Priyanka Chopra: ಐಷಾರಾಮಿ ಬಂಗಲೆಗೆ ಮರಳಿದ ಸಂಭ್ರಮದಲ್ಲಿ ದೇಸಿ ಗರ್ಲ್: ವಿಲ್ಲಾ ಹೇಗಿದೆ ಗೊತ್ತೇ??

Priyanka Chopra Villa: ಬಾಲಿವುಡ್‌ ಜನಪ್ರಿಯ ನಟಿ ಪ್ರಿಯಾಂಕ ಚೋಪ್ರಾ ಅಮೇರಿಕಾದ ಲಾಸ್ ಏಂಜಲೀಸ್‌ನಲ್ಲಿರುವ 20 ಮಿಲಿಯನ್ ಬೆಲೆ ಬಾಳುವ  ಐಷಾರಾಮಿ ಬಂಗಲೆ ಮರಳಿದ್ದಾರೆ. ಈ ವಿಷಯವನ್ನು ಸೋಶಿಯಲ್‌ ಮಿಡಯಾದಲ್ಲಿ ಹಂಚಿಕೊಂಡಿದ್ದಾರೆ. ಇದರ ಕುರಿತು ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : May 17, 2024, 10:52 AM IST
  • ನಟಿ ಪ್ರಿಯಂಕಾ ಲಾಸ್ ಏಂಜಲೀಸ್‌ನ ಮನೆಯ ಬಾಲ್ಕನಿ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡು "ಮನೆಯಲ್ಲಿದ್ದರೆ... ನನ್ನ ಆತ್ಮವನ್ನು ಪೋಷಿಸುತ್ತದೆ"ಎಂದು ಬರೆದುಕೊಂಡಿದ್ದಾರೆ.
  • ಈ ನಟಿಯ ಮನೆಯಲ್ಲಿನ ಪೂಲ್ ಮತ್ತು ಸ್ಪಾ ಪ್ರದೇಶದಲ್ಲಿ ಮಾಲಿನ್ಯದಿಂದಾಗಿ ‘ಪೋರಸ್ ವಾಟರ್ಫ್ರೂಫಿಂಗ್’ ನಂತಹ ಸಮಸ್ಯೆಗಳು ಬಂದಿದ್ದರಿಂದ ದೂರುವಿದ್ದರು.
  • ನಟಿ ಪ್ರಿಯಾಂಕಾ ಹಾಗೂ ನಿಕ್‌ ಈ ಮನೆಯನ್ನು 2019 ರಲ್ಲಿ 166 ಕೋಟಿಗೆ ಖರೀದಿಸಿದ್ದು, ಇದೀಗ ಈ ದಂಪತಿ ನವೀಕರಿಸಿದ ಮನೆಗೆ ಮರಳಿದ್ದಾರೆ.
Priyanka Chopra: ಐಷಾರಾಮಿ ಬಂಗಲೆಗೆ ಮರಳಿದ ಸಂಭ್ರಮದಲ್ಲಿ ದೇಸಿ ಗರ್ಲ್: ವಿಲ್ಲಾ ಹೇಗಿದೆ ಗೊತ್ತೇ?? title=

Priyanka Chopra Back To Villa: ಬಾಲಿವುಡ್‌ ನಟಿ ಪ್ರಿಯಾಂಕ ಚೋಪ್ರಾ ತಮ್ಮ ದುಬಾರಿ ಬಂಗಲೆಗೆ ಮರಳಿ ಬಂದಿದ್ದಾರೆ. ಈ ನಟಿ 20 ಮಿಲಿಯನ್ ಬೆಲೆ ಬಾಳುವ ಭವ್ಯ ಬಂಗಲೆಯ ಫೋಟೋವನ್ನು ಸೋಶಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟಿ ಪ್ರಿಯಂಕಾ ಲಾಸ್ ಏಂಜಲೀಸ್‌ನ  ಮನೆಯ ಬಾಲ್ಕನಿ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡು "ಮನೆಯಲ್ಲಿದ್ದರೆ... ನನ್ನ ಆತ್ಮವನ್ನು ಪೋಷಿಸುತ್ತದೆ"ಎಂದು ಬರೆದುಕೊಂಡಿದ್ದಾರೆ.

