ಗಂಡನಿಗೆ ಗುಡ್ ಬೈ ಹೇಳಿ, ಕೈತುಂಬ ಸಂಬಳ ಬರುತ್ತಿದ್ದ ಕೆಲಸ ಬಿಟ್ಟು 45KG ತೂಕ ಇಳಿಸಿದ ಮಹಿಳೆ!!

US women: 2021ರಲ್ಲಿ ಸ್ಟೋವರ್ಸ್ ತನ್ನ ಪತಿಯಿಂದ ದೂರವಾದರು. ಕೈತುಂಬಾ ಸಂಬಳದ ಕೆಲಸಕ್ಕೂ ವಿದಾಯ ಹೇಳಿದ್ದರು. ಬಳಿಕ ಅವರು ಸ್ವಂತ ವ್ಯವಹಾರವನ್ನು ಆರಂಭಿಸಿದ್ದರು. ದೇಹದ ತೂಕ ಇಳಿಸಿಕೊಳ್ಳಲು ರೋಲರ್-ಸ್ಕೇಟಿಂಗ್‌ ಮೊರೆ ಹೋಗಿದ್ದರಂತೆ.

Written by - Puttaraj K Alur | Last Updated : Mar 30, 2025, 02:19 PM IST
  • ಪತಿಗೆ ಗುಡ್‌ ಬೈ ಹೇಳಿ, ಕೈತುಂಬಾ ಸಂಬಳ ಬರುತ್ತಿದ್ದ ಕೆಲಸವನ್ನು ಬಿಟ್ಟ ಅಮೆರಿಕದ ಮಹಿಳೆ
  • 136 ಕೆಜಿಯಷ್ಟಿದ್ದ ಮಹಿಳೆ ಬರೋಬ್ಬರಿ 45 ಕೆಜಿ ತೂಕ ಇಳಿಸಿಕೊಂಡ ಸ್ಟೋರಿ ಇದು
  • ಜೀವನಶೈಲಿ ಮತ್ತು ಆಹಾರ ಪದ್ಧತಿ ಸುಧಾರಿಸಿಕೊಂಡು ತೂಕ ಇಳಿಸಿಕೊಂಡು ಸ್ಲೀಮ್‌ ಆಗಿದ್ದಾರೆ
ಗಂಡನಿಗೆ ಗುಡ್ ಬೈ ಹೇಳಿ, ಕೈತುಂಬ ಸಂಬಳ ಬರುತ್ತಿದ್ದ ಕೆಲಸ ಬಿಟ್ಟು 45KG ತೂಕ ಇಳಿಸಿದ ಮಹಿಳೆ!!

Weight loss journey: ಪತಿಗೆ ಗುಡ್‌ ಬೈ ಹೇಳಿ, ಕೈತುಂಬಾ ಸಂಬಳ ಬರುತ್ತಿದ್ದ ಕೆಲಸವನ್ನು ಬಿಟ್ಟ ಬಳಿಕ ಅಮೆರಿಕದ ಮಹಿಳೆಯೊಬ್ಬರು ಬರೋಬ್ಬರಿ 45 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ. ತಾವು ತೂಕ ಇಳಿಸಿಕೊಂಡಿರುವ ಜರ್ನಿಯ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. 2020ರವರೆಗೂ ರೋಡ್‌ ಐಲೆಂಡ್‌ನ ಕೋನಿ ಸ್ಟೋವರ್ಸ್‌ ಅವರು ಪತಿ ಹಾಗೂ ಮಗಳೊಂದಿಗೆ ಚೆನ್ನಾಗಿಯೇ ಜೀವನ ನಡೆಸುತ್ತಿದ್ದರು. ಕೈತುಂಬಾ ಸಂಬಳ ಪಡೆಯುವ ಕೆಲಸದಲ್ಲೂ ಇದ್ದರು. ಸುಂದರವಾದ ಮನೆ ಕೂಡ ಇತ್ತು.

