ಬೆಂಗಳೂರಿನಲ್ಲಿ ಕಾಣಿಸಿಕೊಂಡ ‘ಸ್ವರ್ಗದ ಬಾಗಿಲು’! ನಿಗೂಢ ವಿಸ್ಮಯಕ್ಕೆ ಬೆರಗಾದ ಜನರು!

Mysterious Shadow In Bengaluru: ‘ಬೆಂಗಳೂರಿನ ಹವಾಮಾನದಲ್ಲಿ ಏಲಿಯನ್‌ಗಳು ತಮ್ಮ ಬಟ್ಟೆಗಳನ್ನು ಒಣಗಿಸಲು ಪ್ರಯತ್ನಿಸುತ್ತಿದ್ದಾರಾ?’ ಎಂದು ಟ್ವಿಟರ್ ಬಳಕೆದಾರ ಫನ್ನಿಯಾಗಿ ಟ್ವೀಟ್ ಮಾಡಿದ್ದಾರೆ.

Written by - Puttaraj K Alur | Last Updated : Jul 25, 2023, 02:14 PM IST
  • ಜಿಟಿ ಜಿಟಿ ಮಳೆ ನಡುವೆವೆ ಬೆಂಗಳೂರಿನ ಆಗಸದಲ್ಲಿ ಕಾಣಿಸಿಕೊಂಡ ನಿಗೂಢ ವಿಸ್ಮಯ
  • ನಿಗೂಢ ನೆರಳಿನ ಬಗ್ಗೆ ತಲೆ ಕೆಡಿಸಿಕೊಂಡ ಜನರು, ‘ಸ್ವರ್ಗದ ಬಾಗಿಲು’ ಎಂದ ನೆಟಿಜನ್ಸ್
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ವಿಡಿಯೋದ ರಹಸ್ಯವೇನು?
ಬೆಂಗಳೂರಿನಲ್ಲಿ ಕಾಣಿಸಿಕೊಂಡ ‘ಸ್ವರ್ಗದ ಬಾಗಿಲು’! ನಿಗೂಢ ವಿಸ್ಮಯಕ್ಕೆ ಬೆರಗಾದ ಜನರು!  title=
ಬೆಂಗಳೂರಿನಲ್ಲಿ ಕಾಣಿಸಿದ ಸ್ವರ್ಗದ ಬಾಗಿಲು!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಮೋಡ ಮುಸುಕಿದ ವಾತಾವರಣದಿಂದ ಬೆಂಗಳೂರಿನ ಜನರು ಚಳಿಯಿಂದ ನಡುಗುವಂತಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆ ನಿಲ್ಲದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ. ಈ ಮಧ್ಯೆ ಗಾರ್ಡನ್ ಸಿಟಿ ಬೆಂಗಳೂರು ನಿಗೂಢ ವಿಸ್ಮಯಕ್ಕೆ ಸಾಕ್ಷಿಯಾಗಿದೆ.

ಹೌದು, ಸೋಮವಾರ(ಜುಲೈ 24) ರಾತ್ರಿ ಬೆಂಗಳೂರಿನಲ್ಲಿ ‘ಸ್ವರ್ಗದ ಬಾಗಿಲು’ ಕಂಡಿದೆ. ಈ ಈ ನಿಗೂಢ ವಿಸ್ಮಯವನ್ನು ಕಂಡು ಜನರು ಆಶ್ಚರ್ಯವ್ಯಕ್ತಪಡಿಸಿದ್ದಾರೆ. ಆಕಾಶದಲ್ಲಿ ಕಾಣಿಸಿಕೊಂಡ ನಿಗೂಢ ನೆರಳು ಕಂಡು ಜನರು ತಲೆ ಕೆಡಿಸಿಕೊಂಡಿದ್ದಾರೆ. ಕೆಲವರು ಈ ವಿಸ್ಮಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದು ವಿಡಿಯೋ ಮತ್ತು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಸಖತ್ ಚರ್ಚೆಯಾಗುತ್ತಿದೆ.

ಇದನ್ನೂ ಓದಿ: ಹೆತ್ತ ಮಗಳ ಮೇಲೆ ಅತ್ಯಾಚಾರ ಮಾಡಿದ್ದ ಕಾಮುಕ ತಂದೆಗೆ ಬದುಕಿರುವ ತನಕ ಜೈಲು ಶಿಕ್ಷೆ..!

ಟ್ವಿಟರ್​ ಬಳಕೆದಾರರೊಬ್ಬರು ಆಕಾಶದಲ್ಲಿ ಬಾಗಿಲಿನಂತೆ ಕಾಣುವ ನಿಗೂಢ ಹೊಳೆಯುವ ಚಿತ್ರದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆನೇಕರು ಇದು ‘ಸ್ವರ್ಗದ ಬಾಗಿಲು’ ಎಂದೇ ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನು ಕಂಡು ಕೆಲವು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ವಸೀಮ್ ಎಂಬುವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ​‘ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆ ಬಳಿ ಸೋಮವಾರ ರಾತ್ರಿ ಆಕಾಶದಲ್ಲಿ ನಿಗೂಢ ನೆರಳು ಕಾಣಿಸಿಕೊಂಡಿದೆ. ಬೇರೆ ಯಾರಾದರೂ ನೋಡಿದ್ದೀರಾ? ಇದು ಏನಾಗಿರಬಹುದು? ಕಟ್ಟಡದ ನೆರಳಾ? ಹಾಗಾದ್ರೆ ಇದರ ಹಿಂದಿನ ವಿಜ್ಞಾನ ಏನಿರಬಹುದು?’ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಶತ್ರುವಿನ ಶತ್ರು ಮಿತ್ರ ಅಂತ ಹೊಂದಾಣಿಕೆ ಮಾಡಿಕೊಳ್ಳಲು ಸಿಂಗಾಪುರಕ್ಕೆ ತೆರಳಿದ್ದಾರೆ : ಡಿಸಿಎಂ

‘ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ತಪ್ಪಿಸಿಕೊಳ್ಳಲು ಇದು ರಹಸ್ಯ ಬಾಗಿಲು’ ಎಂದು ಸತೀಶ್ ಜಾ ಎಂಬುವರು ಕಾಮೆಂಟ್ ಮಾಡಿದ್ದಾರೆ. ‘ಬೆಂಗಳೂರಿನ ಹವಾಮಾನದಲ್ಲಿ ಏಲಿಯನ್‌ಗಳು ತಮ್ಮ ಬಟ್ಟೆಗಳನ್ನು ಒಣಗಿಸಲು ಪ್ರಯತ್ನಿಸುತ್ತಿದ್ದಾರಾ?’ ಎಂದು ಮತ್ತೊಬ್ಬ ಬಳಕೆದಾರ ಫನ್ನಿಯಾಗಿ ಟ್ವೀಟ್ ಮಾಡಿದ್ದಾರೆ.

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಚರ್ಚೆ ಹುಟ್ಟುಹಾಕಿದೆ. ಕೇಲವರು ಇದು ಎತ್ತರದ ಕಟ್ಟಡದ ಲೈಟ್​ನ ನೆರಳಿರಬಹುದು ಅಂತಾ ಹೇಳಿದ್ರೆ, ಇನ್ನು ಕೆಲವರು ಮೊಡದ ಛಾಯೆ ಇರಬಹುದು ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News