High Uric Acid ಸಮಸ್ಯೆ ಇದ್ದರೆ ಈ ಆಹಾರವನ್ನು ಮುಟ್ಟಿಯೂ ನೋಡಬೇಡಿ!

Uric Acid Control food :ದೇಹದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾಗುತ್ತಿದ್ದರೆ ಆಹಾರದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡುವುದು ಬಹಳ ಮುಖ್ಯ. 

Written by - Ranjitha R K | Last Updated : May 2, 2024, 02:32 PM IST
  • ಈ ಆಹಾರ ಪದಾರ್ಥಗಳನ್ನು ತಿಂದರೆ ಯೂರಿಕ್ ಆಸಿಡ್ ಹೆಚ್ಚಾಗುವುದು
  • ಯೂರಿಕ್ ಆಸಿಡ್ ಜೀವನಶೈಲಿಯಿಂದಲೇ ಎದುರಾಗುವಂಥದ್ದು.
  • ಪ್ಯೂರಿನ್-ಭರಿತ ಆಹಾರ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ
High Uric Acid ಸಮಸ್ಯೆ ಇದ್ದರೆ ಈ ಆಹಾರವನ್ನು ಮುಟ್ಟಿಯೂ ನೋಡಬೇಡಿ! title=

Uric Acid Control food : ಯೂರಿಕ್ ಆಸಿಡ್ ಸಮಸ್ಯೆಯು ನಾವು ಅನುಸರಿಸುವ ಜೀವನಶೈಲಿಯಿಂದಲೇ ಎದುರಾಗುವಂಥದ್ದು.ಪ್ಯೂರಿನ್-ಭರಿತ ಆಹಾರಗಳನ್ನು ಸೇವಿಸುವುದರಿಂದ ಯೂರಿಕ್ ಆಸಿಡ್ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಯೂರಿಕ್ ಆಸಿಡ್ ದೇಹದಲ್ಲಿ ಪ್ಯೂರಿನ್ ವಿಭಜನೆಯಾದಾಗ ರೂಪುಗೊಳ್ಳುವ ಒಂದು ರೀತಿಯ ತ್ಯಾಜ್ಯ ಉತ್ಪನ್ನವಾಗಿದೆ.ಮೂತ್ರಪಿಂಡವು ಈ ಯೂರಿಕ್ ಆಸಿಡ್ ಅನ್ನು ಫಿಲ್ಟರ್ ಮಾಡಿ ದೇಹದಿಂದ ಹೊರ ಹಾಕುತ್ತದೆ. ಆದರೆ ಅದರ ಪ್ರಮಾಣ ಹೆಚ್ಚಾದರೆ ಯೂರಿಕ್ ಆಸಿಡ್ ಹರಳುಗಳ ರೂಪದಲ್ಲಿ ಕೀಲುಗಳಲ್ಲಿ ಸಂಗ್ರಹವಾಗುತ್ತವೆ. ಮಾತ್ರವಲ್ಲ ಕೀಲು ನೋವನ್ನು ಉಂಟುಮಾಡುತ್ತವೆ.ಈ ಹರಳುಗಳು ಬೆರಳು ಮತ್ತು ಕಾಲ್ಬೆರಳುಗಳಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ.ಇದು ಊತ ಮತ್ತು ನೋವನ್ನು ಉಂಟುಮಾಡುತ್ತವೆ.ದೇಹದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾಗುತ್ತಿದ್ದರೆ ಆಹಾರದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡುವುದು ಬಹಳ ಮುಖ್ಯ. 

ಈ ಆಹಾರ ಪದಾರ್ಥಗಳನ್ನು ತಿಂದರೆ ಯೂರಿಕ್ ಆಸಿಡ್ ಹೆಚ್ಚಾಗುವುದು : 
ಸೋಯಾಬೀನ್ :
ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದರೆ ಸೋಯಾಬೀನ್ ಅಥವಾ ಸೋಯಾ ಉತ್ಪನ್ನಗಳ ಸೇವನೆಯನ್ನು ಮಿತಿಗೊಳಿಸಬೇಕು. ಸೋಯಾಬೀನ್ ದೇಹದಲ್ಲಿ ಯೂರಿಕ್ ಆಸಿಡ್ ಅನ್ನು ಹೆಚ್ಚಿಸುತ್ತದೆ.ಆದ್ದರಿಂದ ಅದರ ಸೇವನೆಯನ್ನು ಕಡಿಮೆ ಮಾಡುವುದು ಬಹಳ ಮುಖ್ಯ.

