'ನಿನಗಾಗಿ' ಎಂದ ಬಿಗ್ ಬಾಸ್ ದಿವ್ಯಾ ಉರುಡುಗ.. ಬರ್ತಿದೆ ಮತ್ತೊಂದು ಹೊಸ ಧಾರಾವಾಹಿ !

Ninagagi serial: ಕನ್ನಡ ಕಿರುತೆರೆ ಲೋಕದಲ್ಲಿ ಕಲರ್ಸ್ ಕನ್ನಡ ವಾಹಿನಿ ವಿಭಿನ್ನ ಬಗೆಯ ಸೀರಿಯಲ್ ಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದೆ.

Written by - YASHODHA POOJARI | Edited by - Zee Kannada News Desk | Last Updated : May 19, 2024, 01:27 PM IST
    • 'ನಿನಗಾಗಿ' ಎಂದ ಬಿಗ್ ಬಾಸ್ ದಿವ್ಯಾ ಉರುಡುಗ
    • ಮೇ 27ರಿಂದ ಕಲರ್ಸ್ ಕನ್ನಡದಲ್ಲಿ ಮತ್ತೊಂದು ಧಾರಾವಾಹಿ ಶುರು
    • ನಿನಗಾಗಿ ಸೀರಿಯಲ್ ನಲ್ಲಿ ದಿವ್ಯಾ ಜೊತೆ ಗಟ್ಟಿಮೇಳದ ಶಿವರಾಮ್ ನಟನೆ
'ನಿನಗಾಗಿ' ಎಂದ ಬಿಗ್ ಬಾಸ್ ದಿವ್ಯಾ ಉರುಡುಗ.. ಬರ್ತಿದೆ ಮತ್ತೊಂದು ಹೊಸ ಧಾರಾವಾಹಿ !  title=

ಬೆಂಗಳೂರು: ಕನ್ನಡ ಕಿರುತೆರೆ ಲೋಕದಲ್ಲಿ ಕಲರ್ಸ್ ಕನ್ನಡ ವಾಹಿನಿ ವಿಭಿನ್ನ ಬಗೆಯ ಸೀರಿಯಲ್ ಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದೆ. ಇದೀಗ ಮತ್ತೊಂದು ಹೊಸ ಕಥೆ ಮೂಲಕ ಕಿರುತೆರೆ ಪ್ರೇಕ್ಷಕರ ಎದುರು ಬರ್ತಿದೆ. ಬೇರೆ ಬೇರೆ ವ್ಯಕ್ತಿತ್ವದ ಇಬ್ಬರು ವ್ಯಕ್ತಿಗಳು ಒಟ್ಟಿಗೆ ಸಾಗುವ ಮನ ಮಿಡಿಯ ಧಾರಾವಾಹಿ ನಿನನಾಗಿ ಇದೇ 27ನೇ ತಾರೀಖಿನಿಂದ ಶುರುವಾಗುತ್ತಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ನಿನಗಾಗಿ ಸೀರಿಯಲ್ ಪ್ರಸಾರವಾಗಲಿದೆ. ಈ ಹಿನ್ನೆಲೆ ಇಡೀ ತಂಡ ಮಾಧ್ಯಮದರೊಂದಿಗೆ ಮಾಹಿತಿ ಹಂಚಿಕೊಂಡಿತು.

ಬೆಂಗಳೂರಿನ ಅಕ್ಷಯ್ ಸ್ಟುಡಿಯೋದಲ್ಲಿ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಈ ವೇಳೆ ನಿರ್ದೇಶಕ ಸಂಪಥ್ವಿ ಮಾತನಾಡಿ, ತುಂಬಾ ಎಕ್ಸೈಟ್ ಆಗಿದ್ದೇನೆ. ಯಾಕೆಂದರೆ ಹೆಮ್ಮೆಯಿಂದ ಹೇಳುತ್ತೇನೆ.‌ ಒಂದೊಳ್ಳೆ ಪ್ರಾಜೆಕ್ಟ್ ತೆಗೆದುಕೊಂಡು ಬಂದಿದ್ದೇನೆ. ನಿನಗಾಗಿ ಶೋ ಬಂದ‌ ಮೇಲೆ ತುಂಬಾ ಸ್ಕೋರ್ ಮಾಡುತ್ತದೆ. ಯಾಕೆಂದರೆ ನನ್ನ ಬೆಂಬಲವಾಗಿ ನಿಂತಿರುವವರು ಜೈ ಮಾತಾ ಕಂಬೈನ್ಸ್ ನ ಅಶ್ವಿನಿ‌ ಮೇಡಂ. ಇಡೀ‌ ಕಲರ್ಸ್ ತಂಡ. ಪ್ರತಿಯೊಬ್ಬರಿಗೂ ಸಪೋರ್ಟಿವ್ ಆಗಿತು. ಈ ಪ್ರಾಜೆಕ್ಟ್ ಮಾಡಿಸಿದ್ದಾರೆ. ಈ ಪ್ರಾಜೆಕ್ಟ್ ಕಲರ್ಸ್ ಗೆ ಗೆಲುವು ತಂದುಕೊಡುತ್ತದೆ. ನಾಯಕ ಒಂದು ಪಡೆಯಾದರೆ, ನಾಯಕಿ ಕೂಡ ಒಂದು ಪಡೆ. ಇವರೆಲ್ಲಾ ಬಲ ತಂದುಕೊಡುತ್ತಿದ್ದಾರೆ. ಪ್ರೋವೋ ನೋಡಿ ಇಷ್ಟಪಟ್ಟಿದ್ದೀರಾ. ನಾನು ಈ ಹಿಂದೆ ನಮ್ಮನೆ ಯುವರಾಣಿ ಸೀರಿಯಲ್ ಮಾಡಿದ್ದೇನೆ. ಈ ಬಾರಿ ಒಂದು ಹೊಸ ಕಥೆ ಹೇಳಲು ಬರುತ್ತಿದ್ದೇವೆ ಎಂದರು.

