ಹನುಮಾನ್‌ ಸಿನಿಮಾ ಡೈರೆಕ್ಟರ್‌ ಜೊತೆ ರಣವೀರ್‌ ಹೊಸ ಸಿನಿಮಾ..! ಟೈಟಲ್‌ ಕೇಳಿದ್ರೆ ಶಾಕ್‌ ಆಗ್ತೀರಾ

Prasanth Varma Ranveer singh : ಬಾಲಿವುಡ್ ನ ಜನಪ್ರಿಯ ಹೀರೋ ರಣವೀರ್ ಸಿಂಗ್ ಜೊತೆ ಪ್ರಶಾಂತ್ ವರ್ಮಾ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಕಳೆದ ಕೆಲ ದಿನಗಳಿಂದ ಕೇಳಿ ಬರುತ್ತಿದ್ದ ಈ ಸುದ್ದಿ ಇದೀಗ ನಿಜವಾಗಿದೆ. ರಣವೀರ್ ಸಿಂಗ್ ನಾಯಕನಾಗಿ ಪ್ರಶಾಂತ್ ವರ್ಮಾ ನಿರ್ದೇಶನದ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.   

Written by - Krishna N K | Last Updated : May 12, 2024, 10:23 PM IST
    • ರಣವೀರ್ ಸಿಂಗ್ ಜೊತೆ ಪ್ರಶಾಂತ್ ವರ್ಮಾ ಸಿನಿಮಾ
    • ಪ್ರಶಾಂತ್ ವರ್ಮಾ ನಿರ್ದೇಶನದ ಚಿತ್ರ ಶೀಘ್ರದಲ್ಲೇ ಬಿಡುಗಡೆ
    • ವರ್ಮಾ ಆಕ್ಷನ್‌ ಕೇಳಲಿರುವ ಸಿನಿಮಾದ ಟೈಟಲ್‌ ರಿವೀಲ್‌ ಆಗಿದೆ..
ಹನುಮಾನ್‌ ಸಿನಿಮಾ ಡೈರೆಕ್ಟರ್‌ ಜೊತೆ ರಣವೀರ್‌ ಹೊಸ ಸಿನಿಮಾ..! ಟೈಟಲ್‌ ಕೇಳಿದ್ರೆ ಶಾಕ್‌ ಆಗ್ತೀರಾ title=

Prasanth Varma upcoming movies : ʼಹನುಮಾನ್ʼ ಚಿತ್ರದ ಮೂಲಕ ಪ್ರಶಾಂತ್ ವರ್ಮಾ ತೆಲುಗಿನಲ್ಲಿ ಮಾತ್ರವಲ್ಲದೆ ಬಾಲಿವುಡ್‌ನಲ್ಲೂ ಉತ್ತಮ ಹಿಟ್ ಪಡೆದರು. ಈ ಹಿನ್ನಲೆಯಲ್ಲಿ ಇದೀಗ ಪ್ರಶಾಂತ್ ವರ್ಮಾಗೆ ಬಾಲಿವುಡ್ ಸ್ಟಾರ್ ಹೀರೋ ಜೊತೆ ಸಿನಿಮಾ ಮಾಡುವ ಅವಕಾಶ ಸಿಕ್ಕಿದ್ದು, ಇದೀಗ ರಣವೀರ್ ಸಿಂಗ್‌ಗೆ ಪ್ರಶಾಂತ್ ವರ್ಮಾ ಆಕ್ಷನ್‌ ಕೇಳಲಿರುವ ಸಿನಿಮಾದ ಟೈಟಲ್‌ ರಿವೀಲ್‌ ಆಗಿದೆ..

ಆ!, ಕಲ್ಕಿ, ಆಂ ನಂತಹ ಉತ್ತಮ ಕಂಟೆಂಟ್ ಇರುವ ಚಿತ್ರಗಳನ್ನು ನಿರ್ದೇಶಿಸಿರುವ ಪ್ರಶಾಂತ್ ವರ್ಮಾ ಇತ್ತೀಚೆಗೆ ಬಿಡುಗಡೆಯಾದ ಹನುಮಾನ್‌ ಚಿತ್ರದ ಮೂಲಕ ಸ್ಟಾರ್ ಡೈರೆಕ್ಟರ್ ಆಗಿ ಮಿಂಚುತ್ತಿದ್ದಾರೆ. ತೇಜ ಸಜ್ಜಾ ನಟನೆಯ ಹನುಮಾನ್‌ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಬ್ಲಾಕ್ ಬಸ್ಟರ್ ಆಯಿತು. ಈ ಸಿನಿಮಾದ ಮುಂದೆ ಸ್ಟಾರ್ ಹೀರೋ ಚಿತ್ರಗಳೂ ಸೋತಿದ್ದವು.

