Benefits of Bottle Gourd: ನಿಮ್ಮ ಡಯಟ್ನಲ್ಲಿ ಸೋರೆಕಾಯಿ ಸೇರಿಸಿ, ಈ ಸಮಸ್ಯೆಗಳಿಂದ ಪರಿಹಾರ ಪಡೆಯಿರಿ

Benefits of Bottle Gourd:  ಹಸಿರು ತರಕಾರಿಗಳನ್ನು ತಿನ್ನುವುದರ ಪ್ರಯೋಜನಗಳು ನಿಮಗೆ ತಿಳಿದಿವೆ, ಆದರೆ ನಿಮ್ಮ ಆಹಾರದಲ್ಲಿ ಸೋರೆಕಾಯಿಯನ್ನು ಸೇರಿಸುವುದು ನಿಮಗೆ ಎಷ್ಟು ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ?

Written by - Yashaswini V | Last Updated : Sep 21, 2021, 12:10 PM IST
  • ಸೋರೆಕಾಯಿಯಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಮತ್ತು ಕ್ಷಾರೀಯ ಅಂಶವಿದೆ
  • ಇದು ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ
  • ಇದು ಜೀರ್ಣಕ್ರಿಯೆಗೆ ಸಹಕಾರಿ
Benefits of Bottle Gourd: ನಿಮ್ಮ ಡಯಟ್ನಲ್ಲಿ ಸೋರೆಕಾಯಿ ಸೇರಿಸಿ, ಈ ಸಮಸ್ಯೆಗಳಿಂದ ಪರಿಹಾರ ಪಡೆಯಿರಿ title=
Benefits of bottle gourd: ನಿಮ್ಮ ಡಯಟ್ನಲ್ಲಿ ಸೋರೆಕಾಯಿ ಸೇರಿಸಿ, ಈ ಸಮಸ್ಯೆಗಳಿಂದ ಪರಿಹಾರ ಪಡೆಯಿರಿ

ಬೆಂಗಳೂರು: Benefits of Bottle Gourd- ಹಸಿರು ತರಕಾರಿಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ.  ಆದರೆ ನಿಮ್ಮ ಆಹಾರದಲ್ಲಿ ಸೋರೆಕಾಯಿಯನ್ನು ಸೇರಿಸುವುದು ನಿಮಗೆ ಎಷ್ಟು ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ತಜ್ಞರ ಪ್ರಕಾರ, ಸೋರೆಕಾಯಿಯು ನಿಮ್ಮ ದೇಹಕ್ಕೆ ತಂಪಾಗುವ ಪರಿಣಾಮವನ್ನು ನೀಡುವುದು ಮಾತ್ರವಲ್ಲದೆ, ಇದು ನಿಮ್ಮ ಹೃದಯಕ್ಕೆ ಒಳ್ಳೆಯದು ಮತ್ತು ನಿದ್ರೆಗೆ ಸಂಬಂಧಿಸಿದ ತೊಂದರೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ನಿಮ್ಮ ಡಯಟ್ ನಲ್ಲಿ ಸೋರೆಕಾಯಿಯನ್ನು ಸೇರಿಸುವುದರ ಮಹತ್ವವನ್ನು ತಪ್ಪದೇ ತಿಳಿಯಿರಿ.

ಒತ್ತಡವನ್ನು ಕಡಿಮೆ ಮಾಡುವಲ್ಲಿ ಸೋರೆಕಾಯಿ ಪರಿಣಾಮಕಾರಿ:
ಸೋರೆಕಾಯಿಯನ್ನು ಪ್ರತಿದಿನ ಸೇವಿಸುವುದರಿಂದ ಒತ್ತಡವನ್ನು ಕಡಿಮೆ ಮಾಡಲು (Reducing Stress) ಸಹಾಯ ಮಾಡುತ್ತದೆ. ಸೋರೆಕಾಯಿಯಲ್ಲಿರುವ ನೀರಿನ ಅಂಶವು ನಿಮ್ಮ ದೇಹದ ಮೇಲೆ ತಂಪಾಗುವ ಪರಿಣಾಮವನ್ನು ಬೀರುತ್ತದೆ. 

ಹೃದಯಕ್ಕೆ ಆರೋಗ್ಯಕರ:
ಸೋರೆಕಾಯಿಯ (Bottle Gourd) ಸೇವನೆಯು ಹೃದಯಕ್ಕೆ ಆರೋಗ್ಯಕರವೆಂದು ಪರಿಗಣಿಸಲಾಗಿದೆ. ವಾರಕ್ಕೆ ಎರಡು ಅಥವಾ ಮೂರು ಬಾರಿ ಸೋರೆಕಾಯಿಯ ರಸವನ್ನು ಸೇವಿಸುವುದರಿಂದ ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಇದರ ಜೊತೆಗೆ, ಇದು ರಕ್ತದೊತ್ತಡವನ್ನು ಸಹ ನಿಯಂತ್ರಿಸುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- ಈ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿಡುವ ತಪ್ಪನ್ನು ಎಂದಿಗೂ ಮಾಡಬೇಡಿ, ಲಾಭದ ಬದಲು ನಷ್ಟವಾಗಬಹುದು

