Investment Tips : ಕೇವಲ 87 ರೂಪಾಯಿ ಹೂಡಿಕೆ ಮಾಡಿ, 11 ಲಕ್ಷ ರೂಪಾಯಿ ರಿಟರ್ನ್ ಪಡೆಯಿರಿ!

LIC Policy : ಎಲ್ಐಸಿಯ ಈ ಪಾಲಿಸಿಯು ಅತ್ಯುತ್ತಮ ಹೂಡಿಕೆ ಯೋಜನೆಗಳಲ್ಲಿ ಒಂದಾಗಿದೆ. ಇದರಲ್ಲಿ ನೀವು ಕೇವಲ 87 ರೂಪಾಯಿ ಹೂಡಿಕೆ ಮಾಡುವ ಮೂಲಕ 11 ಲಕ್ಷ ರೂಪಾಯಿಗಳ ರಿಟರ್ನ್‌ ಪಡೆಯಬಹುದು.

Written by - Chetana Devarmani | Last Updated : May 4, 2024, 08:45 AM IST
    • ಅತ್ಯುತ್ತಮ ಹೂಡಿಕೆ ಯೋಜನೆ
    • 87 ರೂಪಾಯಿ ಹೂಡಿಕೆ, 11 ಲಕ್ಷ ರೂಪಾಯಿ ಲಾಭ
    • ಎಲ್ಐಸಿ ಆಧಾರ್ ಶಿಲಾ ಯೋಜನೆಯ ವಿವರಗಳು
Investment Tips : ಕೇವಲ 87 ರೂಪಾಯಿ ಹೂಡಿಕೆ ಮಾಡಿ, 11 ಲಕ್ಷ ರೂಪಾಯಿ ರಿಟರ್ನ್ ಪಡೆಯಿರಿ! title=

LIC Scheme: ಪ್ರಮುಖ ವಿಮಾ ಪೂರೈಕೆದಾರರಾದ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC), ವಿವಿಧ ಆರ್ಥಿಕ ಗುರಿಗಳನ್ನು ಪೂರೈಸಲು ವೈವಿಧ್ಯಮಯ ಜೀವ ವಿಮಾ ಪಾಲಿಸಿಗಳನ್ನು ನೀಡುತ್ತದೆ. LIC ಆಧಾರ್ ಶಿಲಾ ಯೋಜನೆಯು ಮಹಿಳೆಯರಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ಜಾರಿಗೆ ತಂದ ವಿಶೇಷ ಪಾಲಿಸಿಯಾಗಿದೆ. ಈ ನಾನ್-ಲಿಂಕ್ಡ್ ವೈಯುಕ್ತಿಕ ಜೀವ ವಿಮಾ ಯೋಜನೆ ಮುಕ್ತಾಯದ ವೇಳೆಗೆ ಲಕ್ಷ ಗಟ್ಟಲೇ ಹಣ ಬರುವ ಗ್ಯಾರೆಂಟಿ ರಿಟರ್ನ್‌ ಅನ್ನು ಹೊಂದಿದೆ. ಅಕಾಲಿಕ ಮರಣದ ಸಂದರ್ಭದಲ್ಲಿ ವಿಮಾದಾರರ ಕುಟುಂಬಕ್ಕೆ ಆರ್ಥಿಕ ಬೆಂಬಲವನ್ನು ಒದಗಿಸುತ್ತದೆ.  

ಮಹಿಳೆಯರಿಗೆ ಆರ್ಥಿಕ ಭದ್ರತೆ:

LIC ತನ್ನ ಕಡಿಮೆ ರಿಸ್ಕ್‌ ಹೊಂದಿರುವ, ಗ್ರಾಹಕ ಕೇಂದ್ರಿತ ನೀತಿಗಳಿಗೆ ಹೆಸರುವಾಸಿಯಾಗಿದೆ. ಅದು ಹಣಕಾಸಿನ ಅಗತ್ಯಗಳಿಗೆ ಪರಿಹಾರ ಒದಗಿಸುತ್ತದೆ. ಎಲ್ಐಸಿ ಆಧಾರ್ ಶಿಲಾ ಯೋಜನೆಯು ಪಾಲಿಸಿದಾರರಿಗೆ ಕೇವಲ 87 ರೂಪಾಯಿಗಳ ದೈನಂದಿನ ಹೂಡಿಕೆಯೊಂದಿಗೆ 11 ಲಕ್ಷದವರೆಗೆ ಉಳಿಸುವ ಅವಕಾಶ ನೀಡುತ್ತದೆ.

ಇದನ್ನೂ ಓದಿ: ಆರೋಗ್ಯ ವಿಮಾ ಪಾಲಸಿ ಹೊಂದಿದವರಿಗೊಂದು ಬ್ಯಾಡ್ ನ್ಯೂಸ್! 