ಇದನ್ನೂ ಓದಿ : ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಶುಂಠಿ ನೀರು ಕುಡಿದರೆ ಇವೆಯಂತೆ ಅದ್ಭುತ ಪ್ರಯೋಜನಗಳು

ಸಮುದ್ರಾಹಾರ : ಸಿಗಡಿ ಮತ್ತು ಸಾರ್ಡೀನ್‌ಗಳಂತಹ ಸಮುದ್ರಾಹಾರವನ್ನು ಸೇವಿಸುವುದರಿಂದ ದೇಹದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾಗುತ್ತದೆ. ಅಧಿಕ ಯೂರಿಕ್ ಆಸಿಡ್ ಗೌಟ್ ಸಮಸ್ಯೆಯನ್ನು ಕೂಡಾ ಉಂಟು ಮಾಡುತ್ತದೆ. ಗೌಟ್ ಸಂದರ್ಭದಲ್ಲಿ,ಹೆಬ್ಬೆರಳಿನಲ್ಲಿ ಊತವು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ.ಆಗ  ಸಮುದ್ರಾಹಾರ ಸೇವನೆಯನ್ನು ಸೀಮಿತಗೊಳಿಸಬೇಕು.

ಸೋಡಾ :  ಸಾಮಾನ್ಯವಾಗಿ ನಾವು ಹೊರಗಡೆ ಏನಾದರೂ ತಿಂದರೆ ಅದರ ಜೊತೆಗೆ ಸೋಡಾ ಅಥವಾ ತಂಪು ಪಾನೀಯಗಳನ್ನು ಕೂಡಾ ಸೇವಿಸುತ್ತೇವೆ.ಈ ತಂಪು ಪಾನೀಯಗಳು ಕಡಿಮೆ ಪ್ಯೂರಿನ್ ಅನ್ನು ಹೊಂದಿದ್ದರೂ,ಅವುಗಳು ಹೆಚ್ಚಿನ ಪ್ರಮಾಣದಲ್ಲಿ ಫ್ರಕ್ಟೋಸ್ ಅನ್ನು ಹೊಂದಿರುತ್ತವೆ. ಇದು ಯೂರಿಕ್ ಆಮ್ಲವನ್ನು ಹೆಚ್ಚಿಸುತ್ತದೆ.

ಆರ್ಗನ್ ಮೀಟ್ ಮತ್ತು ರೆಡ್ ಮೀಟ್ : ಆರ್ಗನ್ ಮೀಟ್ ಮತ್ತು ರೆಡ್ ಮೀಟ್  ಅನ್ನು ಆಹಾರದಲ್ಲಿ ಸೇರಿಸಿದರೆ ಯೂರಿಕ್ ಆಸಿಡ್ ಮಟ್ಟದಲ್ಲಿ ಹೆಚ್ಚಳವಾಗಬಹುದು. ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದರೆ ಈ ಮಾಂಸವನ್ನು ತಿನ್ನುವ ಪ್ರಮಾಣವನ್ನು ಕಡಿಮೆ ಮಾಡುವುದು ಅವಶ್ಯಕ.

ಇದನ್ನೂ ಓದಿ : ಮುಖಕ್ಕೆ ಅರಿಶಿನ ಹಚ್ಚುವುದು ಒಳ್ಳೆಯದೋ ಅಥವಾ ಕೆಟ್ಟದ್ದೋ? ನಿಮಗೆ ಇಲ್ಲಿವೆ ಮಹತ್ವದ ಸಲಹೆಗಳು

ಆಲ್ಕೋಹಾಲ್ : ಎಲ್ಲಾ ರೀತಿಯ ಆಲ್ಕೋಹಾಲ್ ಯೂರಿಕ್ ಆಸಿಡ್ ಹೆಚ್ಚಳಕ್ಕೆ ಕಾರಣವಾಗಬಹುದು.ಆದ್ದರಿಂದ,ಯೂರಿಕ್ ಆಸಿಡ್ ಮತ್ತಷ್ಟು ಹೆಚ್ಚಾಗದಂತೆ ತಡೆಯಲು, ಆಲ್ಕೊಹಾಲ್ ಸೇವನೆಯನ್ನು ಕಡಿಮೆ ಮಾಡುವುದು ಬುದ್ಧಿವಂತಿಕೆ. 

 (ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು,  ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE KANNADA NEWS ಇದನ್ನು ಖಚಿತಪಡಿಸುವುದಿಲ್ಲ.)  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News