ಲಂಡನ್ ನಲ್ಲಿ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಬಂಧನ

ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಅವರನ್ನು ಗುರುವಾರ ಲಂಡನ್ನಲ್ಲಿ ಬ್ರಿಟಿಷ್ ಪೊಲೀಸರು ಬಂಧಿಸಿದ್ದಾರೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ  ವರದಿ ಮಾಡಿದೆ. ದಕ್ಷಿಣ ಅಮೆರಿಕಾವು ಅವರಿಗೆ ನೀಡಿದ ಆಶ್ರಯವನ್ನು ಹಿಂತೆಗೆದುಕೊಂಡಿದ್ದರಿಂದ ಲಂಡನ್ನಿನ ಈಕ್ವೆಡಾರ್ ರಾಯಭಾರಿ ಕಚೇರಿಯಿಂದ ಅಸ್ಸಾಂಜೆರನ್ನು ಬಂಧಿಸಲಾಗಿದೆ ಎನ್ನಲಾಗಿದೆ.

Last Updated : Apr 11, 2019, 05:28 PM IST
ಲಂಡನ್ ನಲ್ಲಿ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಬಂಧನ  title=
file photo

ನವದೆಹಲಿ: ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಅವರನ್ನು ಗುರುವಾರ ಲಂಡನ್ನಲ್ಲಿ ಬ್ರಿಟಿಷ್ ಪೊಲೀಸರು ಬಂಧಿಸಿದ್ದಾರೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ  ವರದಿ ಮಾಡಿದೆ. ದಕ್ಷಿಣ ಅಮೆರಿಕಾವು ಅವರಿಗೆ ನೀಡಿದ ಆಶ್ರಯವನ್ನು ಹಿಂತೆಗೆದುಕೊಂಡಿದ್ದರಿಂದ ಲಂಡನ್ನಿನ ಈಕ್ವೆಡಾರ್ ರಾಯಭಾರಿ ಕಚೇರಿಯಿಂದ ಅಸ್ಸಾಂಜೆರನ್ನು ಬಂಧಿಸಲಾಗಿದೆ ಎನ್ನಲಾಗಿದೆ.

"ಅವರು (ಅಸ್ಸಾಂಜೆ) ಕೇಂದ್ರ ಲಂಡನ್ ಪೊಲೀಸ್ ಠಾಣೆಯಲ್ಲಿ ಬಂಧನಕ್ಕೊಳಗಾದರು, ಅಲ್ಲಿ ಅವರು ಸಾಧ್ಯವಾದಷ್ಟು ಬೇಗ ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗುವ ಮೊದಲು ಇಲ್ಲಿಯೇ  ಉಳಿಯುತ್ತಾರೆ" ಎಂದು ಮೆಟ್ರೊಪಾಲಿಟನ್ ಪೋಲಿಸ್ ರು ಹೇಳಿಕೆ ನೀಡಿದ್ದಾರೆ.ಅಸ್ಸಾಂಜೆಯವರು ಜೂನ್ 29, 2012 ರಂದು ನ್ಯಾಯಾಲಯಕ್ಕೆ ಶರಣಾಗಲು ವಿಫಲವಾದ ಹಿನ್ನಲೆಯಲ್ಲಿ ಈಗ ಅದೇ ನ್ಯಾಯಾಲಯವು ನೀಡಿದ ವಾರಂಟ್ ನಲ್ಲಿ ಅವರನ್ನು ಬಂಧಿಸಲಾಯಿತು ಎನ್ನಲಾಗಿದೆ.

(ಮೆಟ್ ಪೋಲಿಸ್ ಸರ್ವೀಸ್) ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ವಾರಂಟ್ ನ್ನು ಕಾರ್ಯಗೊಳಿಸುವ ಕರ್ತವ್ಯ ಹೊಂದಿದೆ ಯಾವಾಗ ಇಕ್ವೆಡಾರ್ ಸರ್ಕಾರವು ಅವರಿಗೆ ನೀಡಿರುವ ಆಶ್ರಯವನ್ನು ಹಿಂಪಡೆಯಿತೋ ಆಗ ರಾಯಭಾರಿಯ ಕಚೇರಿಗೆ ತಮಗೆ ಬಂಧಿಸಲು ಆಹ್ವಾನ ನೀಡಿತು ಎನ್ನಲಾಗಿದೆ.

2012 ರಲ್ಲಿ ಲೈಂಗಿಕ ದೌರ್ಜ್ಯನ್ಯದ ಭಾಗವಾಗಿ ಸ್ವೀಡನ್ ನ ಅಧಿಕಾರಿಗಳು ಅಸ್ಸಾಂಜೆಯವರನ್ನು ತನಿಖೆ ನಡೆಸಲು ಸಿದ್ಧತೆ ನಡೆಸಿದ್ದರು.ಆ ಸಂದರ್ಭದಲ್ಲಿ ಅವರು ಇದರಿಂದ ತಪ್ಪಿಸಿಕೊಳ್ಳಲು  ಈಕ್ವೆಡಾರ್ನ ಲಂಡನ್ನಿನ ರಾಯಭಾರ ಕಚೇರಿಯಲ್ಲಿ ಅಸ್ಸಾಂಜೆಯವರು ಆಶ್ರಯ ಪಡೆದುಕೊಂಡಿದ್ದರು.

Trending News