ಇದೇ ನೋಡಿ ವಿಶ್ವದ ಅತ್ಯಂತ ದುಬಾರಿ ಮದ್ಯ..! ಕೇವಲ 1 ಪೆಗ್‌ ಖರೀದಿ ಮಾಡೋಕೂ ನಿಮ್ಗೆ ಸಾಧ್ಯವಿಲ್ಲ

World most Expensive liquor : ವಿಶ್ವದ ಅತ್ಯಂತ ದುಬಾರಿ ಮದ್ಯದ ಬಗ್ಗೆ ನಿಮಗೆ ಗೊತ್ತೆ..? ಬಹುಷಃ ಈ ವಿಚಾರ ನಿಮ್ಗೆ ಗೊತ್ತಿಲ್ಲ ಅನಿಸುತ್ತೆ. ಈ ಮದ್ಯವನ್ನು ಕುಡಿಬೇಕು ಅಂದ್ರೆ, ನಿಮ್ಮ ಆಸ್ತಿಯನ್ನು ಮಾರಾಟ ಮಾಡಿದರೂ ಸಹ ಕೇವಲ ಒಂದು ಪೆಗ್‌ ಖರೀದಿ ಮಾಡಲು ಸಾಧ್ಯವಿಲ್ಲ.. ಯಾವುದು ಆ ಮದ್ಯ..? ಬನ್ನಿ ನೋಡೋಣ..

Written by - Krishna N K | Last Updated : May 31, 2025, 06:04 PM IST
    • ವಿಶ್ವದ ಅತ್ಯಂತ ದುಬಾರಿ ಮದ್ಯದ ಬಗ್ಗೆ ನಿಮಗೆ ಗೊತ್ತೆ..?
    • ಈ ಮದ್ಯವನ್ನು ಕುಡಿಬೇಕು ಅಂದ್ರೆ, ನಿಮ್ಮ ಆಸ್ತಿಯನ್ನು ಮಾರಾಟ ಮಾಡಬೇಕು
    • ಕೇವಲ ಒಂದು ಪೆಗ್‌ ಮಾತ್ರ ಖರೀದಿ ಮಾಡಲು ಸಾಧ್ಯವಿಲ್ಲ..
ಇದೇ ನೋಡಿ ವಿಶ್ವದ ಅತ್ಯಂತ ದುಬಾರಿ ಮದ್ಯ..! ಕೇವಲ 1 ಪೆಗ್‌ ಖರೀದಿ ಮಾಡೋಕೂ ನಿಮ್ಗೆ ಸಾಧ್ಯವಿಲ್ಲ

Isabella Islay price : ಪ್ರಪಂಚದಾದ್ಯಂತ ಸಾಕಷ್ಟು ಜನರು ಮದ್ಯಪಾನ ಮಾಡಲು ಇಷ್ಟಪಡುತ್ತಾರೆ. ಅನೇಕ ಜನರು ತಮ್ಮ ಕುಡಿಯುವ ಹವ್ಯಾಸವನ್ನು ಪೂರೈಸಿಕೊಳ್ಳಲು ಸಾವಿರಾರು ಮತ್ತು ಲಕ್ಷಾಂತರ ರೂಪಾಯಿಗಳನ್ನು ಮದ್ಯದ ಮೇಲೆ ಖರ್ಚು ಮಾಡುತ್ತಾರೆ. ಪ್ರಪಂಚದಲ್ಲಿ ಅನೇಕ ದುಬಾರಿ ಮದ್ಯದ ಬ್ರಾಂಡ್‌ಗಳಿವೆ. ಈ ಪೈಕಿ ಈ ಮದ್ಯ ವಿಶ್ವದಲ್ಲಿಯೇ ಅತ್ಯಂತ ದುಬಾರಿ ಮದ್ಯ ಎನಿಸಿಕೊಂಡಿದೆ.

