ಕಿಡ್ನಿ ಸ್ಟೋನ್ ರೋಗಿಗಳು ತಪ್ಪಿಯೂ ಈ 5 ಹಣ್ಣುಗಳನ್ನು ಸೇವಿಸಬಾರದು

Fruits To Avoid During Kidney Stones: ಉತ್ತಮ ಆರೋಗ್ಯಕ್ಕೆ ಸೊಪ್ಪು-ತರಕಾರಿಗಳಂತೆ ಹಣ್ಣುಗಳು ಕೂಡ ಬಹಳ ಮುಖ್ಯ. ಹಣ್ಣುಗಳು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಕೆಲವು  ಆರೋಗ್ಯ ಸಮಸ್ಯೆ ಇರುವವರು ಯಾವ ಹಣ್ಣುಗಳನ್ನು ಸೇವಿಸಬೇಕು, ಯಾವ ಹಣ್ಣುಗಳಿಂದ ಅಂತರ ಕಾಯ್ದುಕೊಳ್ಳಬೇಕು ಎಂಬುದನ್ನು ತಿಳಿದಿರುವುದು ಕೂಡ ಅತ್ಯಗತ್ಯ. ಇಲ್ಲದಿದ್ದರೆ, ಪ್ರಯೋಜನದ ಬದಲಿಗೆ ತೊಂದರೆಯಾಗಬಹುದು. 

Written by - Yashaswini V | Last Updated : Jan 12, 2023, 01:25 PM IST
  • ಬದಲಾದ ಜೀವನಶೈಲಿ, ಕೆಟ್ಟ ಆಹಾರಪದ್ದತಿ ಹೀಗೆ ಹಲವು ಕಾರಣಗಳಿಂದಾಗಿ ಪ್ರಸ್ತುತ ಕಿಡ್ನಿ ಸ್ಟೋನ್ ಸಮಸ್ಯೆ ಹಲವರನ್ನು ಬಾಧಿಸುತ್ತದೆ.
  • ಕಿಡ್ನಿ ಸ್ಟೋನ್ ಸಮಸ್ಯೆ ಇರುವವರಿಗೆ ಅಸಹನೀಯ ಹೊಟ್ಟೆ ನೋವು, ಮೂತ್ರದ ಸೋಂಕು ಸೇರಿದಂತೆ ಹಲವು ಸಮಸ್ಯೆಗಳು ಕಾಡುತ್ತವೆ.
  • ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯುವ ಮೂಲಕ ಇದರಿಂದ ಉಂಟಾಗಬಹುದಾಗ ಗಂಭೀರ ಸಮಸ್ಯೆಗಳನ್ನು ತಪ್ಪಿಸಬಹುದು.
ಕಿಡ್ನಿ ಸ್ಟೋನ್ ರೋಗಿಗಳು ತಪ್ಪಿಯೂ ಈ 5 ಹಣ್ಣುಗಳನ್ನು ಸೇವಿಸಬಾರದು title=
Kidney Stone

Fruits To Avoid During Kidney Stones: ಮಾನವನ ದೇಹದ ಮೂತ್ರಪಿಂಡಗಳು (ಕಿಡ್ನಿ)  ದೇಹದ ಫಿಲ್ಟರ್ ಎಂದು ಹೇಳಲಾಗುತ್ತದೆ. ಮೂತ್ರಪಿಂಡಗಳು ಮನುಷ್ಯನ ದೇಹದ ಕೊಳಕನ್ನು ದೇಹದಿಂದ ಹೊರಹಾಕುವ ಕೆಲಸ ಮಾಡುತ್ತವೆ. ಇದರಿಂದಾಗಿ ವ್ಯಕ್ತಿಯು ರೋಗಗಳ ಅಪಾಯದಿಂದ ದೂರ ಉಳಿಯಬಹುದು. ಹಾಗಾಗಿಯೇ ವ್ಯಕ್ತಿ ಆರೋಗ್ಯವಂತನಾಗಿರಲು ಕಿಡ್ನಿ ಬಹಳ ಮುಖ್ಯವಾದ ಅಂಗವಾಗಿದೆ. 

