ತುಪ್ಪದ ಜೊತೆಗೆ ಈ ವಸ್ತು ಬೆರೆಸಿ ತಿನ್ನಿ, ಶೀತ ನೆಗಡಿ ಕಟ್ಟಿದ ಮೂಗಿಗೆ ಶೀಘ್ರ ಸಿಗುವುದು ಪರಿಹಾರ

Cough Home Remedies:ದೇಸಿ ತುಪ್ಪವು ಕಫದ ಸಮಸ್ಯೆಯನ್ನು ನಿವಾರಿಸುತ್ತದೆ. ಇದರಿಂದ ಕಟ್ಟಿದ ಮೂಗಿನ ಸಮಸ್ಯೆಯೂ ನಿವಾರಣೆಯಾಗುತ್ತದೆ.

Written by - Ranjitha R K | Last Updated : Oct 25, 2023, 01:45 PM IST
  • ನೆಗಡಿ, ಕೆಮ್ಮು ಮತ್ತು ಗಂಟಲು ನೋವಿನಂತಹ ಸಾಮಾನ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
  • ತುಪ್ಪವು ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.
  • ತುಪ್ಪವನ್ನು ಬಳಸುವುದು ಹೇಗೆ ಎಂದು ತಿಳಿದುಕೊಳ್ಳಬೇಕು.
ತುಪ್ಪದ ಜೊತೆಗೆ ಈ ವಸ್ತು ಬೆರೆಸಿ ತಿನ್ನಿ, ಶೀತ ನೆಗಡಿ ಕಟ್ಟಿದ ಮೂಗಿಗೆ ಶೀಘ್ರ ಸಿಗುವುದು ಪರಿಹಾರ  title=

Cough Home Remedies : ಹವಾಮಾನ ವೈಪರೀತ್ಯದಿಂದಾಗಿ ಜನರು ನೆಗಡಿ, ಕೆಮ್ಮು ಮತ್ತು ಗಂಟಲು ನೋವಿನಂತಹ ಸಾಮಾನ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಈ ಸಮಸ್ಯೆಯನ್ನು ಮನೆ ಮದ್ದಿನ ಮೂಲಕವೇ ಸರಿಪಡಿಸಬಹುದು. ಈ ಮೂಲಕ ಶೀತ, ಕೆಮ್ಮು ಕಟ್ಟಿದ ಮೂಗಿನಿಂದ ಪರಿಹಾರ ಕಂಡು ಕೊಳ್ಳಬಹುದು. 

ತುಪ್ಪವು ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಸೋಂಕುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ದೇಸಿ ತುಪ್ಪವು ಕಫದ ಸಮಸ್ಯೆಯನ್ನು ನಿವಾರಿಸುತ್ತದೆ. ಇದರಿಂದ ಕಟ್ಟಿದ ಮೂಗಿನ ಸಮಸ್ಯೆಯೂ ನಿವಾರಣೆಯಾಗುತ್ತದೆ. ಆದರೆ, ತುಪ್ಪವನ್ನು ಬಳಸುವುದು ಹೇಗೆ ಎಂದು ತಿಳಿದಿರಬೇಕು. 

ಇದನ್ನೂ ಓದಿ : ರಕ್ತದಲ್ಲಿನ ಹೆಚ್ಚಿನ ಸಕ್ಕರೆ ಮಟ್ಟಕ್ಕೆ ಕಡಿವಾಣ ಹಾಕುತ್ತೆ ಈ ಆಯುರ್ವೇದ ಗಿಡಮೂಲಿಕೆ!

ಹಾಲಿನೊಂದಿಗೆ ತುಪ್ಪ:
ಶೀತ ಇರುವಾಗ ತುಪ್ಪ ಮತ್ತು ಓಮ ಬೆರೆಸಿದ ಹಾಲನ್ನು ಕುಡಿಯುವುದರಿಂದ ಶೀತ ಮತ್ತು ಕೆಮ್ಮು ನಿವಾರಣೆಯಾಗುತ್ತದೆ. ಹಾಲನ್ನು ಬಿಸಿ ಮಾಡಿ ನಂತರ ಅದಕ್ಕೆ ಒಂದು ಚಮಚ ತುಪ್ಪ ಮತ್ತು ಸ್ವಲ್ಪ ಓಮವನ್ನು ಸೇರಿಸಿ. ರಾತ್ರಿ ಮಲಗುವ ಮುನ್ನ ಈ ಹಾಲನ್ನು ಕುಡಿಯಿರಿ. ಓಮ ಮತ್ತು ತುಪ್ಪ ಎರಡರಲ್ಲೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಇದು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ತುಪ್ಪವು ದೇಹದ ಉಷ್ಣತೆಯನ್ನು ಕಾಪಾಡುತ್ತದೆ. 