ಇದನ್ನೂ ಓದಿ:ಮ್ಯಾಚ್‌ಗೂ ಮುನ್ನ ಡಿನ್ನರ್‌ ಡೇಟ್‌ ಮಾಡಿದ ವಿರುಷ್ಕಾ..! ಫೊಟೋಸ್‌ ವೈರಲ್‌

ಈ ಸಿನಿಮಾದ ಸೂಪರ್ ಸಕ್ಸಸ್ ನಿಂದ ಪ್ರಶಾಂತ್ ವರ್ಮಾ ಅವರ ರೇಂಜ್ ತುಂಬಾನೇ ಹೆಚ್ಚಿದೆ. ತೆಲುಗು ಪ್ರೇಕ್ಷಕರು ಮಾತ್ರವಲ್ಲದೆ ಬಾಲಿವುಡ್ ನಲ್ಲೂ ಪ್ರಶಾಂತ್ ವರ್ಮಾ ಅವರ ಸಿನಿಮಾಗಳಿಗಾಗಿ ಕಾಯುತ್ತಿದ್ದಾರೆ. ಬಾಲಿವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆಗಳು ಕೂಡ ಪ್ರಶಾಂತ್ ವರ್ಮಾ ಜೊತೆ ಸಿನಿಮಾ ಮಾಡಲು ತಯಾರಾಗುತ್ತಿವೆ. 

ಇತ್ತೀಚೆಗೆ ಬಾಲಿವುಡ್ ನ ಜನಪ್ರಿಯ ಹೀರೋ ರಣವೀರ್ ಸಿಂಗ್ ಜೊತೆ ಪ್ರಶಾಂತ್ ವರ್ಮಾ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಕಳೆದ ಕೆಲ ದಿನಗಳಿಂದ ಕೇಳಿ ಬರುತ್ತಿದ್ದ ಈ ಸುದ್ದಿ ಇದೀಗ ನಿಜವಾಗಿದೆ. ರಣವೀರ್ ಸಿಂಗ್ ನಾಯಕನಾಗಿ ಪ್ರಶಾಂತ್ ವರ್ಮಾ ನಿರ್ದೇಶನದ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. 

ಇದನ್ನೂ ಓದಿ:18 ವರ್ಷಕ್ಕೆ ನಿರ್ಮಾಪಕನನ್ನು ಪ್ರೀತಿಸಿ ಇಸ್ಲಾಂಗೆ ಮತಾಂತರಗೊಂಡಿದ್ದ ಈ ಸ್ಟಾರ್‌ ನಟಿಯ ಸಾವು ಇಂದಿಗೂ ನಿಗೂಢ..!

ಇತ್ತೀಚೆಗಿನ ಮಾಹಿತಿ ಪ್ರಕಾರ, ಇದಕ್ಕೆ ಇಂಟ್ರೆಸ್ಟಿಂಗ್ ಟೈಟಲ್ ಕೂಡ ಫೈನಲ್ ಮಾಡಲಾಗಿದೆ. ಸದಾ ತಮ್ಮ ಸಿನಿಮಾಗಳಿಗೆ ಹೊಸ ಟೈಟಲ್ ಕೊಡುವ ಪ್ರಶಾಂತ್ ವರ್ಮ ಈ ಸಿನಿಮಾಗೆ ʼಬ್ರಹ್ಮ ರಾಕ್ಷಸʼ ಅಂತ ಟೈಟಲ್ ಇಟ್ಟಿದ್ದಾರಂತೆ. ಈ ಟೈಟಲ್ ಕೇಳಿದ ನಂತರ ಈ ನಿರ್ದೇಶಕರು ಮತ್ತೊಂದು ವಿಚಿತ್ರ ಕಥೆಯೊಂದಿಗೆ ಬರಲಿದ್ದಾರೆ ಎಂದು ಪ್ರೇಕ್ಷಕರು ಮತ್ತೊಮ್ಮೆ ನಿರೀಕ್ಷಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News