ಕಾಂಗ್ರೆಸ್ ಆಡಳಿತದಲ್ಲಿ ಹೆಚ್ಚಿದೆ ಹತ್ಯೆ, ಅಭಿವೃದ್ಧಿ ಸಮಾಧಿಯಾಗಿದೆ : ಪ್ರಲ್ಹಾದ ಜೋಶಿ ಆಕ್ರೋಶ

Hubli Anjali murder case : ಅಂಜಲಿ ಅಜ್ಜಿ ಮತ್ತು ‌ಸಹೋದರಿಯರು‌ ಹೇಳಿದ್ದನ್ನು ಕೇಳಿದ್ರೆ ಭಯ ಹುಟ್ಟುತ್ತದೆ. ಈ ಹಿಂದೆಯೆ ಆರೋಪಿ ಬಗ್ಗೆ ದೂರು ನೀಡಿದ್ರು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಅವರ ಆರೋಪ. ಆ ಸಂದರ್ಭ ಯಾವ ಅಧಿಕಾರಿಗಳಿದ್ದರು‌?  ಅವರ ಬಗ್ಗೆಯೂ‌ ತನಿಖೆಯಾಗಬೇಕು ಎಂದು ಸಚಿವ ಜೋಶಿ ಆಗ್ರಹಿಸಿದ್ದಾರೆ. 

Written by - Prashobh Devanahalli | Edited by - Krishna N K | Last Updated : May 19, 2024, 08:46 PM IST
    • ಅಂಜಲಿ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದ ಪ್ರಲ್ಹಾದ್‌ ಜೋಶಿ.
    • ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬರೋಬ್ಬರಿ 490 ಕೊಲೆ
    • 600 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜೋಶಿ ಕಳವಳ
ಕಾಂಗ್ರೆಸ್ ಆಡಳಿತದಲ್ಲಿ ಹೆಚ್ಚಿದೆ ಹತ್ಯೆ, ಅಭಿವೃದ್ಧಿ ಸಮಾಧಿಯಾಗಿದೆ : ಪ್ರಲ್ಹಾದ ಜೋಶಿ ಆಕ್ರೋಶ title=

ಹುಬ್ಬಳ್ಳಿ : ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಹತ್ಯೆ, ಆತ್ಮಹತ್ಯೆ ಕೃತ್ಯಗಳೇ ಅಧಿಕವಾಗಿದ್ದು, ಅಭಿವೃದ್ಧಿ ಸಮಾಧಿಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ಬಿಹಾರ ಪ್ರಚಾರಕ್ಕೆ ತೆರಳಿದ್ದ ಸಚಿವರು ಭಾನುವಾರ ಹುಬ್ಬಳ್ಳಿಗೆ ಬರುತ್ತಲೇ ನೇರ ಅಂಜಲಿ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿ, ಸರ್ಕಾರದ ವಿರುದ್ಧ ಹರಿ ಹಾಯ್ದರು. ರಾಜ್ಯದಲ್ಲಿ ಅಪರಾಧ ಪ್ರಕರಣಗಳು ತೀವ್ರವಾಗಿವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬರೋಬ್ಬರಿ 490 ಕೊಲೆಗಳಾಗಿವೆ. 600 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜೋಶಿ ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ:ಜನಪರ ಸರ್ಕಾರದ ಸಾರ್ಥಕ ಒಂದು ವರ್ಷ : ರಣದೀಪ್ ಸುರ್ಜೆವಾಲ ಶ್ಲಾಘನೆ

ಅಧಿಕಾರಿಗಳ ನಿರ್ಲಕ್ಷ್ಯ; ತನಿಖೆ ಆಗಬೇಕು: ಅಂಜಲಿ ಅಜ್ಜಿ ಮತ್ತು ‌ಸಹೋದರಿಯರು‌ ಹೇಳಿದ್ದನ್ನು ಕೇಳಿದ್ರೆ ಭಯ ಹುಟ್ಟುತ್ತದೆ. ಈ ಹಿಂದೆಯೆ ಆರೋಪಿ ಬಗ್ಗೆ ದೂರು ನೀಡಿದ್ರು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಅವರ ಆರೋಪ. ಆ ಸಂದರ್ಭ ಯಾವ ಅಧಿಕಾರಿಗಳಿದ್ದರು‌?  ಅವರ ಬಗ್ಗೆಯೂ‌ ತನಿಖೆಯಾಗಬೇಕು ಎಂದು ಸಚಿವ ಜೋಶಿ ಆಗ್ರಹಿಸಿದ್ದಾರೆ. ಅಲ್ಲದೆ, ನೇಹಾ ಹತ್ಯೆಯಾದಾಗ ಬಹುದೊಡ್ಡ ಜನಾಂದೋಲನವೇ ಆಯಿತು. ಆ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ ಅವರ ಹೇಳಿಕೆ‌ ಕೃತ್ಯ ನಡೆಸುವವರಿಗೆ‌ ಪ್ರೋತ್ಸಾಹ ನೀಡಿದಂತಾಗಿದೆ ಎಂದರು.

