Word Of The Year: ಜನರ ಬಾಯಿಯಿಂದ ಉಚ್ಚಾರಣೆದ ಈ ಶಬ್ದಕ್ಕೆ 'ವರ್ಷದ ಶಬ್ದ' ಪಟ್ಟ

Word Of The Year - 'ಆಕ್ಸ್‌ಫರ್ಡ್' ಇಂಗ್ಲಿಷ್ ನಿಘಂಟನ್ನು ಪ್ರಕಟಿಸುವ ಜನರು 'ವ್ಯಾಕ್ಸ್' ಅನ್ನು ವರ್ಷದ ಪದವಾಗಿ ಆಯ್ಕೆ ಮಾಡಿದ್ದಾರೆ. ಇದೇ ವೇಳೆ 'ಮೆರಿಯಮ್-ವೆಬ್‌ಸ್ಟರ್' ಕಳೆದ ವರ್ಷ 'ಸಾಂಕ್ರಾಮಿಕ' (Pandemic)ಪದವನ್ನು ತನ್ನ ಆನ್‌ಲೈನ್ ಸೈಟ್‌ನಲ್ಲಿ ಹೆಚ್ಚು ಹುಡುಕಲಾಗಿದೆ ಎಂದು ಹೇಳಿ ಅದನ್ನು ಆಯ್ಕೆ ಮಾಡಿದೆ.

Written by - Nitin Tabib | Last Updated : Nov 30, 2021, 02:09 PM IST
  • 2021ರ ವರ್ಷದ ಪದವಾಗಿ ವ್ಯಾಕ್ಸಿನ್ ಆಯ್ಕೆ.
  • ಪ್ಯಾನ್ಡೆಮಿಕ್ ಬಳಿಕ ವ್ಯಾಕ್ಸಿನ್ ಬಳಕೆ.
  • ಮರಿಯಂ ವೆಬ್ ಸ್ಟರ್ ನಿಘಂಟುವಿನಿಂದ ಘೋಷಣೆ
Word Of The Year: ಜನರ ಬಾಯಿಯಿಂದ ಉಚ್ಚಾರಣೆದ ಈ ಶಬ್ದಕ್ಕೆ 'ವರ್ಷದ ಶಬ್ದ' ಪಟ್ಟ title=
Word Of The Year (File Photo)

ನ್ಯೂಯಾರ್ಕ್: Word Of The Year - ಕರೋನಾ ಯುಗದಲ್ಲಿ ನಮಗೆಲ್ಲರಿಗೂ ಹೆಚ್ಚು ಬೇಕಾಗಿರುವ ಸಂಗತಿ ಎಂದರೆ ಅದು  ಕರೋನಾ ವಿರುದ್ಧ ಹೋರಾಡುವ ಲಸಿಕೆ (Vaccine) . ಆದರೆ ಇದೀಗ ವಿಶ್ವದ ಎಲ್ಲಾ ದೇಶಗಳಲ್ಲಿ ಅನೇಕ ಲಸಿಕೆಗಳನ್ನು ಸಿದ್ಧಪಡಿಸಲಾಗಿದೆ ಮತ್ತು ಜೀವಗಳನ್ನು ಉಳಿಸುವ ಕೆಲಸ ನಡೆಯುತ್ತಿದೆ. 2021 ರ ವರ್ಷಕ್ಕೆ, 'ಮೆರಿಯಮ್ ವೆಬ್‌ಸ್ಟರ್' (Merriam Webster) ನಿಘಂಟು 'ಲಸಿಕೆ' ಅನ್ನು ವರ್ಷದ ಪದವಾಗಿ (Word of the Year) ಆಯ್ಕೆ ಮಾಡಿದೆ.

ಪ್ರತಿಯೊಬ್ಬರ ಜೀವನದ ಮೇಲೆ ಪರಿಣಾಮ
'ಮೆರಿಯಮ್ ವೆಬ್‌ಸ್ಟರ್' ನ ಸಂಪಾದಕ ಪೀಟರ್ ಸೊಕೊಲೊಸ್ಕಿ, '2021 ರಲ್ಲಿ, ಈ ಪದವು ನಮ್ಮೆಲ್ಲರ ಜೀವನದಲ್ಲಿ ಹೆಚ್ಚಾಗಿ ಬಳಕೆಯಾಗಿದೆ. ಇದು ಎರಡು ವಿಭಿನ್ನ ಕಥೆಗಳನ್ನು ಹೇಳುತ್ತದೆ. ಮೊದಲನೆಯ ಕಥೆ ವಿಜ್ಞಾನಕ್ಕೆ ಸಂಬಂಧಿಸಿದ್ದಾಗಿದ್ದು, ಇದು ಲಸಿಕೆ ತಯಾರಿಕೆಯ ಗಮನಾರ್ಹ ವೇಗವನ್ನು ವಿವರಿಸುತ್ತದೆ. ಇದರ ಜೊತೆಗೆ ನೀತಿ, ರಾಜಕೀಯ ಮತ್ತು ರಾಜಕೀಯ ಸಂಬಂಧದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದು ಎರಡನೆಯ ದೊಡ್ಡ ಕಥೆಗಳನ್ನು ಹೇಳುವ ಒಂದು ಪದವಾಗಿದೆ ಎಂದಿದ್ದಾರೆ.

'ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟನ್ನು  (Oxford English Dictionary) ' ಪ್ರಕಟಿಸಿದ ಜನರು 'ವ್ಯಾಕ್ಸ್' ಅನ್ನು ವರ್ಷದ ಪದವಾಗಿ ಆಯ್ಕೆ ಮಾಡಿದ್ದರೆ. ಇದೇ ವೇಳೆ  'ಮೆರಿಯಮ್-ವೆಬ್‌ಸ್ಟರ್' ಕಳೆದ ವರ್ಷ ತನ್ನ ಆನ್‌ಲೈನ್ ಸೈಟ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ 'ಪಾಂಡೆಮಿಕ್' (Pandemic) ಪದವನ್ನು ಆಯ್ಕೆ ಮಾಡಿತ್ತು. 'ಸಾಂಕ್ರಾಮಿಕ' ಪದ ಇದೀಗ ಹಿಂದೆ ಬೀಳುತ್ತಿದ್ದು ಮತ್ತು ನಾವು ಈಗ ಅದರ ಪರಿಣಾಮಗಳನ್ನು ನೋಡುತ್ತಿದ್ದೇವೆ ಎಂದು ಸೊಕೊಲೊಸ್ಕಿ ಹೇಳಿದ್ದಾರೆ. 

ಇದನ್ನೂ ಓದಿ-Winter Session : ಮಳೆಗಾಲದ ಅಧಿವೇಶನದಲ್ಲಿ ಅಶಿಸ್ತು.. ರಾಜ್ಯಸಭೆಯ 12  ವಿಪಕ್ಷ ಸಂಸದರ ಅಮಾನತು

ಶೇ.1000 ರಷ್ಟು ಹೆಚ್ಚಾಗಿದೆ ಹುಡುಕಾಟ
ಡಿಸೆಂಬರ್‌ನಲ್ಲಿ ಯುಎಸ್‌ನಲ್ಲಿ ಕರೋನಾ ಲಸಿಕೆಯ ಮೊದಲ ಡೋಸ್ ನೀಡಿದ ನಂತರ, 'ಲಸಿಕೆ' ಅನ್ನು 'ಮೆರಿಯಮ್ ವೆಬ್‌ಸ್ಟರ್' ನಲ್ಲಿ ಶೇ.601ರಷ್ಟು ಹೆಚ್ಚು ಹುಡುಕಲಾಗಿದೆ ಎಂದು ಅವರು ಹೇಳಿದ್ದಾರೆ. ಲಸಿಕೆ ಬಗ್ಗೆ ಕಡಿಮೆ ಚರ್ಚೆ ಇದ್ದ 2019 ಕ್ಕಿಂತ ಈ ವರ್ಷ ಮೆರಿಯಮ್-ವೆಬ್‌ಸ್ಟರ್‌ನಲ್ಲಿ 'ಲಸಿಕೆ' ಎಂಬ ಪದವನ್ನು ಶೇಕಡಾ 1,048 ರಷ್ಟು ಹೆಚ್ಚು ಹುಡುಕಲಾಗಿದೆ.

ಇದನ್ನೂ ಓದಿ-ADAS ಬಗ್ಗೆ ನಿಮಗೆಷ್ಟು ತಿಳಿದಿದೆ? ವಾಹನ ಚಲಾಯಿಸುವವರು ಇದನ್ನು ತಿಳಿಯಲೇಬೇಕು

ಅಸಮಾನ ವಿತರಣೆ, ಲಸಿಕೆ ಕಡ್ಡಾಯಗಳು ಮತ್ತು 'ಬೂಸ್ಟರ್' ಡೋಸ್‌ಗಳ ಮೇಲಿನ ಚರ್ಚೆಯು ಈ ಪದದಲ್ಲಿ ಆಸಕ್ತಿಯನ್ನು ಹೆಚ್ಚಿಸಿದೆ ಎಂದು ಸೊಕೊಲೊಸ್ಕಿ ಹೇಳಿದ್ದಾರೆ. ಇದರೊಂದಿಗೆ, ಲಸಿಕೆಯನ್ನು ಅನ್ವಯಿಸುವ ಬಗ್ಗೆ ಜನರಲ್ಲಿ ಹಿಂಜರಿಕೆಯಿಂದಾಗಿ  (Vaccine Hesitancy) ಅದರ ಜನಪ್ರಿಯತೆಯೂ ಹೆಚ್ಚಾಗಿದೆ ಎಂದು ಕೂಡ ಅವರು ಹೇಳಿದ್ದಾರೆ. 

ಇದನ್ನೂ ಓದಿ-ಈ ಗ್ರಹದ ಸಂಪೂರ್ಣ ಒಂದು ವರ್ಷದ ಅವಧಿ ಭೂಮಿಯ 16ಗಂಟೆಗೆ ಸಮ, ವಿಜ್ಞಾನಿಗಳು ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News