ದಾರೆ, ಆದರೆ ಅವರ ಧ್ವನಿ ಸಾಮಾಜಿಕ ಮಾಧ್ಯಮ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರತಿಧ್ವನಿಸುತ್ತಲೇ ಇದೆ.
ನೊಬೆಲ್ ಸಮಿತಿಯು ಮಚಾದೊ ಅವರು ಸರ್ವಾಧಿಕಾರದ ಬೆಳೆಯುತ್ತಿರುವ ಕತ್ತಲೆಯ ನಡುವೆ ಪ್ರಜಾಪ್ರಭುತ್ವದ ಜ್ವಾಲೆಯನ್ನು ಉರಿಯುವಂತೆ ಮಾಡಿದ್ದಾರೆ. ಅವರ ಧೈರ್ಯಕ್ಕೆ ನಮಸ್ಕರಿಸುತ್ತಾ ಅವರ ಪ್ರಯತ್ನಗಳು ವೆನೆಜುವೆಲಾದಲ್ಲಿ ಮಾತ್ರವಲ್ಲದೆ ಲ್ಯಾಟಿನ್ ಅಮೆರಿಕದಾದ್ಯಂತ ಪ್ರಜಾಪ್ರಭುತ್ವದ ರಕ್ಷಣೆಗೆ ಸ್ಫೂರ್ತಿಯಾಗಿದೆ' ಎಂದು ಸಮಿತಿ ಹೇಳಿದೆ.
ಇದೆ ವೇಳೆ ಟ್ರಂಪ್ ಗೆ ನೊಬೆಲ್ ಪ್ರಶಸ್ತಿ ಸಿಗದಿರುವ ಬಗ್ಗೆ ಪ್ರರಿಕ್ರಿಯಿಸಿರುವ ಶ್ವೇತಭವನದ ವಕ್ತಾರರು 'ನೊಬೆಲ್ ಸಮಿತಿಯು ಶಾಂತಿಗಿಂತ ರಾಜಕೀಯಕ್ಕೆ ಆದ್ಯತೆ ನೀಡುತ್ತದೆ ಎಂದು ಟೀಕಿಸಿದ್ದಾರೆ.