Bengaluru Rain: ವರ್ಷದ ಮೊದಲ ಭಾರೀ ಮಳೆಗೆ ತತ್ತರಿಸಿದ ಸಿಲಿಕಾನ್ ಸಿಟಿ

Rain Update: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ (ಮೇ 06) ಸುರಿದ ಭಾರೀ ಮಳೆಯಿಂದಾಗಿ ಕೆಲವೆಡೆ ರಸ್ತೆಗಳು ಜಲವೃತಗೊಂಡಿದ್ದರೆ, ಇನ್ನೂ ಕೆಲವು ಪ್ರದೇಶಗಳಲ್ಲಿ bruhat ಮರಗಳು ಧರೆಗುರುಳಿವೆ. 

Written by - Yashaswini V | Last Updated : May 7, 2024, 12:48 PM IST
  • ಕೆಲವು ವಾರ್ಡ್‌ಗಳಲ್ಲಿ ಹಲವಾರು ರಸ್ತೆಗಳು ಜಲಾವೃತವಾಗಿದ್ದರೆ, ಹಲವೆಡೆ ಮರಗಳು ಬಿದ್ದ ಘಟನೆಗಳು ವರದಿಯಾಗಿವೆ.
  • ರಭಸದ ಗಾಳಿಯಿಂದಾಗಿ ಸುಮಾರು 45 ಮರಗಳು ಧರೆಗುರುಳಿವೆ ಎಂದು ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.
Bengaluru Rain: ವರ್ಷದ ಮೊದಲ ಭಾರೀ ಮಳೆಗೆ ತತ್ತರಿಸಿದ ಸಿಲಿಕಾನ್ ಸಿಟಿ  title=

Bengaluru Rain Updates: ನಿನ್ನೆ (ಮೇ 06) ಸಿಲಿಕಾನ್ ಸಿಟಿ ಬೆಂಗಳೂರು ವರ್ಷದ ಮೊದಲ ಭಾರೀ ಮಳೆಗೆ ಸಾಕ್ಷಿಯಾಯಿತು. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಸೋಮವಾರ ರಾತ್ರಿ 8.30 ರ ಹೊತ್ತಿಗೆ, ಬೆಂಗಳೂರು ನಗರ ನಿಲ್ದಾಣದಲ್ಲಿ 10.5 ಮಿಮೀ, ಎಚ್‌ಎಎಲ್ 2.7 ಮಿಮೀ ಮಳೆ ದಾಖಲಾಗಿದೆ. ಕೆಐಎ ನಿಲ್ದಾಣದಲ್ಲಿ ಸಂಜೆ 5.30 ರವರೆಗೆ 3.9 ಮಿಮೀ ದಾಖಲಾಗಿದೆ. ಇದರೊಂದಿಗೆ ಈ ವರ್ಷ ಇದುವರೆಗೆ ಅತಿ ಹೆಚ್ಚು ಮಳೆ ಪಡೆದ ನಗರ ಎಂಬ ಹೆಗ್ಗಳಿಕೆಯೂ ಬೆಂಗಳೂರು ನಗರಕ್ಕಿದೆ. 

ಭಾರೀ ಮಳೆಯಿಂದಾಗಿ (Heavy Rain) ಬೆಂಗಳೂರಿನಲ್ಲಿ ಬಿಸಿಲಿನ ತಾಪದಿಂದ ಬೇಸತ್ತಿದ್ದ ಜನರಿಗೆ ಕೊಂಚ ನೆಮ್ಮದಿಯ ಉಸಿರು ಬಿಡುವಂತಾಗಿದೆ. ಆದಾಗ್ಯೂ, ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಸುರಿದ ಮಳೆ (Bengaluru Rain Effect) ಹಲವು ಅವಾಂತರಗಳನ್ನು ಸೃಷ್ಟಿಸಿದೆ. 