ಎಲ್ಐಸಿ ಆಧಾರ್ ಶಿಲಾ ಯೋಜನೆಯ ವಿವರಗಳು:

ಪಾಲಿಸಿ ಆರಂಭಿಸಲು ಕನಿಷ್ಟ ವಯಸ್ಸು: 8 ವರ್ಷಗಳು
ಪಾಲಿಸಿ ಆರಂಭಿಸಲು ಗರಿಷ್ಠ ವಯಸ್ಸು: 55 ವರ್ಷಗಳು
ಕನಿಷ್ಟ ಪಾಲಿಸಿ ಅವಧಿ: 10 ವರ್ಷಗಳು
ಗರಿಷ್ಠ ಪಾಲಿಸಿ ಅವಧಿ: 20 ವರ್ಷಗಳು
ಗರಿಷ್ಠ ಮುಕ್ತಾಯ ವಯಸ್ಸು: 70 ವರ್ಷಗಳು
ಕನಿಷ್ಟ ಹೂಡಿಕೆ: 75,000 ರೂ
ಗರಿಷ್ಠ ಹೂಡಿಕೆ: 3 ಲಕ್ಷ ರೂ

ಎಲ್ಐಸಿ ಆಧಾರ್ ಶಿಲಾ ಯೋಜನೆಯ ಪ್ರಯೋಜನಗಳು:

1. ಮೆಚುರಿಟಿ ಬೆನಿಫಿಟ್: ಪಾಲಿಸಿದಾರನು ಸಂಪೂರ್ಣ ಪಾಲಿಸಿ ಅವಧಿಯನ್ನು ಆರಿಸಿಕೊಂಡರೆ ಹೆಚ್ಚು ಮೆಚ್ಯೂರಿಟಿ ಪ್ರಯೋಜನವನ್ನು ಪಡೆಯುತ್ತಾನೆ. ಈ ಒಟ್ಟು ಮೊತ್ತವನ್ನು ಹೊಸ ಪಾಲಿಸಿಯಲ್ಲಿ ಮರುಹೂಡಿಕೆ ಮಾಡಬಹುದು. 

2. ಡೆತ್ ಬೆನಿಫಿಟ್: ವಿಮೆದಾರರ ಅಕಾಲಿಕ ಮರಣದ ಸಂದರ್ಭದಲ್ಲಿ, ಲಾಭವನ್ನು ಪಾಲಿಸಿಯ ನಾಮಿನಿಗೆ ಪಾವತಿಸಲಾಗುತ್ತದೆ. 

3. ಖಾತರಿಯ ಸರೆಂಡರ್ ಮೌಲ್ಯ: ಪಾಲಿಸಿದಾರರು ಸತತ ಎರಡು ಪಾಲಿಸಿ ವರ್ಷಗಳನ್ನು ಪೂರ್ಣಗೊಳಿಸಿದ ನಂತರ ತಮ್ಮ ಪಾಲಿಸಿಯನ್ನು ಸರೆಂಡರ್ ಮಾಡಲು ಆಯ್ಕೆ ಮಾಡಬಹುದು. ಖಾತರಿಯ ಸರೆಂಡರ್ ಮೌಲ್ಯವು ಪಾಲಿಸಿ ಅವಧಿಯಲ್ಲಿ ಪಾವತಿಸಿದ ಒಟ್ಟು ಪ್ರೀಮಿಯಂಗೆ ಸಮನಾಗಿರುತ್ತದೆ.

4. ಸಾಲದ ಪ್ರಯೋಜನ: ಒಮ್ಮೆ ಪಾಲಿಸಿಯು ಸರೆಂಡರ್ ಮೌಲ್ಯವನ್ನು ಸಾಧಿಸಿದರೆ, ಹೂಡಿಕೆದಾರರು ಸಾಲದ ಪ್ರಯೋಜನಗಳನ್ನು ಪಡೆಯಬಹುದು.

5. ಪ್ರೀಮಿಯಂ ಪಾವತಿ: ಪ್ರೀಮಿಯಂ ಪಾವತಿ ಅವಧಿಯು ಪಾಲಿಸಿ ಅವಧಿಯೊಂದಿಗೆ ಹೊಂದಾಣಿಕೆಯಾಗುವಂತೆ ರೂಪಿಸಲಾಗಿದೆ. ವಾರ್ಷಿಕ, ಮಾಸಿಕ, ತ್ರೈಮಾಸಿಕ ಅಥವಾ ಅರ್ಧ-ವಾರ್ಷಿಕ ವಿಧಾನಗಳನ್ನು ಒಳಗೊಂಡಂತೆ ವಿವಿಧ ಪಾವತಿ ಆವರ್ತನಗಳನ್ನು ನೀಡುತ್ತದೆ.

ಇದನ್ನೂ ಓದಿ: Credit Card: ಈ ವಿಷಯಗಳ ಬಗ್ಗೆ ಕಾಳಜಿ ಇದ್ದರೆ ಕ್ರೆಡಿಟ್ ಕಾರ್ಡ್ ತುಂಬಾ ಪ್ರಯೋಜನಕಾರಿ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News