)
women marriage lover dead body: ಜಾತಿ & ಧರ್ಮದ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಜಗಳ ಹೆಚ್ಚುತ್ತಿದೆ,ಅದರಲ್ಲೂ ಪ್ರೀತಿ ಒಪ್ಪುವ ಮೊದಲು ಮನೆಯ ಮಂದಿ ಜಾತಿ ಕೇಳುವುದು ವಾಡಿಕೆ ಕೂಡ ಅಗಿ ಹೋಗಿದೆ. ಜಾತಿ ಮೀರಿ ಬೇರೆ ಜಾತಿ ಹುಡುಗನ ಜೊತೆಗೆ ಅಥವಾ ಹುಡುಗಿ ಜೊತೆಗೆ ಮದುವೆ ಮಾಡಿಕೊಂಡಿದ್ದೇ ಆದರೆ ಇಡೀ ಕುಟುಂಬ ಸೇರಿ ರಿವೇಂಜ್ ತೆಗೆದುಕೊಳ್ಳುತ್ತದೆ.ಇಂತಹ ಸಾಲು ಸಾಲು ಆಘಾತಕಾರಿ ಘಟನೆಗಳು ಮನಸ್ಸಿನಿಂದ ಮಾಸಿ ಹೋಗುವ ಮೊದಲೇ, ಜಾತಿ ಕಾರಣಕ್ಕೆ ಪ್ರಿಯಕರನ ಕೊಲೆಗೈಯಲಾಗಿದೆ..
ಭಾರತದ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದು & ಭಾರತ ಈಗ ಆರ್ಥಿಕ ಅಭಿವೃದ್ಧಿಯಲ್ಲಿ ಅಮೆರಿಕ ರೀತಿಯ ದೊಡ್ಡ ದೊಡ್ಡ ದೇಶಗಳಿಗೇ ಸವಾಲು ಹಾಕುವ ಹಂತಕ್ಕೆ ಬೆಳೆದು ನಿಂತಿದೆ. ಎಐ, ಡಿಜಿಟಲ್ ವರ್ಲ್ಡ್ ಹೀಗೆ ಭಾರತ ಆಧುನಿಕ ಕಾಲಕ್ಕೆ ತಕ್ಕಂತೆ ಅಭಿವೃದ್ಧಿ ಹೊಂದುತ್ತಾ ಇದೆ. ಭಾರತ ಆಧುನಿಕ ಕಾಲದಲ್ಲಿ ಬೆಳೆಯುತ್ತಿದ್ದರೂ ಜಾತಿ & ಇತರ ವಿಚಾರಗಳು ಸಮಾಜವನ್ನು ಕಾಡುತ್ತಲೇ ಇವೆ. ಇಂತಹ ಸಮಯದಲ್ಲೇ ಕರ್ನಾಟಕ ಪಕ್ಕದ ರಾಜ್ಯದಲ್ಲಿ ಜಾತಿ ಕಾರಣಕ್ಕೆ ಪ್ರಿಯಕರನ ಜೀವವನ್ನೇ ತೆಗೆದಿರುವ ಆರೋಪ ಕೇಳಿ ಬಂದಿತ್ತು. ಆದರೆ ತನ್ನ ಲವರ್ ಜೀವ ಹೋಗಿದ್ದರೂ ಯುವತಿ ಮಾಡಿದ್ದೇನು ಗೊತ್ತಾ?
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕೊಲೆಯಾದ ಯುವಕ ಸಕ್ಷಮ್ ಯುವಕ ಯುವತಿಯ ಸಹೋದರನ ಸ್ನೇಹಿತನಾಗಿದ್ದ, ಸ್ನೇಹಿತನ ಮನೆಗೆ ಬಂದು ಹೋಗುತ್ತಿದ್ದ ವೇಳೆ ಸಕ್ಷಮ್ ಮತ್ತು ಯುವತಿ ಅಂಚಲ್ ಜೊತೆ ಪ್ರೀತಿ ಚಿಗುರಿತ್ತು. ಇವರಿಬ್ಬರ ಪ್ರೀತಿಯ ವಿಚಾರ ಯುವತಿಯ ಮನೆಯವರಿಗೆ ಗೊತ್ತಾಗಿ, ಯುವಕನಿಗೆ ಆಕೆಯ ಜೊತೆ ಮಾತನಾಡದಂತೆ ವಾರ್ನಿಂಗ್ ಮಾಡಿದ್ದರು.