ಬದಲಾದ ಜೀವನಶೈಲಿ, ಕೆಟ್ಟ ಆಹಾರಪದ್ದತಿ ಹೀಗೆ ಹಲವು ಕಾರಣಗಳಿಂದಾಗಿ ಪ್ರಸ್ತುತ ಕಿಡ್ನಿ ಸ್ಟೋನ್ ಸಮಸ್ಯೆ ಹಲವರನ್ನು ಬಾಧಿಸುತ್ತದೆ. ಕಿಡ್ನಿ ಸ್ಟೋನ್ ಸಮಸ್ಯೆ ಇರುವವರಿಗೆ ಅಸಹನೀಯ ಹೊಟ್ಟೆ ನೋವು, ಮೂತ್ರದ ಸೋಂಕು ಸೇರಿದಂತೆ ಹಲವು ಸಮಸ್ಯೆಗಳು ಕಾಡುತ್ತವೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯುವ ಮೂಲಕ ಇದರಿಂದ ಉಂಟಾಗಬಹುದಾಗ ಗಂಭೀರ ಸಮಸ್ಯೆಗಳನ್ನು ತಪ್ಪಿಸಬಹುದು. ಇದಲ್ಲದೆ ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ಕೆಲವು ಹಣ್ಣುಗಳಿಂದಲೂ ಅಂತರ ಕಾಯ್ದುಕೊಳ್ಳುವುದು ಅತ್ಯಗತ್ಯ. 

ಇದನ್ನೂ ಓದಿ- Camellia Sinensis Benefits: ನೀವು ಎಂದಾದರು ಕ್ಯಾಮಲಿಯಾ ಸೈನೆನ್ಸಿಸ್ ಟೀ ಟ್ರೈ ಮಾಡಿದ್ದೀರಾ?

ವಾಸ್ತವವಾಗಿ, ಉತ್ತಮ ಆರೋಗ್ಯಕ್ಕೆ ಸೊಪ್ಪು-ತರಕಾರಿಗಳಂತೆ ಹಣ್ಣುಗಳು ಕೂಡ ಬಹಳ ಮುಖ್ಯ. ಹಣ್ಣುಗಳು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಕಿಡ್ನಿ ಸ್ಟೋನ್ ಸಮಸ್ಯೆ ಇರುವವರಿಗೆ ಎಳನೀರು, ಕಲ್ಲಂಗಡಿ, ಕಿತ್ತಳೆ ಮತ್ತು ದ್ರಾಕ್ಷಿಯನ್ನು ತಿನ್ನಬಹುದು. ಹೀಗೆ ನೀರಿನ ಅಂಶ ಹೆಚ್ಚಾಗಿರುವ ಹಣ್ಣುಗಳು ಪ್ರಯೋಜನಕಾರಿ ಆಗಿವೆ. ಆದರೆ, ಕಿಡ್ನಿ ಸ್ಟೋನ್ ರೋಗಿಗಳಿಗೆ ಹಣ್ಣುಗಳನ್ನು ತಿನ್ನುವುದನ್ನು ನಿರ್ಬಂಧಿಸಲಾಗಿದೆ.

ಇದನ್ನೂ ಓದಿ- Quick Glowing skin tips : ಹಾಲಿನಂತ ತ್ವಚೆ ಪಡೆಯಲು 3 ಸೂಪರ್‌ ಟಿಪ್ಸ್‌..! ಟ್ರೈ ಮಾಡಿ

ಕಿಡ್ನಿ ಸ್ಟೋನ್ ಸಮಸ್ಯೆ ಇರುವವರಿಗೆ ಈ ಹಣ್ಣುಗಳು ಅಪಾಯಕಾರಿ: 
ಮೂತ್ರಪಿಂಡದ ಕಲ್ಲಿನ ಕಾಯಿಲೆ ಹೊಂದಿದ್ದರೆ ಅಂತಹವರು ಕೆಲವು ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಅದರಲ್ಲೂ ಆಕ್ಸಲೇಟ್ಸ್ ಸಮೃದ್ಧವಾಗಿರುವ ಹಣ್ಣುಗಳನ್ನು ತಪ್ಪಿಯೂ ತಿನ್ನಬಾರದು ಎಂದು ಹೇಳಲಾಗುತ್ತದೆ.  ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ಸ್ಟ್ರಾಬೆರಿ, ಬ್ಲೂಬೆರ್ರಿ, ದಾಳಿಂಬೆ, ಸೀಬೆಹಣ್ಣು ಮತ್ತು ಡ್ರೈ ಫ್ರೂಟ್ಸ್ ಗಳನ್ನು ತಿನ್ನದೇ ಇರುವುದು ಉತ್ತಮ ಎಂದು ಹೇಳಲಾಗುತ್ತದೆ.

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News