Rare Surgery By Narayan Hrudayalaya Doctors: ಈ ಭೂಮಿ ಮೇಲೆ ಮಾನವನ ಪ್ರಾಣ ಉಳಿಸುವ ವೈದ್ಯರನ್ನ ಸಾಕ್ಷಾತ ದೇವರೆನ್ನುತ್ತಾರೆ. ವೈದ್ಯೋ ನಾರಾಯಣೋ ಹರಿ ಅಂತ ಕರೀತಾರೆ. ಅದೇ ರೀತಿ ಬೆಂಗಳೂರಿನ ನಾರಾಯಣ ಹೃದಯಾಲಯದ ವೈದ್ಯರ ತಂಡವೊಂದು ಹೆಣ್ಣು ಶಿಶುವಿಗೆ ಅಪರೂಪದ ಲಿವರ್ ಟ್ರಾನ್ಸಪ್ಲಾಂಟೇಶನ್ ಮಾಡುವ ಮೂಲಕ ಮಗುವಿನ ಜೀವ ಉಳಿಸಿದ್ದಾರೆ. ವೈದ್ಯರ ಸಹಾಯ ನೆನೆದು ಮಗುವಿನ ಪೋಷಕರು ಆನಂದ ಭಾಷ್ಪ ಹರಿಸಿದ್ದಾರೆ. ಈ ಕುರಿತ ವಿಶೇಷ ವರದಿ ಇಲ್ಲಿದೆ...
ಒಂದೆಡೆ ಕಣ್ಣೀರಿಡುತ್ತ ವೈದ್ಯರ ಸಹಾಯ ನೆನೆಯುತ್ತಿರುವ ಮಗುವಿನ ಪೋಷಕರು. ಇನ್ನೊಂದೆಡೆ ಮಗುವಿನ ಪ್ರಾಣ ಉಳಿಸಿದ ಸಾರ್ಥಕ ಭಾವನೆಯಲ್ಲಿ ವೈದ್ಯರು. ಈ ಎಲ್ಲಾ ದೃಶ್ಯಾವಳಿಗಳಿಗೆ ಸಾಕ್ಷಿಯಾಗಿದ್ದು ಬಾಗಲಕೋಟೆ ನಗರ.
ಹೌದು, ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದ ಮಹಾಂತೇಶ ಹಾಗೂ ಕಾವೇರಿ ದಂಪತಿಗಳ ಹೆಣ್ಣು ಶಿಶು ಹುಟ್ಟಿದ ಎರಡು ತಿಂಗಳಿನಿಂದ ಪಿತ್ತರಸ ಅಟ್ರೆಸಿಯಾ ರೋಗ (Biliary Atresia Disease)ದಿಂದ ಬಳಲುತ್ತಿತ್ತು. ಎಷ್ಟೇ ಆಸ್ಪತ್ರೆ ಅಲೆದಾಡಿದರೂ ಗುಣಮುಖವಾಗದ ಕಾರಣ ಇಳಕಲ್ ಮೂಲದ ವೈದ್ಯರೊಬ್ಬರು ನಾರಾಯಣ ಹೃದಯಾಲಯದ ಯಕೃತ್ತಿನ ಕಸಿ ಶಸ್ತ್ರ ಚಿಕಿತ್ಸಕ ಡಾ.ರಾಘವೇಂದ್ರ ಸಿ.ವಿ (Liver transplant surgeon Dr. Raghavendra C.V) ಅವರನ್ನ ಭೇಟಿಯಾಗಲು ಸಲಹೆ ನೀಡಿದ್ದರು.
ಇದನ್ನೂ ಓದಿ- Soups For Diabetes: ಮಧುಮೇಹ ನಿಯಂತ್ರಣಕ್ಕೆ ವರದಾನವಿದ್ದಂತೆ ಈ 3 ಬಗೆಯ ವೆಜ್ ಸೂಪ್ಗಳು
ದಂಪತಿಗಳು ನಾರಾಯಣ ಹೃದಯಾಲಯ (Narayana Hrudayalaya)ದಲ್ಲಿ ಶಿಶುವಿನ ಪರೀಕ್ಷೆ ಮಾಡಿಸಿದ ಬಳಿಕ ಶಸ್ತ್ರ ಚಿಕಿತ್ಸೆ ಮಾಡುವುದು ಅನಿವಾರ್ಯವಾದ ಸಂದರ್ಭದಲ್ಲಿ ಡಾ.ರಾಘವೇಂದ್ರ ಸಿ.ವಿ ನೇತೃತ್ವದ ತಂಡ ಯಶಸ್ವಿಯಾಗಿ ಶಸ್ರ್ರ ಚಿಕಿತ್ಸೆಯನ್ನ ನೆರವೇರಿಸಿದೆ. ಬಿಪಿಎಲ್ ಕಾರ್ಡ್ ಹಾಗೂ ಎನ್.ಜಿ.ಓ ಒಂದರ ಸಹಾಯದಿಂದ ಉಚಿತವಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿ ಮಗುವಿನ ಪ್ರಾಣ ಉಳಿಸಿದ್ದಾರೆ.
