ʼವಿಶ್ವ ಸಂಗೀತ ದಿನʼವನ್ನು ಏಕೆ ಆಚರಣೆ ಮಾಡ್ತಾರೆ ಗೊತ್ತೆ..! ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

World music day 2023 History : ಸಂಗೀತವನ್ನು ಇಷ್ಟ ಪಡದ ಮನುಷ್ಯರಿಲ್ಲ. ಗರ್ಭದಲ್ಲಿರುವ ಮಗುವು ಸಹ ಸಂಗೀತದ ಸ್ವರಕ್ಕೆ ಸ್ಪಂದನೆ ನೀಡುತ್ತದೆ. ಪ್ರಾಣಿಗಳು ಸಹ ಮ್ಯೂಜಿಕ್‌ಗೆ ಮಾರು ಹೋಗುವ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವುದನ್ನು ನೀವು ಗಮನಿಸಿರುತ್ತೀರಿ.. ಇಂದು ವಿಶ್ವ ಸಂಗೀತ ದಿನ.. ಈ ದಿನದ ಹಿನ್ನೆಲೆ ಮತ್ತು ಅದರ ಹುಟ್ಟಿನ ಬಗ್ಗೆ ತಿಳಿಯೋಣ ಬನ್ನಿ..

Written by - Krishna N K | Last Updated : Jun 21, 2023, 01:43 PM IST
  • ಇಂದು ʼವಿಶ್ವ ಸಂಗೀತ ದಿನʼ
  • ಪ್ರಪಂಚದಾದ್ಯಂತ ಈ ದಿನವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ.
  • ಪ್ರತಿ ವರ್ಷ ಜೂನ್ 21 ರಂದು ʼವಿಶ್ವ ಸಂಗೀತ ದಿನʼವನ್ನು ಆಚರಿಸಲಾಗುತ್ತದೆ.
ʼವಿಶ್ವ ಸಂಗೀತ ದಿನʼವನ್ನು ಏಕೆ ಆಚರಣೆ ಮಾಡ್ತಾರೆ ಗೊತ್ತೆ..! ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ title=

World music day 2023 : ಪ್ರತಿ ವರ್ಷ ಜೂನ್ 21 ರಂದು ʼವಿಶ್ವ ಸಂಗೀತ ದಿನʼವನ್ನು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತದ ಸಂಗೀತ ಶಕ್ತಿಯ ಆರಾಧನೆ ಮಾಡಲಾಗುತ್ತದೆ. ಜಂಜಾಟದ ಬದುಕಿನಲ್ಲಿ ಬದುಕುವ ಜೀವಗಳಿಗೆ ಸಂಗೀತದ ಮೂಲಕ ಉತ್ಸಾಹ ನೀಡುವ ನಿಟ್ಟಿನಲ್ಲಿ ಈ ದಿನದಂದು ಹಲವು ಸಂಗೀತ ದಿಗ್ಗಜರು, ಕಲಾವಿದರು ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಮನರಂಜನೆ ನೀಡುತ್ತಾರೆ.

ಸಂಗೀತದ ಶಕ್ತಿ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಒತ್ತಡ, ಪ್ರೇರಣೆ, ಭಾವನಾತ್ಮಕವಾಗಿ ನಮ್ಮನ್ನು ಆವರಿಸುತ್ತದೆ. 1982 ರಲ್ಲಿ ಫ್ರಾನ್ಸ್‌ನಲ್ಲಿ ಹುಟ್ಟಿಕೊಂಡ ʼಸಂಗೀತ ದಿನʼವನ್ನು ವಿಶ್ವದಾದ್ಯಂತ ವಾರ್ಷಿಕವಾಗಿ ಜೂನ್ 21 ರಂದು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ.

ಇದನ್ನೂ ಓದಿ: ಎರಡು ಡಜನ್ ಗೂ ಅಧಿಕ ದಿಗ್ಗಜರ ಜೊತೆಗೆ ಮೋದಿ ಭೇಟಿ, ಟ್ವಿಟ್ಟರ್ ಮಾಲೀಕ ಎಲಾನ್ ಮಸ್ಕ್ ಜೊತೆಗೂ ಭೇಟಿ