ತೂಕ ಕಳೆದುಕೊಳ್ಳುವಲ್ಲಿ ಸಹಕಾರಿ: 
ಪ್ರತಿದಿನ ನಿರ್ದಿಷ್ಟ ಪ್ರಮಾಣದಲ್ಲಿ ಸೋರೆಕಾಯಿಯ ರಸವನ್ನು ಕುಡಿಯುವುದರಿಂದ ತೂಕ ಇಳಿಸಿಕೊಳ್ಳಲು (Weight Loss) ಸಹಾಯ ಮಾಡುತ್ತದೆ. ಸೋರೆಕಾಯಿಯಲ್ಲಿ ಕಬ್ಬಿಣ, ವಿಟಮಿನ್ ಮತ್ತು ಪೊಟ್ಯಾಶಿಯಂ ಸಮೃದ್ಧವಾಗಿದೆ. ಹಾಗಾಗಿ ಸೋರೆಕಾಯಿಯ ರಸವನ್ನು ಕುಡಿಯುವುದರಿಂದ ನಿಮಗೆ ಪ್ರಯೋಜನವಾಗುತ್ತದೆ.

ನಿದ್ರೆಗೆ ಸಂಬಂಧಿಸಿದ ತೊಂದರೆಗಳನ್ನು ನಿವಾರಿಸಲು: 
ಇತ್ತೀಚಿನ ಜೀವನ ಶೈಲಿಯಿಂದಾಗಿ ಕಂಡುಬರುವ ಪ್ರಮಖ ಸಮಸ್ಯೆಗಳಲ್ಲಿ ಒಂದು ನಿದ್ರಾಹೀನತೆ. ಈ ಸಮಸ್ಯೆ ಬಹುತೇಕ ಜನರಲ್ಲಿ ಕಂಡುಬರುತ್ತದೆ. ಸೋರೆಕಾಯಿ ನಿದ್ರೆಗೆ ಸಂಬಂಧಿಸಿದ ತೊಂದರೆಗಳನ್ನು (Sleeping Disorders) ನಿವಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಸೋರೆಕಾಯಿಯ ರಸವನ್ನು ಸೇವಿಸುವುದರಿಂದ ಒಳ್ಳೆಯ ನಿದ್ರೆ ಬರುತ್ತದೆ ಎನ್ನಲಾಗಿದೆ.

ಇದನ್ನೂ ಓದಿ- ಹಣ್ಣುಗಳ ಜ್ಯೂಸ್ ತೆಗೆಯುವಾಗ ನೀವೂ ಈ ಕೆಲಸ ಮಾಡುತ್ತಿಲ್ಲವಲ್ಲ? ಲಾಭದ ಬದಲು ಹಾನಿಯೇ ಜಾಸ್ತಿ

ಅಕಾಲಿಕ ಕೂದಲು ಉದುರುವುದನ್ನು ತಡೆಯಲು:
ಹವಾಮಾನ ಬದಲಾವಣೆ ಮತ್ತು ನಮ್ಮ ಆಹಾರ ಪದ್ಧತಿಯಿಂದಾಗಿ, ಕೂದಲು ಅಕಾಲಿಕವಾಗಿ ಬೆಳ್ಳಗಾಗುತ್ತವೆ. ಇದಲ್ಲದೆ ಕೂದಲುದುರುವ ಸಮಸ್ಯೆ  ಕೂಡ ಉಂಟಾಗುತ್ತದೆ. ನೀವು ಪ್ರತಿನಿತ್ಯ ಒಂದು ಲೋಟ ಸೋರೆಕಾಯಿ ಜ್ಯೂಸ್ ಕುಡಿಯುತ್ತಿದ್ದರೆ, ಇದು ಟೆಕ್ಸ್ಚರ್ ಅನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಕೂದಲು ಬೆಳ್ಳಗಾಗುವುದನ್ನು ತಡೆಯುತ್ತದೆ.

ಜೀರ್ಣಕ್ರಿಯೆ (Digestion) :
ಸೋರೆಕಾಯಿಯು ಸಾಕಷ್ಟು ಪ್ರಮಾಣದ ಫೈಬರ್ ಮತ್ತು ಕ್ಷಾರೀಯ ಅಂಶವನ್ನು ಹೊಂದಿರುತ್ತದೆ, ಇದು ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ಜೀರ್ಣಕ್ರಿಯೆಗೆ (Digestion) ಸಹಾಯ ಮಾಡುತ್ತದೆ.

ಸೂಚನೆ: ಇಲ್ಲಿ ನೀಡಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News