ಕೇವಲ ಮದ್ಯ ಮಾತ್ರವಲ್ಲ ಈ ವಸ್ತುಗಳ ಸೇವನೆಯಿಂದಲೂ ಕಿಡ್ನಿ ವೈಫಲ್ಯವಾಗುತ್ತದೆ

ಮೂತ್ರವನ್ನು ಉತ್ಪಾದಿಸುವುದರ ಜೊತೆಗೆ, ಇದು ರಕ್ತದೊತ್ತಡವನ್ನು ಸರಾಗವಾಗಿ ನಿರ್ವಹಿಸುವ ಹಾರ್ಮೋನುಗಳನ್ನು ಸ್ರವಿಸುತ್ತದೆ. ತಪ್ಪು ಆಹಾರಪದ್ಧತಿ ಮತ್ತು ಕೆಟ್ಟ ಜೀವನಶೈಲಿಯಿಂದಾಗಿ, ಕಿಡ್ನಿಯಲ್ಲಿ ಅನೇಕ ರೀತಿಯ ಸಮಸ್ಯೆಗಳು ಉಂಟಾಗುತ್ತವೆ. 

Written by - Ranjitha R K | Last Updated : Jul 1, 2022, 11:48 AM IST
  • ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ
  • ಸರಿಯಾದ ಆಹಾರ ಪದ್ದತಿಯನ್ನು ಅನುಸರಿಸಬೇಕು
  • ಕೆಲವೊಂದು ಆಹಾರಗಳಿಂದ ದೂರ ಇರಬೇಕು
ಕೇವಲ ಮದ್ಯ ಮಾತ್ರವಲ್ಲ ಈ ವಸ್ತುಗಳ ಸೇವನೆಯಿಂದಲೂ ಕಿಡ್ನಿ ವೈಫಲ್ಯವಾಗುತ್ತದೆ title=
Foods that can damage your Kidneys (file photo)

Foods that can damage your Kidneys: ಮೂತ್ರಪಿಂಡವು ದೇಹದ ಒಂದು ಸಣ್ಣ ಆದರೆ ಬಹಳ ಮುಖ್ಯವಾದ ಅಂಗವಾಗಿದೆ. ಕಿಡ್ನಿಯನ್ನು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಮೂತ್ರಪಿಂಡದ ಕಾರ್ಯವು ದೇಹದಿಂದ ತ್ಯಾಜ್ಯ ಅಥವಾ ವಿಷವನ್ನು ತೆಗೆದುಹಾಕುವುದು. ಮೂತ್ರವನ್ನು ಉತ್ಪಾದಿಸುವುದರ ಜೊತೆಗೆ, ಇದು ರಕ್ತದೊತ್ತಡವನ್ನು ಸರಾಗವಾಗಿ ನಿರ್ವಹಿಸುವ ಹಾರ್ಮೋನುಗಳನ್ನು ಸ್ರವಿಸುತ್ತದೆ. ತಪ್ಪು ಆಹಾರಪದ್ಧತಿ ಮತ್ತು ಕೆಟ್ಟ ಜೀವನಶೈಲಿಯಿಂದಾಗಿ, ಕಿಡ್ನಿಯಲ್ಲಿ ಅನೇಕ ರೀತಿಯ ಸಮಸ್ಯೆಗಳು ಉಂಟಾಗುತ್ತವೆ. ಉದಾಹರಣೆಗೆ ಮೂತ್ರಪಿಂಡದ ಸೋಂಕು, ಮೂತ್ರಪಿಂಡದ ಕಲ್ಲು, ಮೂತ್ರಪಿಂಡದ ಕ್ಯಾನ್ಸರ್ ಇತ್ಯಾದಿ.

ಮೂತ್ರಪಿಂಡದ ಕಾರ್ಯವೇನು? 
ಮೂತ್ರಪಿಂಡವು ಮೂತ್ರದ ಮೂಲಕ ದೇಹದಿಂದ ತ್ಯಾಜ್ಯವನ್ನು ತೆಗೆದುಹಾಕುವ ಕೆಲಸ ಮಾಡುತ್ತದೆ. ಆರಂಭಿಕ ಹಂತಗಳಲ್ಲಿ ಮೂತ್ರಪಿಂಡದ ತೊಂದರೆಗಳು ಪತ್ತೆಯಾದಲ್ಲಿ ಆಹಾರದಲ್ಲಿ ಕೆಲವು ಬದಲಾವಣೆಯನ್ನು ಮಾಡಿಕೊಳ್ಳುವ ಅಗತ್ಯವಿದೆ. ಆದರೆ ಕೆಲವರ ಸಮಸ್ಯೆಗಳು ಕೊನೆಯ ಹಂತದಲ್ಲಿ ಪತ್ತೆಯಾಗಿ, ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾಗುತ್ತದೆ. 