Add Zee News as a Preferred Source

ಕಾಲಾನಂತರ ಅವರು ಸಂಸಾರ ಮತ್ತು ಕೆಲಸದ ಬಗ್ಗೆ ಅತೃಪ್ತಿ ಹೊಂದಲು ಶುರುಮಾಡಿದ್ದರು. ಮಾನಸಿಕ ನೆಮ್ಮದಿಗಾಗಿ ಮದ್ಯದ ಚಟಕ್ಕೆ ಬಿದ್ದಿದ್ದರು. ಕೆಟ್ಟ ಆಹಾರ ಪದ್ಧತಿಯನ್ನೂ ರೂಢಿಸಿಕೊಂಡಿದ್ದರು. ಇದು ಅವರ ದೇಹದ ತೂಕ ಹೆಚ್ಚಾಗಲು ಕಾರಣವಾಗಿತ್ತು. ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಅವರ ತೂಕ ಬರೋಬ್ಬರಿ 136 ಕೆಜಿಗೆ ಹೆಚ್ಚಿತ್ತು. ಇದರಿಂದ ಅವರ ಆರೋಗ್ಯದ ಮೇಲೂ ಪರಿಣಾಮ ಉಂಟಾಗಿತ್ತು.

ಇದನ್ನೂ ಓದಿ: ತಲೆ ಕತ್ತರಿಸಿ ಹಾಕಿದರೂ 18 ತಿಂಗಳು ಬದುಕಿದ ಕೋಳಿ..! ಇದು ಹೇಗೆ ಸಾಧ್ಯ ಗೊತ್ತೆ..?

2021ರಲ್ಲಿ ಸ್ಟೋವರ್ಸ್ ತನ್ನ ಪತಿಯಿಂದ ದೂರವಾದರು. ಕೈತುಂಬಾ ಸಂಬಳದ ಕೆಲಸಕ್ಕೂ ವಿದಾಯ ಹೇಳಿದ್ದರು. ಬಳಿಕ ಅವರು ಸ್ವಂತ ವ್ಯವಹಾರವನ್ನು ಆರಂಭಿಸಿದ್ದರು. ದೇಹದ ತೂಕ ಇಳಿಸಿಕೊಳ್ಳಲು ರೋಲರ್-ಸ್ಕೇಟಿಂಗ್‌ ಮೊರೆ ಹೋಗಿದ್ದರಂತೆ.

ನಾಲ್ಕು ವರ್ಷಗಳ ಹಿಂದೆ ನನ್ನ ಜೀವನ ಹೊರಗಿನಿಂದ ಅಷ್ಟೇ ಚೆನ್ನಾಗಿ ಕಾಣುತ್ತಿತ್ತು. ನನಗೆ ಉತ್ತಮ ಸಂಬಳದ ಕೆಲಸ, ಮದುವೆ, ಸುಂದರ ಮಗಳು, ಮನೆ ಇವೆಲ್ಲಾ ಇತ್ತು. ಆದರೆ ನಾನು ಜಂಜಾಟಕ್ಕೆ ಸಿಲುಕಿದಂತೆ ಭಾಸವಾಗಿತ್ತು. ಕೊನೆಗೆ ನಾನು ಬದಲಾಗಬೇಕೆಂದು ನಿರ್ಧಾರ ತೆಗೆದುಕೊಂಡೆ. ಪತಿಯನ್ನು ತೊರೆಯುವುದು ಕಷ್ಟದ ಕೆಲಸವಾಗಿತ್ತು. ಆದರೂ ನನ್ನ ಜೀವನದಲ್ಲಿ ಬದಲಾವಣೆ ಬೇಕು ಅಂತಾ ದೃಢ ನಿರ್ಧಾರ ತೆಗೆದುಕೊಂಡೆ. ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ತೊಡಗಿಸಿಕೊಂಡೆ ಎಂದಿದ್ದಾರೆ.

ಇದನ್ನೂ ಓದಿ:  ಗಂಡಿನ ಸಂಪರ್ಕವಿಲ್ಲದೆ, Google ಸಹಾಯದಿಂದ ಗರ್ಭಿಣಿಯಾದ 18 ವರ್ಷದ ಹುಡುಗಿ..! ಇದು ಹೇಗೆ ಸಾಧ್ಯ..? 

ದೇಹದ ತೂಕ ಇಳಿಸಿಕೊಳ್ಳಲು ರೋಲರ್‌-ಸ್ಕೇಟಿಂಗ್‌ ಆಯ್ಕೆ ಮಾಡಿಕೊಂಡೆ. ಬಳಿಕ ನಾನು ಅಂದುಕೊಂಡಂತೆ 45 ಕೆಜಿಯಷ್ಟು ತೂಕವನ್ನು ಕಳೆದುಕೊಂಡು ಸ್ಲೀಮ್‌ ಆದೆ ಅಂತಾ ಸ್ಟೋವರ್ಸ್‌ ಹೇಳಿದ್ದಾರೆ. ಅವರ ಈ ಸ್ಟೋರಿ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News