ಸಿಎಂ ಬೇಜವಾಬ್ದಾರಿ ಹೇಳಿಕೆ: ಸಿಎಂ‌ ಸಿದ್ದರಾಂಯ್ಯನವರು ಹೊಣೆಗೇಡಿತನದ ಹೇಳಿಕೆ‌‌ ನೀಡಿದ್ದರ ಪರಿಣಾಮ‌ ಈಗ ಇಂಥ ಕೃತ್ಯಗಳು ಮರುಕಳಿಸುತ್ತಿವೆ. ರಾಜ್ಯ ಸರ್ಕಾರಕ್ಕೆ ಗಂಭೀರತೆಯೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ನಡೆದ ಅಪರಾಧ ಕೃತ್ಯಗಳ ಬಗ್ಗೆ ಪ್ರಶ್ನೆ ಮಾಡಿದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಷ್ಟು ಪ್ರಕರಣಗಳಾಗಿವೆ ಎಂಬುದನ್ನು ಹುಡುಕಲು ಅಧಿಕಾರಿಗಳನ್ನು ನೇಮಿಸುತ್ತಾರೆ. ಅಧಿಕಾರಿಗಳ ವರ್ಗಾವಣೆ ದಂಧೆ: ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆಗೆ ಸಿಕ್ಕಾಪಟ್ಟೆ ಹಣ ತೆಗೆದುಕೊಳ್ತಾರೆ. ಗಾಂಜಾ‌,  ಅಫೀಮು‌ ಚಟುವಟಿಕೆಗಳಿಗೆ‌ ಕಡಿವಾಣ ಹಾಕಲು ಆಗ್ತಿಲ್ಲ. ಕಾನೂನು‌ ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಅಭಿವೃದ್ದಿಯು ಸಮಾಧಿಯಾಗಿದೆ ಎಂದು ಸಚಿವ ಜೋಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:'ಹೆಚ್.ಡಿ.ದೇವೇಗೌಡರ ಜೀವ ಬಲಿ ಪಡೆಯಲು ರಾಜ್ಯ ಕಾಂಗ್ರೆಸ್ ಸರಕಾರ ಸಂಚು'-ಜೆಡಿಎಸ್ ನೇರ ಆರೋಪ

ಪಾಲಕರಲ್ಲಿ ಭಯ: ರಾಜ್ಯದಲ್ಲಿ ಕಡುಬಡ‌ವರು ಹೆಣ್ಣು ಮಕ್ಕಳನ್ನು ಕಾಲೇಜಿಗೆ ಶಾಲೆಗೆ ಕಳುಹಿಸಲು ಭಯಪಡುತ್ತಿದ್ದಾರೆ. ಜನರು ಬೀದಿಗಿಳಿಯುವ ಪರಿಸ್ಥಿತಿಯನ್ನ‌ ಸರ್ಕಾರ ತಂದುಕೊಳ್ಳಬಾರದು ಎಂದು ಜೋಶಿ ಎಚ್ಚರಿಸಿದರು. ಕೊಲೆ, ಹತ್ಯೆ, ಆತ್ಮಹತ್ಯೆ ಪ್ರಕರಣಗಳಲ್ಲಿ ಸರ್ಕಾರ ಗಂಭೀರ ಕ್ರಮ ತೆಗೆದುಕೊಳ್ಳಬೇಕು. ಅದು ಬಿಟ್ಟು ಯಾರೋ ಒಬ್ಬ ಅಧಿಕಾರಿ‌ಯನ್ನು ಅಮಾನತ್ತು ಮಾಡಿ ಕೈ ತೊಳೆದುಕೊಳ್ಳಬಾರದು. ಅಂಜಲಿ ಭಾವಚಿತ್ರಕ್ಕೆ ಪುಷ್ಪ ನಮನ: ದುಷ್ಕರ್ಮಿಯಿಂದ ಹತ್ಯೆಗೀಡಾದ ಹುಬ್ಬಳ್ಳಿ ವೀರಾಪುರ ಓಣಿಯ ಕು.ಅಂಜಲಿ ಅಂಬಿಗೇರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.

ಈ‌ ಸಂದರ್ಭದಲ್ಲಿ ಮಾಜಿ ಶಾಸಕರಾದ ಅಶೋಕ‌ ಕಾಟವೆ, ಅಂಬಿಗೇರ ಸಮಾಜದ ಮುಖಂಡರಾದ ಮಾರುತಿ ಕಬ್ಬೇರ, ಪಕ್ಷದ ಪ್ರಮುಖರಾದ ಶಿವು ಮೆಣಸಿನಕಾಯಿ, ಪ್ರಭು ನವಲಗುಂದಮಠ, ಚಂದ್ರಶೇಖರ ಗೋಕಾಕ, ಬಸವರಾಜ ಅಮ್ಮಿನಬಾವಿ, ಶಶಿ ಬಿಜುವಾಡ, ಅನೂಪ್ ಬಿಜುವಾಡ, ರಾಜು ಜರ್ತಾರಘರ್, ಶಿವಯ್ಯ ಹಿರೇಮಠ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News