ಇತಿಹಾಸ : 1982ರಲ್ಲಿ ಫ್ರಾನ್ಸ್‌ನಲ್ಲಿ ಮೊದಲ ಬಾರಿಗೆ ʼಫೆಟೆ ಡೆ ಲಾ ಮ್ಯೂಸಿಕ್‌ʼ ಉತ್ಸವದ ಮೂಲಕ ವಿಶ್ವ ಸಂಗೀತ ದಿನಕ್ಕೆ ಚಾಲನೆ ನೀಡಲಾಯಿತು ಎಂದು ಹೇಳಲಾಗುತ್ತದೆ. ಫ್ರೆಂಚ್‌ನ ಸಾಂಸ್ಕೃತಿಕ ಮಂತ್ರಿ ʼಜಾಕ್‌ ಲ್ಯಾಂಗ್‌ʼ ಎಂಬುವರು, 1981ರಲ್ಲಿ ಸಂಗೀತ ದಿನವನ್ನು ಆಚರಿಸುವ ಕಲ್ಪನೆಯನ್ನು ರೂಪಿಸಿದರು ಎಂಬ ಮಾತು ಸಹ ಇದೆ. ಅಲ್ಲದೆ, ಮತ್ತೊಂದು ಹೇಳಿಕೆಯ ಪ್ರಕಾರ 1976ರಲ್ಲಿ ಜೋಯಲ್‌ ಕೊಹೆನ್‌ ಸಂಗೀತ ದಿನದ ಆಚರಣೆಯ ಕಲ್ಪನೆಯನ್ನು ಪ್ರಸ್ತಾಪಿಸಿದರು ಎಂದು ಹೇಳಲಾಗುತ್ತದೆ.

ಮಹತ್ವ : ವಿಶ್ವ ಸಂಗೀತ ದಿನದ ಪ್ರಮುಖ ಅಂಶವೆಂದರೆ ನಮ್ಮ ಜೀವನದ ಭಾಗವಾಗಿರುವ ಸಂಗೀತದ ಪಾತ್ರವನ್ನು ಎತ್ತಿ ತೋರಿಸುತ್ತದೆ. ಈ ಕಾರ್ಯಕ್ರಮವು ಹವ್ಯಾಸಿಗಳು ಮತ್ತು ವೃತ್ತಿಪರ ಕಲಾವಿದರಿಗೆ ಸಾರ್ವಜನಿಕವಾಗಿ ಪ್ರದರ್ಶನ ನೀಡಲು ವೇದಿಕೆಯನ್ನು ಒದಗಿಸುತ್ತದೆ. ವಿಶ್ವ ಸಂಗೀತ ದಿನದ ಪ್ರಮುಖ ಗುರಿಗಳಲ್ಲಿ ಒಂದಾದ ಸಂಗೀತವನ್ನು ಯುವಜನರಿಗೆ ಸುಲಭವಾಗಿ ಅರ್ಥೈಸುವುದು.. ಯುವ ಪೀಳಿಗೆಗೆ ಮ್ಯೂಜಿಕ್‌ನ ಮಹತ್ವ ತಿಳಿಸುವಂತೆ ಮಾಡಿ ಅವರಲ್ಲೂ ಸಹ ಸಂಗೀತದ ಬಗ್ಗೆ ಆಸಕ್ತಿ ಮೂಡುವಂತೆ ಮಾಡುವುದು. ಹಾಗೂ ವಿವಿಧ ಸಂಗೀತ ಶೈಲಿಗಳನ್ನು ಅನ್ವೇಷಣೆ ಮತ್ತು ಹೊಸ ಕಲಾತ್ಮಕ ರೂಪಗಳನ್ನು ಸಹ ಅರಿಯಲು ಸಂಗೀತ ದಿನ ಸಹಾಯಕವಾಗಿದೆ.

ಇದನ್ನೂ ಓದಿ:  ಫೋಟೋಗಾಗಿ ಲಿಪ್‌ಲಾಕ್‌, ನಂತರ ವಧು - ವರ ಕಂಟ್ರೋಲ್‌ ತಪ್ಪಿ ಕ್ಯಾಮೆರಾ ಮುಂದೆಯೇ ಮಾಡಿದ್ರು...!

ಆಚರಣೆಗಳು : ವಿಶ್ವ ಸಂಗೀತ ದಿನವನ್ನು ಮನರಂಜನಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಕಲಾವಿದರಿಗೆ ವೇದಿಕೆಯನ್ನು ನೀಡುವ ಮೂಲಕ ಅವರ ಕಲೆ ಅನಾವಣೆಗೊಳಿಸಲಾಗುತ್ತದೆ. ಸುಮಾರು 120 ದೇಶಗಳು ಈ ದಿನದಂದು ಸಂಗೀತ ಕಾರ್ಯಕ್ರಮಗಳು, ಸಂಗೀತ ರಸಸಂಜೆಯಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಗೀತ ದಿನವನ್ನು ಆಚರಿಸುತ್ತವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News