ದೀಪಿಕಾ ಮುಡಿಗೇರಿತು ವಿಶ್ವ ಮಟ್ಟದ ವಿಶೇಷ ಪ್ರಶಸ್ತಿ..! ಈ ಗೌರವಕ್ಕೆ ಪಾತ್ರರಾದ ಭಾರತೀಯ ಮೊದಲ ತಾರೆ ಈಕೆ

Deepika Padukone: 'ಗ್ಲೋಬಲ್ ಡಿಸ್ರಪ್ಟರ್ಸ್ ಲಿಸ್ಟ್ 2024' ರಲ್ಲಿ ಸೇರ್ಪಡೆಗೊಂಡ ಮೊದಲ ಭಾರತೀಯ ತಾರೆ ಎಂಬ ಹೆಗ್ಗಳಿಕೆಗೆ ದೀಪಿಕಾ ಪಡುಕೋಣೆ ಪಾತ್ರರಾಗಿದ್ದಾರೆ.  

Written by - Savita M B | Last Updated : May 17, 2024, 08:30 AM IST
  • ಕಳೆದ 2 ವರ್ಷಗಳಲ್ಲಿ ದೀಪಿಕಾ ಭಾಕ್ಸಾಫಿಸ್‌ನಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಿದ್ದಾರೆ
  • ಈ ಪಟ್ಟಿಯಲ್ಲಿರುವ ಏಕೈಕ ಭಾರತೀಯ ತಾರೆ ಎನ್ನುವ ಹೆಗ್ಗಳಿಗೆ ಪಾತ್ರರಾಗಿದ್ದಾರೆ..
ದೀಪಿಕಾ ಮುಡಿಗೇರಿತು ವಿಶ್ವ ಮಟ್ಟದ ವಿಶೇಷ ಪ್ರಶಸ್ತಿ..! ಈ ಗೌರವಕ್ಕೆ ಪಾತ್ರರಾದ ಭಾರತೀಯ ಮೊದಲ ತಾರೆ ಈಕೆ title=

Bollywood Actress: ಭಾರತದ Global ambassador ಮತ್ತು ಐಕಾನ್ ದೀಪಿಕಾ ಪಡುಕೋಣೆ ಅವರನ್ನು global disruptor ಪಟ್ಟಿ 2024 ರಲ್ಲಿ ಸೇರಿಸಲಾಗಿದೆ. ಈ ಮೂಲಕ ಗರ್ಭಿಣಿ ದೀಪಿಕಾ ಮತ್ತೊಮ್ಮೆ ಪ್ರಪಂಚದಾದ್ಯಂತ ಭಾರತವನ್ನು ವೈಭವೀಕರಿಸಿದ್ದಾರೆ.. ವಿಶೇಷವೆಂದರೆ ಈ ಪಟ್ಟಿ ಮನರಂಜನಾ ಜಗತ್ತಿಗೆ ಕೊಡುಗೆ ನೀಡುವ ವಿಶ್ವದಾದ್ಯಂತದ ಎಲ್ಲಾ ತಾರೆಯರನ್ನೂ ಒಳಗೊಂಡಿದೆ. 
 
ಕಳೆದ 2 ವರ್ಷಗಳಲ್ಲಿ ದೀಪಿಕಾ ಭಾಕ್ಸಾಫಿಸ್‌ನಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಿದ್ದು ಮಾತ್ರವಲ್ಲದೆ ಭಾರತವನ್ನು ಅನೇಕ ವೇದಿಕೆಗಳಲ್ಲಿ ಪ್ರತಿನಿಧಿಸಿದ್ದಾರೆ. ಇದೀಗ ಈ ವಿಶೇಷ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವುದರ ಮೂಲಕ ಈ ಪಟ್ಟಿಯಲ್ಲಿರುವ ಏಕೈಕ ಭಾರತೀಯ ತಾರೆ ಎನ್ನುವ ಹೆಗ್ಗಳಿಗೆ ಪಾತ್ರರಾಗಿದ್ದಾರೆ.. 

ಇದನ್ನೂ ಓದಿ-ಅಧಿಕೃತವಾಗಿ ಡಿವೋರ್ಸ್‌ ಘೋಷಣೆ ಮಾಡಿದ ಜಿವಿ ಪ್ರಕಾಶ್- ಸೈಂಧವಿ..! 11 ವರ್ಷಗಳ ದಾಂಪತ್ಯ ಅಂತ್ಯ

ಈ ಪಟ್ಟಿಯಲ್ಲಿ ದೀಪಿಕಾ ಹೊರತಾಗಿ, ಇವಾ ಲಾಂಗೋರಿಯಾ, ಉಮಾ ಥರ್ಮನ್ ಮತ್ತು ಲೀ ಸಂಗ್-ಜಿನ್ ಅವರಂತಹ ಅಂತರರಾಷ್ಟ್ರೀಯ ತಾರೆಗಳೂ ಇದ್ದಾರೆ.

ಇದನ್ನೂ ಓದಿ-ಆಸ್ಪತ್ರೆ ಬೆಡ್‌ ಮೇಲೆ ಕುಳಿತು ತಮ್ಮ ರೋಗದ ಬಗ್ಗೆ ಮಹಿಳೆಯರಿಗೆ ಅರಿವು ಮೂಡಿಸಿದ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ..! ವಿಡಿಯೋ ವೈರಲ್‌

ಬಾಲಿವುಡ್‌ನಲ್ಲಿ ಉತ್ತಮ ಕೆಲಸ ಮಾಡುವುದರ ಜೊತೆಗೆ, ನಟಿ ವಿಶ್ವದಾದ್ಯಂತ ಅನೇಕ ಕಾರ್ಯಕ್ರಮಗಳು ಮತ್ತು ಪ್ರಮುಖ ಉತ್ಸವಗಳಲ್ಲಿ ಭಾಗವಹಿಸುವ ಮೂಲಕ ಭಾರತವನ್ನು ಪ್ರತಿನಿಧಿಸಿದ್ದಾರೆ.. ದೀಪಿಕಾ ಆಸ್ಕರ್ ಮತ್ತು ಬಾಫ್ಟಾ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿಯೂ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಅಲ್ಲದೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರರ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಟೈಮ್ ನಿಯತಕಾಲಿಕದ ಕವರ್ ಸ್ಟಾರ್ ಆಗಿ ಕಾಣಿಸಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೆ, ದೀಪಿಕಾ ಫಿಫಾ ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News