ಇದನ್ನೂ ಓದಿ: RCB ಮ್ಯಾಚ್‌ ಗೆಲ್ಲುತ್ತಿದ್ದಂತೆ ಭಾವುಕರಾದ ಅನುಷ್ಕಾ... ವಿರಾಟ್‌ ಕೊಹ್ಲಿ ರಿಯಾಕ್ಷನ್‌ ವೈರಲ್!

ನಾಯಕ ಋತ್ವಿಕ್ ಮಠದ್ ಮಾತನಾಡಿ, ಶಿವರಾಮ್ ಮಾಸ್‌ನಲ್ಲಿ‌ ನೋಡಿದ್ದೀರಾ. ಆದರೆ ಆ ಮಾಸ್ ಜೀವನ್‌ನಲ್ಲಿ ಇರುವುದಿಲ್ಲ. ತುಂಬಾ ಸರಳ ವ್ಯಕ್ತಿ.‌ಒಬ್ಬ ಮಗುವಿನ ತಂದೆ. ದುಡ್ಡಿನ ಹಿಂದೆ ಹೋಗುವ ಮನುಷ್ಯ ಅಲ್ಲ. ಆ ರೀತಿ ಪಾತ್ರ ಮಾಡುತ್ತಿದ್ದೇನೆ ಎಂದು ಮಾಹಿತಿ ನೀಡಿದರು.

ನಾಯಕಿ ದಿವ್ಯಾ ಉರುಡುಗ ಮಾತನಾಡಿ, ನನಗೆ ಹೆಮ್ಮೆ ಅನಿಸುತ್ತದೆ. ಪ್ರತಿ ವಿಷಯದಲ್ಲಿಯೂ ಯೂನಿಕ್ ಆಗಿ ಮಾಡುತ್ತಿದ್ದೇವೆ. ರಚ್ಚು ಎಂಬ ಮುದ್ದಾದ ಹುಡುಗಿ ಪಾತ್ರ ಮಾಡುತ್ತಿದ್ದೇನೆ. ರಚ್ಚು ಎಂಬ ಸೂಪರ್ ಸ್ಟಾರ್ ಸಿಂಪಲ್ ಆಗಿ ಲೈಫ್ ಲೀಡ್ ಮಾಡುವ ಕನಸು ಕಾಣುತ್ತಾ ಇರುತ್ತಾಳೆ. ಅಮ್ಮನ ಮಾತೇ ವೇದ ವಾಕ್ಯ.‌ ಆ ರೀತಿ ಪಾತ್ರ ನನ್ನದು. ಅವಳ ವೈಯಕ್ತಿಕ ಜೀವನ, ಅವಳ ಆಸೆ ನೆರವೇರುತ್ತಾ? ಅನ್ನೋದನ್ನು ನೀವು ನೋಡ್ಬೇಕು.‌ಒಂದೊಳ್ಳೆ ತಂಡದ ಜೊತೆ ಕೆಲಸ‌ ಮಾಡುತ್ತಿರುವ ಖುಷಿ ಇದೆ. ಸಿನಿಮಾ ರೀತಿಯೇ ಸೀರಿಯಲ್ ಶೂಟ್ ಮಾಡಲಾಗುತ್ತಿದೆ ಎಂದರು.

ಇದನ್ನೂ ಓದಿ: ಆಲಿಯಾ ಭಟ್ ತಾಯಿ ಯಾರು ಗೊತ್ತಾ? ಒಂದು ಕಾಲದ ಬಾಲಿವುಡ್‌ನ ಸ್ಟಾರ್‌ ಹೀರೋಯಿನ್ ಈಕೆ ! 

ದಿವ್ಯಾ ಉರುಡುಗ ಇದೀಗ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದಾರೆ.‌ ರಚನಾ ಪಾತ್ರದಲ್ಲಿ ದಿವ್ಯಾ ನಟಿಸುತ್ತಿದ್ದಾರೆ. 'ನಿನಗಾಗಿ’ ಧಾರಾವಾಹಿಯ ಕಥೆ ಸೂಪರ್ ಸ್ಟಾರ್ ರಚನಾ ಸುತ್ತ ಸುತ್ತಲಿದೆ. ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿರುವ ರಚನಾಗೆ ಕೋಟ್ಯಂತರ ಅಭಿಮಾನಿಗಳ ಪ್ರೀತಿ, ಆಶೀರ್ವಾದ ಇದೆ. ಆದರೆ, ಅದ್ಯಾಕೋ ರಚನಾಗೆ ಅಮ್ಮನ ಪ್ರೀತಿ ಇಲ್ಲ. ಸೂಪರ್ ಸ್ಟಾರ್ ಆಗಿದ್ದರೂ, ಅಮ್ಮನ ಪ್ರೀತಿ ಕಾಣದ ನಟಿಯ ಕಥೆ ‘ನಿನಗಾಗಿ’.

ನಿನಗಾಗಿ’ ಧಾರಾವಾಹಿಯಲ್ಲಿ ಕಥಾನಾಯಕನಾಗಿ ರಿತ್ವಿಕ್ ಮಠದ್ ಅಭಿನಯಿಸುತ್ತಿದ್ದಾರೆ. ತಾರಾಗಣದಲ್ಲಿ ಪ್ರಿಯಾಂಕ ಕಾಮತ್, ಕಿಶನ್ ಬೆಳಗಲಿ, ವಿಜಯ್ ಕೌಂಡಿನ್ಯ, ಸಿರಿ ಸಿಂಚನ ಮುಂತಾದವರಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News