29 ರೂ. ಅಕ್ಕಿ, 27 ರೂ.ಗೆ ಗೋಧಿಹಿಟ್ಟು, 60 ರೂ.ಗೆ ಬೇಳೆ ಭಾರತ್ ಬ್ರಾಂಡ್ ನಿಂದ ಜನಸಾಮಾನ್ಯರಿಗೆ ರಿಲೀಫ್ ! ಖರೀದಿ ಕೂಡಾ ಬಲು ಸುಲಭ

Bharat Rice store :ಭಾರತ್ ಬ್ರಾಂಡ್'ನೊಂದಿಗೆ ಸರ್ಕಾರವು ಏರುತ್ತಿರುವ ಬೆಲೆಗೆ ಕಡಿವಾಣ ಹಾಕಲು ಹೊರಟಿದೆ. ಭಾರತ್ ರೈಸ್, ಭಾರತ್ ಹಿಟ್ಟು ಮತ್ತು ಭಾರತ್ ದಾಲ್ ಅನ್ನು ಮಾರುಕಟ್ಟೆಗಿಂತ ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ.

Written by - Ranjitha R K | Last Updated : Feb 8, 2024, 09:52 AM IST
  • ಜನ ಸಾಮಾನ್ಯರ ಹೊರೆಯನ್ನು ಇದೀಗ ಕೇಂದ್ರ ಸರ್ಕಾರ ಕಡಿಮೆ ಮಾಡಿದೆ.
  • ಅಗ್ಗದ ಬೆಲೆಯಲ್ಲಿ ಅಕ್ಕಿ, ಬೆಲೆ, ಹಿಟ್ಟು
  • ಖರೀದಿ ಮಾಡುವುದು ಎಲ್ಲಿಂದ ಮತ್ತು ಹೇಗೆ ?
29 ರೂ. ಅಕ್ಕಿ, 27 ರೂ.ಗೆ ಗೋಧಿಹಿಟ್ಟು, 60 ರೂ.ಗೆ ಬೇಳೆ ಭಾರತ್ ಬ್ರಾಂಡ್ ನಿಂದ ಜನಸಾಮಾನ್ಯರಿಗೆ ರಿಲೀಫ್ ! ಖರೀದಿ ಕೂಡಾ ಬಲು ಸುಲಭ   title=

Bharat Rice store : ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರ ಹೊರೆಯನ್ನು ಇದೀಗ ಕೇಂದ್ರ ಸರ್ಕಾರ ಕಡಿಮೆ ಮಾಡಿದೆ. ಬೆಲೆ ಏರಿಕೆಯನ್ನೇ ದಾಳವನ್ನಾಗಿಸಿಕೊಳ್ಳುವ ಪ್ರಯತ್ನದಲ್ಲಿರುವ ಪ್ರತಿಪಕ್ಷಗಳಿಗೆ ಸರ್ಕಾರ ಈ ಮೂಲಕ ಉತ್ತರ ನೀಡಿದೆ. 'ಭಾರತ್ ಬ್ರಾಂಡ್'ನೊಂದಿಗೆ ಸರ್ಕಾರವು ಏರುತ್ತಿರುವ ಬೆಲೆಗೆ ಕಡಿವಾಣ ಹಾಕಲು ಹೊರಟಿದೆ. ಭಾರತ್ ರೈಸ್, ಭಾರತ್ ಹಿಟ್ಟು ಮತ್ತು ಭಾರತ್ ದಾಲ್ ಅನ್ನು ಮಾರುಕಟ್ಟೆಗಿಂತ ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. 'ಭಾರತ್ ಅಟ್ಟ' ಮತ್ತು 'ಭಾರತ್ ದಾಲ್ ' ನಂತರ ಈಗ ಸರ್ಕಾರವು 'ಭಾರತ್ ರೈಸ್' ಅನ್ನು ಕೆಜಿಗೆ 29 ರೂ.ಗೆ ಮಾರಾಟ ಮಾಡಲು ಪ್ರಾರಂಭಿಸಿದೆ.ಕೆಜಿಗೆ 40 ರಿಂದ 50 ರೂ.ಕೊಟ್ಟು ಖರೀದಿಸುವ ಅಕ್ಕಿ ಇದೀಗ ಕೇವಲ 29 ರೂಪಾಯಿಗೆ ಸಿಗುತ್ತಿದೆ. ಭಾರತ್ ಪ್ಯಾಕ್ ಅನ್ನು 5 ಮತ್ತು 10 ಕೆಜಿ ಪ್ಯಾಕ್‌ಗಳಲ್ಲಿ ಖರೀದಿಸಬಹುದು. 