ಯುವತಿಗೂ ಕೂಡ ಅವನು ಬೇರೆ ಜಾತಿಯವನು, ಆತನನ್ನ ಮದುವೆಯಾಗಬೇಡ ಎಂದು ವಿರೋಧ ವ್ಯಕ್ತಪಡಿಸಿದ್ದರು. ಮನೆಯವರು ಎಚ್ಚರಿಕೆ ನೀಡಿದ್ರೂ ಕೂಡ ಯುವಕ ಮತ್ತು ಯುವತಿ ತಮ್ಮ ಪ್ರೀತಿಯನ್ನ ಮುಂದುವರಿಸಿದ್ದರು, ಮಾತನಾಡುವುದು, ಭೇಟಿಯಾಗುವುದನ್ನ ಮುಂದುವರಿಸಿದ್ದರು. ಇದರಿಂದ ಸಿಟ್ಟಿಗೆದ್ದ ಯುವತಿಯ ಪೋಷಕರು ಕಳೆದ ಗುರುವಾರ ಸಂಜೆ ಯುವಕನನ್ನ ನಿರ್ಜನ ಪ್ರದೇಶಕ್ಕೆ ಕರೆತಂದು ಚೆನ್ನಾಗಿ ಥಳಿಸಿ, ಗುಂಡು ಹಾರಿಸಿ ಬಳಿಕ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಇನ್ನು, ಪ್ರೀತಿಸಿದ ಯುವಕ ಕೊಲೆಯಾಗಿದ್ದಾನೆ ಎಂದು ತಿಳಿದ ಯುವತಿ, ಅಂತ್ಯಕ್ರಿಯೆ ನಡೆಯುತ್ತಿರುವ ವೇಳೆ, ಮೃತದೇಹದ ಮುಂದೆ ತನ್ನ ಹಣೆಯ ಮೇಲೆ ಅರಿಶಿಣ ಕುಂಕುಮ ಇಟ್ಟುಕೊಂಡು ಮದುವೆಯಾಗಿದ್ದಾಳೆ ಅಷ್ಟೇ ಅಲ್ಲದೇ ಇನ್ಮುಂದೆ ಯುವಕನ ಮನೆಯಲ್ಲೇ ಜೀವನ ಮುಂದುವರಿಸುತ್ತೇನೆ ಎಂದು ಯುವತಿ ನಿರ್ಧರಿಸಿದ್ದಾಳೆ.
ನಾನು ಮತ್ತು ಸಕ್ಷಮ್ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದೇವು, ಆದ್ರೆ ನಮ್ಮ ಪ್ರೀತಿಗೆ ನನ್ನ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರು, ನನ್ನ ತಂದೆ ಗಜಾನನ್ ಮಾಮಿದ್ವರ್ ಮತ್ತು ನನ್ನ ಇಬ್ಬರು ಸಹೋದರರಾದ ಹಿಮೇಶ್ ಮಾಮಿದ್ವರ್ ಮತ್ತು ಸಾಹಿಲ್ ಮಾಮಿದ್ವರ್ ಸೇರಿ ಸಕ್ಷಮ್ನನ್ನ ಕೊಲೆ ಮಾಡಿದ್ದಾರೆ. ತನ್ನ ತಂದೆ ಹಾಗೂ ಸಹೋದರರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಕ್ರೋಶ ಹೊರಹಾಕಿದಳು. ಯುವತಿ ಮೃತದೇಹದ ಜೊತೆ ಮದುವೆಯಾಗುವ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.