ಇದನ್ನೂ ಓದಿ : ಅಧಿಕ ರಕ್ತದೊತ್ತಡ ಇರುವವರು ಈ ಆಹಾರಗಳನ್ನು ಸೇವಿಸಬಾರದು

ಮೂತ್ರಪಿಂಡ ವೈಫಲ್ಯದ ಆರಂಭಿಕ ಚಿಹ್ನೆಗಳು :
-ಹಸಿವು ಕಡಿಮೆಯಾಗುವುದು 
-ದೇಹದ ಮೇಲೆ ಊತ 
-ಅತಿಯಾದ ಚಳಿ -
- ಚರ್ಮದ ದದ್ದು 
-ಮೂತ್ರ ವಿಸರ್ಜನೆಯಲ್ಲಿ ತೊಂದರೆ, ಕಿರಿಕಿರಿ

ಮೂತ್ರಪಿಂಡಕ್ಕೆ ಹಾನಿ ಮಾಡುವ 5 ವಸ್ತುಗಳು
1.  ಆಲ್ಕೋಹಾಲ್ : 
ಅತಿಯಾಗಿ ಆಲ್ಕೋಹಾಲ್ ಸೇವಿಸುವುದರಿಂದ ಮೂತ್ರಪಿಂಡಗಳಿಗೆ ಹಾನಿಯಾಗುತ್ತದೆ. ಹೆಚ್ಚು ಆಲ್ಕೋಹಾಲ್ ಸೇವನೆಯು ಮೂತ್ರಪಿಂಡಗಳ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಅದು ನಿಮ್ಮ ಮೆದುಳಿನ ಮೇಲೆ ಕೂಡಾ ಪರಿಣಾಮ ಬೀರುತ್ತದೆ. ಆಲ್ಕೋಹಾಲ್ ಮೂತ್ರಪಿಂಡಗಳ ಮೇಲೆ ಕೆಟ್ಟ ಪರಿಣಾಮವನ್ನು ಬೀರುವುದು ಮಾತ್ರವಲ್ಲ, ಇತರ ಅಂಗಗಳಿಗೆ ಕೂಡಾ ಹಾನಿಕಾರಕವಾಗಿದೆ.

2. ಉಪ್ಪು : 
ಉಪ್ಪು ಸೋಡಿಯಂ ಅನ್ನು ಹೊಂದಿರುತ್ತದೆ. ಇದು ಪೊಟ್ಯಾಸಿಯಮ್ ಜೊತೆಗೆ ದೇಹದಲ್ಲಿ ನೀರಿನ ಅಂಶ ಸರಿಯಾದ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಆದರೆ ಅಧಿಕ ಪ್ರಮಾಣದಲ್ಲಿ ಉಪ್ಪನ್ನು ಆಹಾರದಲ್ಲಿ ತೆಗೆದುಕೊಂಡರೆ, ಅದು ದ್ರವದ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಮೂತ್ರಪಿಂಡದ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ ಮತ್ತು ಹಾನಿ ಸಂಭವಿಸಬಹುದು. 

ಇದನ್ನೂ ಓದಿ : Heart Attack Risk:ಇವರನ್ನು ಅತಿಯಾಗಿ ಕಾಡುತ್ತದೆಯಂತೆ ಹೃದಯಾಘಾತದ ಅಪಾಯ ..!

3. ಡೈರಿ ಉತ್ಪನ್ನಗಳು :
ಹಾಲು, ಚೀಸ್, ಬೆಣ್ಣೆಯಂತಹ ಡೈರಿ ಉತ್ಪನ್ನಗಳ ಅತಿಯಾದ ಸೇವನೆಯು ಮೂತ್ರಪಿಂಡಕ್ಕೆ ಒಳ್ಳೆಯದಲ್ಲ. ಡೈರಿ ಉತ್ಪನ್ನಗಳು ಹೆಚ್ಚಿನ ಪ್ರೋಟೀನ್ ಅನ್ನು ಹೊಂದಿರುತ್ತವೆ. ಇದು ಮೂತ್ರಪಿಂಡಗಳನ್ನು ಹಾನಿಗೊಳಿಸುತ್ತದೆ. ಡೈರಿ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಕೂಡ ಅಧಿಕವಾಗಿರುತ್ತದೆ. ಇದು ಮೂತ್ರಪಿಂಡದಲ್ಲಿ ಕಲ್ಲುಗಳ ರಚನೆಗೆ ಕಾರಣವಾಗಬಹುದು. 

4.  ಮಾಂಸ :
ಮಾಂಸದಲ್ಲಿ ಪ್ರೋಟೀನ್ ತುಂಬಾ ಹೆಸಚಿನ ಪ್ರಮಾಣದಲ್ಲಿ ಇರುತ್ತದೆ.   ಮೂತ್ರಪಿಂಡದ ಮೇಲೆ ಪರಿಣಾಮ ಬೀರುವಂತಹ ಮಾಂಸವನ್ನು ಜೀರ್ಣಿಸಿಕೊಳ್ಳುವುದು ನಮ್ಮ ದೇಹಕ್ಕೆ ಕಷ್ಟವಾಗುತ್ತದೆ. 

5. ಕೃತಕ ಸಿಹಿಕಾರಕ :
ಮಾರುಕಟ್ಟೆಯಲ್ಲಿ ಸಿಗುವ ಸಿಹಿತಿಂಡಿಗಳು, ಕುಕೀಗಳು ಮತ್ತು ಪಾನೀಯಗಳಲ್ಲಿ ಕೃತಕ ಸಿಹಿಯನ್ನು ಹೆಚ್ಚಾಗಿ ಬಳಸುತ್ತಾರೆ, ಇದು ಮೂತ್ರಪಿಂಡದ ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ. ಮಧುಮೇಹ ಇರುವವರು ಮೂತ್ರಪಿಂಡದ ಕಾಯಿಲೆಗಳಿಗೆ ಹೆಚ್ಚು ಒಳಗಾಗುತ್ತಾರೆ. 

 

(  ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News