ಸೋರೆಕಾಯಿ ಸೇವನೆಯಿಂದ ಸಿಗುವ ಪ್ರಮುಖ ಪ್ರಯೋಜನಗಳಿವು

ಸೋರೆಕಾಯಿಯ ಪ್ರಯೋಜನಗಳು:  ಕೆಲವರು ಸೋರೆಕಾಯಿ ಎಂದರೆ ಮೈಲಿ ದೂರ ಓಡಿ ಹೋಗುತ್ತಾರೆ. ಆದರೆ ಅದರಿಂದ ದೊರೆಯುವ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿದರೆ ಖಂಡಿತವಾಗಿಯೂ ನೀವು ಅದನ್ನು ತಪ್ಪದೇ ಸೇವಿಸುತ್ತೀರಿ.

Written by - Yashaswini V | Last Updated : Apr 25, 2022, 02:52 PM IST
  • ಸೋರೆಕಾಯಿಯಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಸತುವುಗಳಂತಹ ಪೋಷಕಾಂಶಗಳು ಕಂಡುಬರುತ್ತವೆ.
  • ಇದು ಮೂಳೆಗಳನ್ನು ಬಲಗೊಳಿಸಲು ಸಹಕಾರಿಯಾಗಿದೆ.
  • ಸೋರೆಕಾಯಿ ತೂಕವನ್ನು ಕಡಿಮೆ ಮಾಡಲು ಸಹ ತುಂಬಾ ಪ್ರಯೋಜನಕಾರಿಯಾಗಿದೆ.
ಸೋರೆಕಾಯಿ  ಸೇವನೆಯಿಂದ ಸಿಗುವ ಪ್ರಮುಖ ಪ್ರಯೋಜನಗಳಿವು  title=
Bottle Gourd Benefits

ಸೋರೆಕಾಯಿಯ ಪ್ರಯೋಜನಗಳು:  ಬೇಸಿಗೆಯಲ್ಲಿ ಸೋರೆಕಾಯಿ ಸೇವಿಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಗಳನ್ನು ನೀಡುತ್ತದೆ. ತೂಕವನ್ನು ಕಡಿಮೆ ಮಾಡುವುದರಿಂದ, ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಸೋರೆಕಾಯಿ ಪರಿಹಾರ ನೀಡಲಿದೆ. ಇದಲ್ಲದೇ ಬೇಸಿಗೆ ಕಾಲದಲ್ಲಿ ಸೋರೆಕಾಯಿಯನ್ನು ಸೇವಿಸುವುದರಿಂದ ಆರೋಗ್ಯವನ್ನು ಸದೃಢವಾಗಿರಿಸಿಕೊಳ್ಳಬಹುದು. ಎದೆಯುರಿ, ದೇಹದಲ್ಲಿ ನೀರಿನ ಕೊರತೆ, ಶಾಖದಿಂದ ತಲೆಸುತ್ತು, ಉಸಿರಾಟದ ತೊಂದರೆ ಇಂತಹ ಹಲವು ಸಮಸ್ಯೆಗಳಿಂದ ಸೋರೆಕಾಯಿ ಕಾಪಾಡುತ್ತದೆ. 

ಸೋರೆಕಾಯಿಯ 5 ದೊಡ್ಡ ಪ್ರಯೋಜನಗಳನ್ನು ತಿಳಿಯಿರಿ:
1. ತೂಕವನ್ನು ಕಡಿಮೆ ಮಾಡುವಲ್ಲಿ ಪ್ರಯೋಜನಕಾರಿ:

ಸೋರೆಕಾಯಿ ತೂಕವನ್ನು ಕಡಿಮೆ ಮಾಡಲು ಸಹ ತುಂಬಾ ಪ್ರಯೋಜನಕಾರಿಯಾಗಿದೆ. ಬಾಟಲ್ ಸೋರೆಕಾಯಿಯಲ್ಲಿ ವಿಟಮಿನ್-ಸಿ, ಸೋಡಿಯಂ, ಫೈಬರ್ ಮತ್ತು ಕಬ್ಬಿಣದ ಸಮೃದ್ಧವಾಗಿದೆ. ಇದರ ಸೇವನೆಯಿಂದ ನಿಮ್ಮ ತೂಕವನ್ನು ಆರೋಗ್ಯಕವಾಗಿ ಕಡಿಮೆ ಮಾಡಬಹುದು.

2. ಮೂಳೆಗಳು ಸಹ ಬಲವಾಗಿರುತ್ತವೆ:
ಸೋರೆಕಾಯಿಯನ್ನು ತಿನ್ನುವುದು ಮೂಳೆಗಳನ್ನು ಬಲಪಡಿಸುತ್ತದೆ. ಏಕೆಂದರೆ ಅದರಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಸತುವುಗಳಂತಹ ಪೋಷಕಾಂಶಗಳು ಕಂಡುಬರುತ್ತವೆ, ಇದು ನಿಮ್ಮ ಮೂಳೆಗಳನ್ನು ಬಲಪಡಿಸುತ್ತದೆ.  

ಇದನ್ನೂ ಓದಿ- ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಬಡವರ ಬಾದಾಮಿಯನ್ನು ಈ ಸಮಯದಲ್ಲಿ ಎಂದಿಗೂ ಸೇವಿಸಬೇಡಿ

3. ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ:
ಸೋರೆಕಾಯಿ ತಿನ್ನುವುದರಿಂದ ಹೃದಯಾಘಾತದ ಅಪಾಯವೂ ಕಡಿಮೆಯಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಇದನ್ನು ಸೇವಿಸುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಸಮತೋಲನದಲ್ಲಿರುತ್ತದೆ. ಇದಲ್ಲದೆ, ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

4. ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರ;
ಇದರ ಹೊರತಾಗಿ, ಕೂದಲು ಅಕಾಲಿಕವಾಗಿ ಬಿಳಿಯಾಗುವ ಸಮಸ್ಯೆಯಲ್ಲೂ ನೀವು ಪ್ರಯೋಜನವನ್ನು ಪಡೆಯಬಹುದು. ಪ್ರತಿನಿತ್ಯ ಒಂದು ಲೋಟ ಸೋರೆಕಾಯಿ ಜ್ಯೂಸ್ ಕುಡಿದರೆ ಕೂದಲು ಬೆಳೆಯುವುದರ ಜೊತೆಗೆ ಅದು ಬಿಲಿಯಾಗುವುದನ್ನು ತಡೆಯಬಹುದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Diabetes Control:ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇಲ್ಲಿದೆ ಸುಲಭ ಉಪಾಯ

5. ಒತ್ತಡವೂ ಕಡಿಮೆ ಆಗುತ್ತದೆ:
ಬದಲಾಗುತ್ತಿರುವ ಜೀವನಶೈಲಿಯಿಂದಾಗಿ, ಹೆಚ್ಚಿನ ಜನರು ಒತ್ತಡದಲ್ಲಿ ಬದುಕುತ್ತಾರೆ. ಇದು ಅನೇಕ ರೋಗಗಳಿಗೆ ಆಹ್ವಾನ ನೀಡಿದಂತೆ ಎಂದರೂ ತಪ್ಪಾಗಲಾರದು. ಆದರೆ, ಸೋರೆಕಾಯಿ ಸೇವನೆಯಿಂದ ಒತ್ತಡವೂ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News