ಅಮೇರಿಕಾದ ಲಾಸ್ ಏಂಜಲೀಸ್‌ನಲ್ಲಿರುವ ಪ್ರಿಯಾಂಕಾಳ ಮನೆಯಲ್ಲಿ 7 ಬೆಡ್ ರೂಮ್, 9 ಬಾತ್ ರೂಮ್, ದೊಡ್ಡ ಅಡುಗೆ ಮನೆ ಇದೆ. ಮತ್ತೆ ವೈನ್ ಕೌಂಟರ್, ಒಳಾಂಗಣ ಬಾಸ್ಕೆಟ್ ಬಾಲ್ ಕೋರ್ಟ್, ಬೌಲಿಂಗ್ ಸ್ಪೇಸ್, ಹೋಮ್ ಥಿಯೇಟರ್, ಎಂಟರ್ ಟೈನ್ಮೆಂಟ್ ರೂಮ್, ಸ್ಟೀಮ್ ಶವರ್ ನೊಂದಿಗೆ ಸ್ಪಾ, ಕಂಪ್ಲೀಟ್ ಜಿಮ್ ಮತ್ತು ಬಿಲಿಯರ್ಡ್ಸ್ ರೂಮ್ ಸಹ ಇದೆ. ಈ ನಟಿಯ ಮನೆಯಲ್ಲಿನ ಪೂಲ್ ಮತ್ತು ಸ್ಪಾ ಪ್ರದೇಶದಲ್ಲಿ ಮಾಲಿನ್ಯದಿಂದಾಗಿ ‘ಪೋರಸ್ ವಾಟರ್ಫ್ರೂಫಿಂಗ್’ ನಂತಹ ಸಮಸ್ಯೆಗಳು ಬಂದಿದ್ದರಿಂದ ದೂರುವಿದ್ದರು.

ಇದನ್ನೂ ಓದಿ: ಅಪ್ಪ-ಮಗಳ 'ಸಿ'ಗೆ ಆಕ್ಷನ್ ಪ್ರಿನ್ಸ್ ಧ್ರುವ ಸ್ರಜಾ ಸಾಥ್..! ಜುಲೈ 12ಕ್ಕೆ ತೆರೆಗೆ

ನಟಿ ಪ್ರಿಯಾಂಕಾ ಮನೆಯಲ್ಲಿ ನೀರಿನ ಸೋರಿಕೆ ಕಾಣಿಸಿಕೊಂಡಿದ್ದು, ಆಂತರಿಕ ಪ್ರದೇಶದ ಒಂದು ಭಾಗ ಕೂಡಾ ಹಾನಿಯಾಗಿದೆ. ಈ ಮನೆ ವಾಸಕ್ಕೆ ಯೋಗ್ಯವಲ್ಲವೆಂದು ಮತ್ತು ಆರೋಗ್ಯದ ದೃಷ್ಟಿಕೋನದಿಂದ ಅಲ್ಲಿರುವುದು ಅಪಾಯಕಾರಿಯೆಂದು ದೂರನ್ನು ನೀಡಿದ್ದರು. ಈ ಐಷಾರಾಮಿ ಮನೆಯ ವಿಚಾರವಾಗಿ ಮೇ 2023ರಿಂದಲೂ ಕಾನೂನು ಹೋರಾಟ ನಡೆಯುತ್ತಿತ್ತು. ನಟಿ ಪ್ರಿಯಾಂಕಾ ಹಾಗೂ ನಿಕ್‌ ಈ ಮನೆಯನ್ನು 2019 ರಲ್ಲಿ 166 ಕೋಟಿಗೆ ಖರೀದಿಸಿದ್ದು, ಇದೀಗ ಈ ದಂಪತಿ ನವೀಕರಿಸಿದ ಮನೆಗೆ ಮರಳಿದ್ದಾರೆ.

ಸದ್ಯ ನಟಿ ಪ್ರಿಯಾಂಕಾ ಮತ್ತು ನಿಕ್‌ ತಮ್ಮ ಮುದ್ದು ಮಗಳು ಮಾಲ್ಟಿ ಮೇರಿ ಚೋಪ್ರಾ ಜೋನಾಸ್ ಜೊತೆಗೆ ಈ ದುಬಾರಿ ಮನೆಯಲ್ಲಿ ವಾಸವಾಗಲಿದ್ದಾರೆ. ಅಮೆರಿಕಾದಲ್ಲಿ ನೆಲೆಸಿರುವ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಬಾಲಿವುಡ್‌ಗೆ ಮತ್ತೆ ಕಮ್ ಬ್ಲ್ಯಾಕ್ ಮಾಡಲಿದ್ದಾರೆಂಬ ಸುದ್ದಿ ಹಬ್ಬಿದೆ. ಹಾಗೆ ಈ ನಟಿ ಫರ್ಹಾನ್ ಅಖ್ತರ್ ಅವರ ‘ಝೀ ಲೆ ಜರಾ’ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆ ಮೇಲೆ ಅಬ್ಬರಿಸಲಿದ್ದಾರೆಂಬ ಮಾತು ಕೇಳಿಬಂದಿತ್ತು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News