Kidney Damage: ಆಲ್ಕೋಹಾಲ್ ಮಾತ್ರವಲ್ಲ ಈ ಆಹಾರಗಳಿಂದಲೂ ಡ್ಯಾಮೇಜ್ ಆಗುತ್ತೆ ಕಿಡ್ನಿ

Harmful Foods For Kidney: ದೇಹವನ್ನು ನಿರ್ವಿಷಗೊಳಿಸಿ ನಮ್ಮನ್ನು ಆರೋಗ್ಯವಾಗಿರಿಸುವಲ್ಲಿ ಮೂತ್ರಪಿಂಡಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಆದರೆ, ಬದಲಾದ ಜೀವನಶೈಲಿ, ಕೆಟ್ಟ ಆಹಾರ ಪದ್ದತಿಯಿಂದ ಅದು ಕಿಡ್ನಿ ಆರೋಗ್ಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತದೆ. ಸಾಮಾನ್ಯವಾಗಿ, ಕಿಡ್ನಿ ಡ್ಯಾಮೇಜ್ ಆಗಲು ಆಲ್ಕೋಹಾಲ್ ಮಾತ್ರ ಕಾರಣ ಎಂದು ಕೆಲವರು ಹೇಳುತ್ತಾರೆ. ಆದರೆ, ಮದ್ಯ ಸೇವನೆ ಮಾತ್ರವಲ್ಲ ಕೆಲವು ಆಹಾರಗಳೂ ಕೂಡ ನಿಮ್ಮ ಮೂತ್ರಪಿಂಡಗಳನ್ನು ಹಾನಿಗೊಳಿಸಬಹುದು ಎಂದು ನಿಮಗೆ ತಿಳಿದಿದೆಯೇ?

Written by - Yashaswini V | Last Updated : Jan 20, 2023, 01:26 PM IST
  • ಮೂತ್ರಪಿಂಡಗಳು ನಮ್ಮ ಆರೋಗ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.
  • ಇವು ರಕ್ತವನ್ನು ಫಿಲ್ಟರ್ ಮಾಡಲು, ದೇಹದಿಂದ ತ್ಯಾಜ್ಯವನ್ನು ಹೊರಹಾಕಲು, ಹಾರ್ಮೋನುಗಳನ್ನು ಉತ್ಪಾದಿಸಲು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ.
  • ಹಾಗಾಗಿಯೇ ಮೂತ್ರಪಿಂಡಗಳನ್ನು ಮಾನವನ ದೇಹದ ಯೋಧರು ಎಂದು ಕರೆಯಲಾಗುತ್ತದೆ.
Kidney Damage: ಆಲ್ಕೋಹಾಲ್ ಮಾತ್ರವಲ್ಲ ಈ ಆಹಾರಗಳಿಂದಲೂ ಡ್ಯಾಮೇಜ್ ಆಗುತ್ತೆ ಕಿಡ್ನಿ  title=
Kidney Disease

Harmful Foods For Kidney: ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಮೂತ್ರಪಿಂಡಗಳು ಕೂಡ ಒಂದು. ಮೂತ್ರಪಿಂಡಗಳನ್ನು ಕಿಡ್ನಿ ಎಂತಲೂ ಕರೆಯಲಾಗುತ್ತದೆ. ಮೂತ್ರಪಿಂಡಗಳು ನಮ್ಮ ಆರೋಗ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇವು ರಕ್ತವನ್ನು ಫಿಲ್ಟರ್ ಮಾಡಲು, ದೇಹದಿಂದ ತ್ಯಾಜ್ಯವನ್ನು ಹೊರಹಾಕಲು, ಹಾರ್ಮೋನುಗಳನ್ನು ಉತ್ಪಾದಿಸಲು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಹಾಗಾಗಿಯೇ ಮೂತ್ರಪಿಂಡಗಳನ್ನು ಮಾನವನ ದೇಹದ ಯೋಧರು ಎಂದು ಕರೆಯಲಾಗುತ್ತದೆ. ಆದರೆ, ಬದಲಾದ ಜೀವನಶೈಲಿ, ಕೆಟ್ಟ ಆಹಾರ ಪದ್ಧತಿಯಿಂದಾಗಿ ಮೂತ್ರಪಿಂಡಗಳು ಹಾನಿಗೊಳಗಾಗುತ್ತವೆ. ಸಾಮಾನ್ಯವಾಗಿ ಆಲ್ಕೋಹಾಲ್ ಸೇವನೆಯಿಂದ ಮಾತ್ರವೇ ಕಿಡ್ನಿ ಡ್ಯಾಮೇಜ್ ಆಗುತ್ತದೆ ಎಂದು ಕೆಲವರು ನಂಬುತ್ತಾರೆ. ಆದರೆ ಆಲ್ಕೋಹಾಲ್ ಮಾತ್ರವಲ್ಲ, ನಾವು ದಿನನಿತ್ಯ ಸೇವಿಸುವ ಕೆಲವು ಆಹಾರಗಳೂ ಕೂಡ ಮೂತ್ರಪಿಂಡಗಳನ್ನು ಹಾನಿಗೊಳಿಸಬಹುದು. 