ತುಪ್ಪ ಮತ್ತು ಕರಿಮೆಣಸಿನ ಚಹಾ:
ತುಪ್ಪ ಮತ್ತು ಕರಿಮೆಣಸಿನ ಚಹಾವನ್ನು ಕುಡಿಯುವುದರಿಂದ ಗಂಟಲು ನೋವು ಮತ್ತು ಕೆಮ್ಮಿನಿಂದ ಪರಿಹಾರ ಸಿಗುತ್ತದೆ. ಒಂದು ಕಪ್ ನೀರಿನಲ್ಲಿ ಒಂದು ಚಮಚ ತುಪ್ಪ, ಎರಡು ಚಿಟಿಕೆ ಕರಿಮೆಣಸು ಮತ್ತು ಸ್ವಲ್ಪ ಶುಂಠಿಯನ್ನು ಸೇರಿಸಿ. ಸ್ವಲ್ಪ ಸಮಯ ಇದನ್ನು ಕುದಿಸಿ ನಂತರ ಫಿಲ್ಟರ್ ಮಾಡಿ ಕುಡಿಯಿರಿ. ತುಪ್ಪ ಮತ್ತು ಕರಿಮೆಣಸು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದನ್ನು ಕುಡಿಯುವುದರಿಂದ ಗಂಟಲು ನೋವು ಮತ್ತು ಕೆಮ್ಮಿನಿಂದ ಪರಿಹಾರವನ್ನು ನೀಡುತ್ತದೆ.

ಇದನ್ನೂ ಓದಿ : ನೆನೆಸಿದ ಖರ್ಜೂರ ತಿಂದರೆ ಆರೋಗ್ಯಕ್ಕಿವೆ ಹಲವಾರು ಲಾಭಗಳು..! ತಪ್ಪದೇ ಸೇವಿಸಿ

ಜೇನುತುಪ್ಪ ಮತ್ತು ತುಪ್ಪದ ಮಿಶ್ರಣ:
ಮಲಗುವ ಮೊದಲು ಒಂದು ಚಮಚ ತುಪ್ಪ ಮತ್ತು ಜೇನುತುಪ್ಪವನ್ನು ಬೆರೆಸಿ ನೆಕ್ಕುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ. ಜೇನುತುಪ್ಪ ಮತ್ತು ತುಪ್ಪ ಎರಡೂ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ. ಈ ಗುಣಲಕ್ಷಣಗಳು ಕಫವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಮಲಗುವ ಮುನ್ನ ಜೇನುತುಪ್ಪ ಮತ್ತು ತುಪ್ಪದ ಮಿಶ್ರಣವನ್ನು ತೆಗೆದುಕೊಳ್ಳುವುದರಿಂದ ಕಫವನ್ನು ಸುಲಭವಾಗಿ ಹೊರಹಾಕಲು ಸಹಾಯ ಮಾಡುತ್ತದೆ.

ಮೂಗಿಗೆ ಎರಡು ಹನಿ ಉಗುರು ಬೆಚ್ಚಗಿನ ತುಪ್ಪ ಹಾಕಿ : 
ಮೂಗು ಕಟ್ಟಿಕೊಂಡರೆ ಎರಡು ಹನಿ ಉಗುರುಬೆಚ್ಚಗಿನ ತುಪ್ಪವನ್ನು ಮೂಗಿಗೆ ಹಾಕಿದರೆ ಮೂಗು ತೆರೆಯಲು ಸಹಾಯವಾಗುತ್ತದೆ. ತುಪ್ಪವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಈ ಗುಣಲಕ್ಷಣಗಳು ಮೂಗಿನಲ್ಲಿ ಸಂಗ್ರಹವಾದ ಕಫವನ್ನು ತೆಗೆಯಲು ಸಹಾಯ ಮಾಡುತ್ತದೆ. ಎರಡು ಹನಿ ಉಗುರುಬೆಚ್ಚಗಿನ ತುಪ್ಪವನ್ನು ಮೂಗಿಗೆ ಹಾಕಿದರೆ ಕಫ ಹೊರಬಂದು ಮೂಗು ತೆರೆದುಕೊಳ್ಳುತ್ತದೆ.

ಇದನ್ನೂ ಓದಿ : ನೀವು ಪ್ರತಿದಿನ ಮೊಸರು ತಿನ್ನುತ್ತೀರಾ? ಹಾಗಿದ್ದಲ್ಲಿ ಅದರ ಅಪಾಯಕಾರಿ ಪರಿಣಾಮವನ್ನು ಕೂಡಲೇ ತಿಳಿದುಕೊಳ್ಳಿ 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News