ಖರೀದಿಸುವುದು ಎಲ್ಲಿಂದ ?:
ಭಾರತ ಸರ್ಕಾರ ಭಾರತ್ ಬ್ರಾಂಡ್‌ ಅಡಿಯಲ್ಲಿ ಮೊದಲು ಬೇಳೆಕಾಳುಗಳು, ನಂತರ ಹಿಟ್ಟು ಮತ್ತು ಈಗ ಅಕ್ಕಿಯನ್ನು ಮಾರಾಟ ಮಾಡಲು ಪ್ರಾರಂಭಿಸಿದೆ. ಭಾರತ್ ಅಕ್ಕಿ ಕೆಜಿಗೆ 29 ರೂ.ಗೆ ಎರಡು ಹಂತಗಳಲ್ಲಿ ಬಿಡುಗಡೆಯಾಗಿದೆ. ಮೊದಲ ಹಂತದಲ್ಲಿ ಐದು ಲಕ್ಷ ಟನ್ ಅಕ್ಕಿ ನೀಡಲಾಗುತ್ತಿದೆ. ನೀವು ಅದನ್ನು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್‌ಸಿಐ), ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಎಸಿಎಂಎಫ್) ಮತ್ತು ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ ಫೆಡರೇಶನ್ ಆಫ್ ಇಂಡಿಯಾ (ಎನ್‌ಸಿಸಿಎಫ್) ನಿಂದ ಖರೀದಿಸಬಹುದು. ಇದಲ್ಲದೆ,  ಇದನ್ನು ಸೆಂಟ್ರಲ್ ಸ್ಟೋರ್‌ಗಳಲ್ಲಿಯೂ ಖರೀದಿಸಬಹುದು.

ಇದನ್ನೂ ಓದಿ : ಅಯೋಧ್ಯೆಯಲ್ಲಿ ಕೆಎಫ್‌ಸಿ: ಜಿಲ್ಲಾಡಳಿತ ಹೇಳಿದ್ದೇನು?   

ಮೊಬೈಲ್ ವ್ಯಾನ್ ಮೂಲಕವೂ ಲಭ್ಯ : 
ಇನ್ನು ಸರ್ಕಾರ ಮೊಬೈಲ್ ವ್ಯಾನ್ ಮೂಲಕವೂ ಈ ಅಕ್ಕಿಯನ್ನು ಮಾರಾಟ ಮಾಡುತ್ತಿದೆ. ಸಹಕಾರಿ ಸಂಸ್ಥೆಗಳಲ್ಲದೆ, ಭಾರತ್ ಗೋಧಿಹಿಟ್ಟು,  2000 ಚಿಲ್ಲರೆ ಮಳಿಗೆಗಳಲ್ಲಿ ಲಭ್ಯವಿದೆ.ಅದರ ಹೊರತಾಗಿ ಮದರ್ ಡೈರಿ, ಸಫಲ್ ಮುಂತಾದ ಮಳಿಗೆಗಳಿಂದಲೂ ಖರೀದಿಸಬಹುದು. 

ಆನ್‌ಲೈನ್‌ನಲ್ಲಿ ಆರ್ಡರ್ ಮಾಡಬಹುದೇ?: 
ಪ್ರಸ್ತುತ ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವ  ಸೌಲಭ್ಯ ಲಭ್ಯವಿಲ್ಲ. ಆದರೆ ಶೀಘ್ರದಲ್ಲೇ ಈ ವಿಧಾನವನ್ನು ಅಳವಡಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ಭಾರತ್ ಬ್ರಾಂಡ್ ಅಕ್ಕಿಯನ್ನು ಸರ್ಕಾರ ಶೀಘ್ರದಲ್ಲೇ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರಾಟ ಮಾಡಲಿದೆ. ಭಾರತ್ ರೈಸ್ ಹೊರತುಪಡಿಸಿ,  ಭಾರತ್ ಹಿಟ್ಟನ್ನು ಕೆಜಿಗೆ 27.50 ರೂ.ಗೆ ಖರೀದಿಸಬಹುದು. ಭಾರತ್ ದಾಲ್‌ನಿಂದ ಬೇಳೆ ಕಾಳುಗಳನ್ನು ಕೆಜಿಗೆ 60 ರೂ.ಯಂತೆ ಖರೀದಿಸಬಹುದು. 

ಇದನ್ನೂ ಓದಿ :  Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
 

Trending News