Add Zee News as a Preferred Source

ಕೆಲವು ಜನರು ದುಬಾರಿ ಮದ್ಯವನ್ನು ಕುಡಿಯಲು ಇಷ್ಟಪಡುತ್ತಾರೆ. ನೀವು ದುಬಾರಿ ಮದ್ಯವನ್ನು ಇಷ್ಟಪಡುವ ಜನರಲ್ಲಿ ಒಬ್ಬರಾಗಿದ್ದರೆ, ಈ ಸುದ್ದಿ ನಿಮಗಾಗಿ. ಇಂದು ನಾವು ನಿಮಗೆ ವಿಶ್ವದ ಅತ್ಯಂತ ದುಬಾರಿ ಮದ್ಯದ ಬಗ್ಗೆ ಹೇಳಲಿದ್ದೇವೆ.. ಏನ್‌ ಗೊತ್ತಾ.. ಕೇವಲ 30 ಪೆಗ್‌ ಕುಡಿಯಲು ನಿಮ್ಮ ಆಸ್ತಿಯನ್ನು ಮಾರಾಟ ಮಾಡಬೇಕಾಗಬಹುದು.

ಇದನ್ನೂ ಓದಿ:ಜಲ ಬಾಂಬ್ ನಿಂದ ನಾವು ಹಸಿವಿನಿಂದ ಸಾಯಬಹುದು- ಪಾಕ್ ಸಂಸದ ಆತಂಕ

ಈ ಮದ್ಯದ ಹೆಸರು ಇಸಾಬೆಲ್ಲಾಸ್ ಐಲ್ ವಿಸ್ಕಿ, ಇದರ ಬೆಲೆ ಕೇಳಿದರೆ ನೀವು ಆಘಾತಕ್ಕೊಳಗಾಗುತ್ತೀರಿ. ಇದರ ಒಂದು ಬಾಟಲಿಯ ಬೆಲೆ 6.2 ಮಿಲಿಯನ್ ಡಾಲರ್, ಅಂದರೆ ಸರಿಸುಮಾರು 53 ಕೋಟಿ ಭಾರತೀಯ ರೂಪಾಯಿಗಳು. ಈ ಮೊತ್ತದಲ್ಲಿ ನೀವು ಒಳ್ಳೆಯ ನಗರದಲ್ಲಿ ಬಂಗಲೆ ಖರೀದಿಸಬಹುದು.

ಇಸಾಬೆಲ್ಲಾ ಇಸ್ಲೇ ವಿಸ್ಕಿಯ ಒಂದು ಬಾಟಲಿಯ ಬೆಲೆ ಸುಮಾರು 53 ಕೋಟಿ ರೂ. ಈ ಮದ್ಯದ ಒಂದು ಬಾಟಲಿಯಲ್ಲಿ 700 ಮಿಲಿ ಆಲ್ಕೋಹಾಲ್ ಇರುತ್ತದೆ. ಇದರ 30 ಮಿಲಿ ಪೆಗ್ ಬಗ್ಗೆ ಹೇಳುವುದಾದರೆ, ಅದಕ್ಕೆ ನೀವು ಎರಡು ಕೋಟಿಗೂ ಹೆಚ್ಚು ಹಣವನ್ನು ಪಾವತಿಸಬೇಕಾಗಬಹುದು. ಅಂದರೆ ಒಂದು ಲೋಟ ವಿಸ್ಕಿಯನ್ನು ಕುಡಿಯಲು ನಿಮ್ಮ ಆಸ್ತಿಯನ್ನು ಮಾರಾಟ ಮಾಡಬೇಕಾಗಬಹುದು. ಇದು ಸೀಮಿತ ಆವೃತ್ತಿಯ ವಿಸ್ಕಿ ಎಂದು ಯಾಗಿದ್ದು, ಪ್ರಪಂಚದಲ್ಲಿ ಕೆಲವೇ ಬಾಟಲಿಗಳನ್ನು ತಯಾರಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News