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಈ ಕುರಿತಂತೆ ಮಾಹಿತಿ ನೀಡಿದ್ದು, ನಿನ್ನೆ ಸುರಿದ ಭಾರೀ ಮಳೆಯ ಪರಿಣಾಮವಾಗಿ ಬೆಂಗಳೂರಿನಸುಮಾರು 21 ವಾರ್ಡ್‌ಗಳು ಹಾನಿಗೊಳಗಾಗಿವೆ ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ- ಮುಂದಿನ ಐದು ದಿನ ಈ ಜಿಲ್ಲೆಗಳಲ್ಲಿ ಕುಂಭ ದ್ರೋಣ ಮಳೆ!ಗುಡುಗು, ಮಿಂಚು, ಗಾಳಿ ಸಹಿತ ಎಡೆಬಿಡದೆ ಅಬ್ಬರಿಸಲಿದ್ದಾನೆ ವರುಣ!

ಮಳೆ- ಗಾಳಿಗೆ ನಗರದ 15 ಕಡೆಗಳಲ್ಲಿ ಧರೆಗುರುಳಿದ ಮರ : 
ಕೆಲವು ವಾರ್ಡ್‌ಗಳಲ್ಲಿ ಹಲವಾರು ರಸ್ತೆಗಳು ಜಲಾವೃತವಾಗಿದ್ದರೆ, ಹಲವೆಡೆ ಮರಗಳು ಬಿದ್ದ ಘಟನೆಗಳು ವರದಿಯಾಗಿವೆ. ರಭಸದ ಗಾಳಿಯಿಂದಾಗಿ ಸುಮಾರು 45 ಮರಗಳು ಧರೆಗುರುಳಿವೆ ಎಂದು ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ. 

ನಿನ್ನೆ ಸುರಿದ ಭಾರೀ ಮಳೆಗೆ ನಗರದ 15 ಪ್ರದೇಶಗಳಲ್ಲಿ ಮರಗಳು ಧರೆಗುರುಳಿವೆ. 
ಲಿಂಗರಾಜಪುರ ವ್ಯಾಪ್ತಿಯಲ್ಲಿ  ಫುಟ್ ಪಾತ್ ಬಳಿ ಇದ್ದ ದೊಡ್ಡ ಮರ  (ಒಣ ಮರ) ಕಾರಿನ ಮೇಲೆ ಬಿದ್ದು ಕಾರು ಕಂಪ್ಲೀಟ್ ಜಖಂ ಆಗಿದೆ. ಆದಾಗ್ಯೂ, ಕಾರಿನಲ್ಲಿದ್ದವರಿಗೆ ಯಾವುದೇ ತೊಂದರೆ ಆಗಿದೆ. ರಾಜಾಜಿನಗರದ ತಿಮ್ಮಯ್ಯ ರಸ್ತೆಯಲ್ಲಿ ಮರಬಿದ್ದು  ಕಾರು, 2ಸ್ಕೂಟರ್ ಜಖಂ ಆಗಿದೆ.   

ಇದನ್ನೂ ಓದಿ- Rain Alert: ಈ ವರ್ಷ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆ ನಿರೀಕ್ಷೆ!

ನಗರದ ಎಲ್ಲೆಲ್ಲಿ ಎಷ್ಟು ಮಳೆ?
-ರಾಜ್ ಮಹಲ್ ಗುಟ್ಟಹಳ್ಳಿ-4 ಸೆಂ.ಮೀ
-ದಯಾನಂದನಗರ-3.2ಸೆಂ.ಮೀ
-ವಿದ್ಯಾಪೀಠ-3.05 ಸೆಂ.ಮೀ
-ಕೊಟ್ಟಿಗೆಪಾಳ್ಯ-2.7ಸೆಂ.ಮೀ
-ಬಾಣಸವಾಡಿ-2.5ಸೆಂ.ಮೀ
-ಕಾಟನ್ ಪೇಟೆ-2.2ಸೆಂ.ಮೀ
-ರಾಜಾಜಿನಗರ-2.2ಸೆಂ.ಮೀ

ಇಂದು ಕೂಡ ಹಲವೆಡೆ ಮಳೆ ಸಾಧ್ಯತೆ: 
ಭಾರತೀಯ ಹವಾಮಾನ ಇಲಾಖೆಯ (Indian Meteorological Department) ಪ್ರಕಾರ, ಬೆಂಗಳೂರು ಸೇರಿದಂತೆ ರಾಜ್ಯದ ಇನ್ನೂ ಕೆಲವು ಭಾಗಗಳಲ್ಲಿ ಮುಂದಿನ ಮೂರು ದಿನಗಳವರೆಗೆ ಮಳೆ ಮುನ್ಸೂಚನೆ ನೀಡಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News