ಇನ್ನು ಈ ಶಸ್ತ್ರ ಚಿಕಿತ್ಸೆಯನ್ನ ಮಾಡಿಸಬೇಕಾದ್ರೆ ಅಂದಾಜು 25 ಲಕ್ಷ ಖರ್ಚಾಗುತ್ತೆ.ಆದ್ರೆ ಹಾಲು ಮಾರಿ ಬದುಕು ಸಾಗಿಸುವ ಶಿಶುವಿನ ಪೋಷಕರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಹಿನ್ನೆಲೆ ನಾರಾಯಣ ಹೃದಯಾಲಯದ ಆಸ್ಪತ್ರೆಯ ವೈದ್ಯರು ಬಿ.ಪಿ.ಎಲ್ ಕಾರ್ಡ್ (BPL Card) ಮೂಲಕ ಸರ್ಕಾರದ ಹಾಗೂ ಎನ್.ಜಿ.ಓ ಒಂದರ ಸಹಾಯ ಪಡೆದು ಸಂಪೂರ್ಣವಾಗಿ ಉಚಿತ ಚಿಕಿತ್ಸೆಯನ್ನ ನೀಡಿದ್ದಾರೆ.
ಶಿಶುವಿನ ತಂದೆ ಮಹಾಂತೇಶ ಅವರ ಯಕೃತ್ತಿನ ಒಂದು ಭಾಗ ಪಡೆದು ಶಿಶುವಿಗೆ ಯಶಸ್ವಿ ಲಿವರ್ ಟ್ರಾನ್ಸಪ್ಲಾಂಟೇಶನ್ (Liver Transplantation) ಮಾಡಿದ್ದಾರೆ. ಶಿಶು ಈಗ ಚೇತರಿಸಿಕೊಂಡಿದ್ದು ಗುಣಮುಖವಾಗಿದೆ.
ಇದನ್ನೂ ಓದಿ- ಚಹಾ ಕುಡಿತಾ ಸಿಗರೇಟ್ ಸೇದುತ್ತೀರಾ..? ಹಾಗಿದ್ರೆ ಈ ಅಪಾಯದ ಬಗ್ಗೆ ಖಂಡಿತಾ ನಿಮಗೆ ತಿಳಿದಿರಬೇಕು..
ಲಭ್ಯವಿರುವ ಮಾಹಿತಿಯ ಪ್ರಕಾರ, ಇಪ್ಪತ್ತೈದು ಸಾವಿರ ಜನರಲ್ಲಿ ಒಬ್ಬರಿಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತಂತೆ. ಹೀಗಾಗಿ ಈ ಅಪರೂಪದ ಶಸ್ತ್ರಚಿಕಿತ್ಸೆಯನ್ನ (A Rare surgery) ಯಶಸ್ವಿಯಾಗಿ ನೆರವೇರಿಸಿ ಬಡಕುಟುಂಬದ ಪಾಲಿಗೆ ನಾರಾಯಣ ಹೃದಯಾಲಯದ ವೈದ್ಯರು ದೇವರಾಗಿದ್ದಾರೆ.
ಒಟ್ಟಾರೆ ಕೊಲ್ಲುವವನಿಗಿಂತ ಕಾಯುವವನು ದೊಡ್ಡವನು ಎನ್ನುವ ಹಾಗೆ, ಸಾವಿನ ದವಡೆಯಲ್ಲಿದ್ದ ಮಗುವಿನ ಪ್ರಾಣವನ್ನ ಉಳಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದು ವೈದ್ಯರ ತಂಡಕ್ಕೆ ಒಂದು ದೊಡ್ಡ ಸಲಾಂ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=O-hDphMYFMg
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.