ಕೆಟ್ಟ ಆಹಾರ ಪದ್ಧತಿಯಿಂದಾಗಿ ಕಿಡ್ನಿ ಸೋಂಕು, ಕಿಡ್ನಿ ಸ್ಟೋನ್, ಕಿಡ್ನಿ ಕ್ಯಾನ್ಸರ್ ನಂತಹ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸರಿಯಾದ ಸಮಯದಲ್ಲಿ ಸೂಕ್ತವಾದ ಚಿಕಿತ್ಸೆ ಪಡೆಯದೆ ಇದ್ದರೆ ಕಿಡ್ನಿ ವೈಫಲ್ಯವೂ ಆಗಬಹುದು. ಇದಕ್ಕಾಗಿ, ಕಿಡ್ನಿ ವೈಫಲ್ಯದ ಆರಂಭಿಕ ಲಕ್ಷಣಗಳ ಬಗ್ಗೆ ತಿಳಿಯುವುದು ಅತ್ಯಗತ್ಯ. ಅದಕ್ಕಿಂತಲೂ ಮುಖ್ಯವಾಗಿ, ಮೂತ್ರಪಿಂಡಗಳಿಗೆ ಹಾನಿಯುಂಟು ಮಾಡುವ ಆಹಾರಗಳಿಂದ ಅಂತರ ಕಾಯ್ದುಕೊಳ್ಳುವುದು ಕೂಡ ಬಹಳ ಮುಖ್ಯವಾಗಿದೆ.

ಇದನ್ನೂ ಓದಿ- ಕೊಲೆಸ್ಟ್ರಾಲ್ ಅನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ ಈ ಎರಡು ವಸ್ತುಗಳು

ಕಿಡ್ನಿ ಡ್ಯಾಮೇಜ್ ಮಾಡುವ ಆಹಾರಗಳಿವು:
* ಆಲ್ಕೋಹಾಲ್:

ಅತಿಯಾಗಿ ಮದ್ಯ ಸೇವಿಸುವವರಲ್ಲಿ ಕಿಡ್ನಿ ವೈಫಲ್ಯದ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಆಲ್ಕೋಹಾಲ್ ನಿಮ್ಮ ಮೂತ್ರಪಿಂಡದ ಮೇಲೆ ಕೆಟ್ಟ ಪರಿಣಾಮವನ್ನು ಬೀರುವುದು ಮಾತ್ರವಲ್ಲದೆ ಉಳಿದ ಅಂಗಗಳಿಗೆ ಹಾನಿಕಾರಕವಾಗಿದೆ.

* ಡೈರಿ ಉತ್ಪನ್ನಗಳು:
ಉತ್ತಮ ಆರೋಗ್ಯಕ್ಕೆ ಡೈರಿ ಉತ್ಪನ್ನಗಳು ಬಹಳ ಅಗತ್ಯ. ಆದರೆ, ಡೈರಿ ಉತ್ಪನ್ನಗಳಲ್ಲಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ತುಂಬಾ ಹೆಚ್ಚಾಗಿರುತ್ತದೆ. ಹಾಗಾಗಿ ಇವುಗಳ ಅತಿಯಾದ ಸೇವನೆಯು ಮೂತ್ರಪಿಂಡಗಳ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡಬಹುದು.

* ಉಪ್ಪು:
ಉಪ್ಪಿಲ್ಲದ ಊಟ ರುಚಿ ಎನಿಸುವುದಿಲ್ಲ. ಆದರೆ, ಅತಿಯಾದ ಉಪ್ಪಿನ ಸೇವನೆ ರಕ್ತದೊತ್ತಡವನ್ನು ಹೆಚ್ಚಿಸುವುದು ಮಾತ್ರವಲ್ಲ, ನಿಮ್ಮ ಮೂತ್ರಪಿಂಡಗಳ ಹಾನಿಗೂ ಕಾರಣವಾಗಬಹುದು.

ಇದನ್ನೂ ಓದಿ- Health Tips: ಕಡಲೆಕಾಯಿ ತಿನ್ನುವ ಮೊದಲು ಈ ಮುಖ್ಯ ವಿಚಾರ ತಿಳಿದಿರಲಿ
 
* ರೆಡ್ ಮೀಟ್:

ರೆಡ್ ಮೀಟ್ ಎಂದರೆ ಕೆಂಪು ಮಾಂಸವು ಅತ್ಯುತ್ತಂ ಪ್ರೋಟೀನ್ ಮೂಲ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಇದರ ಅತಿಯಾದ ಸೇವನೆಯು ಕಿಡ್ನಿ ಆರೋಗ್ಯಕ್ಕೆ ಒಳ್ಳೆಯದಲ್ಲ.

* ಕೃತಕ ಸಿಹಿಕಾರಕ:
ಕೃತಕ ಸಿಹಿಕಾರಕಗಳು ಮಕ್ಕಳನ್ನು ಮಾತ್ರವಲ್ಲ ಹಿರಿಯರನ್ನೂ ಕೂಡ ತಮ್ಮತ್ತ ಸೆಳೆಯುತ್ತವೆ. ಆದರೆ, ಇವುಗಳನ್ನು ಹೆಚ್ಚಾಗಿ ಬಳಸುವುದರಿಂದ ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಒಳಗಾಗುವ ಸಾಧ್ಯತೆಯೂ ಹೆಚ್ಚು. ಹಾಗಾಗಿ, ಇಂತಹ ಆಹಾರಗಳಿಂದ ಸಾಧ್ಯವಾದಷ್ಟು ಅಂತರ ಕಾಯ್ದುಕೊಳ್ಳಿ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News