ಮೆದುಳು ನಿಷ್ಕ್ರಿಯಗೊಂಡ ಯುವಕನ ಅಂಗಾಂಗ ದಾನ ಮಾಡಿದ ಪೋಷಕರು

ಮಗನ ಮೆದುಳು ನಿಷ್ಕ್ರಿಯಗೊಂಡ ವಿಷಯ ತಿಳಿದ ಪೋಷಕರು ಮಗ ಜೀವಂತವಾಗಿ ಉಳಿಯೋದಿಲ್ಲ ಎಂದು ಮನಗಂಡು ಡಾ. ಅವಿನಾಶ ನಾಯಿಕ, ರಜನ ಸೋಮಯ್ಯ ಅವರ ಸಲಹೆ ಮೇರೆಗೆ ತಮ್ಮ ಮಗನ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದರು. ಈ ಮೂಲಕ ನಾಲ್ಕೈದು ಜನರ ಜೀವಕ್ಕೆ ಬೆಳಕು‌ ನೀಡುವ ಮೂಲಕ, ಮಗನ ಸಾವಿನಲ್ಲೂ ಪೋಷಕರು ಸಾರ್ಥಕತೆ ಮೆರೆದರು.

Written by - Yashaswini V | Last Updated : Sep 30, 2022, 04:57 PM IST
  • ಮೆದುಳು ನಿಷ್ಕ್ರಿಯಗೊಂಡ ಯುವಕನ ಅಂಗಾಂಗ ದಾನ
  • ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು
  • ಈ ಮೂಲಕ ಮಗನ ಸಾವಿನ ನೋವಿನಂಚಿನಲ್ಲೂ ನಾಲ್ಕೈದು ಜನರ ಜೀವಕ್ಕೆ ಬೆಳಕು ನೀಡಿದ ಪೋಷಕರು
ಮೆದುಳು ನಿಷ್ಕ್ರಿಯಗೊಂಡ ಯುವಕನ ಅಂಗಾಂಗ ದಾನ ಮಾಡಿದ ಪೋಷಕರು  title=
ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು

ಚಿಕ್ಕೋಡಿ: ಮನೆಯಲ್ಲಿ ಜಾರಿಬಿದ್ದು ಗಂಭೀರವಾಗಿ ಗಾಯಗೊಂಡ ಯುವಕನ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆ, ಕುಟುಂಬಸ್ಥರು ಯುವಕನ ಅಂಗಾಂಗ ದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದಲ್ಲಿ ಸೆಪ್ಟೆಂಬರ್ 27, ಮಂಗಳವಾರದಂದು ಪ್ರಶಾಂತ ವಿಠ್ಠಲ ಮಲ್ಲೆವಾಡಿ(ಪೂಜಾರಿ) ಎನ್ನುವ 30 ವರ್ಷದ ಯುವಕ ಮನೆಯಲ್ಲಿ ಶೌಚಾಲಯಕ್ಕೆ ಹೋಗಿ ಮರಳಿ ಬರುವಾಗ ಕಾಲು ಜಾರಿ ಬಿದ್ದು ಗಂಭೀರ ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು‌ ಪೋಷಕರು ಅಥಣಿಯ ಅನ್ನಪೂರ್ಣ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಕಾರಣ ಕೋಮಾಗೆ ತಲುಪಿದ್ದ ಆತನಿಗೆ ಚಿಕಿತ್ಸೆ ಫಲಕಾರಿ ಆಗಲೇ ಇಲ್ಲ. ಅಲ್ಲದೆ ಆತನ ಮಿದುಳು ಕೂಡ ನಿಷ್ಕ್ರಿಯಗೊಂಡಿದನ್ನು ವೈದ್ಯರು ದೃಢಪಡಿಸಿದ್ದರು.

ಮಗನ ಮೆದುಳು ನಿಷ್ಕ್ರಿಯಗೊಂಡ ವಿಷಯ ತಿಳಿದ ಯುವಕನ ಪೋಷಕರು ಮಗ ಜೀವಂತವಾಗಿ ಉಳಿಯೋದಿಲ್ಲ ಎಂದು ಮನಗಂಡು ಡಾ. ಅವಿನಾಶ ನಾಯಿಕ, ರಜನ ಸೋಮಯ್ಯ ಅವರ ಸಲಹೆ ಮೇರೆಗೆ ತಮ್ಮ ಮಗನ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದರು. ಈ ಮೂಲಕ ನಾಲ್ಕೈದು ಜನರ ಜೀವಕ್ಕೆ ಬೆಳಕು‌ ನೀಡುವ ಮೂಲಕ, ಮಗನ ಸಾವಿನಲ್ಲೂ ಪೋಷಕರು ಸಾರ್ಥಕತೆ ಮೆರೆದರು.

ಇದನ್ನೂ ಓದಿ- ಬಂಡೀಪುರ ಕಾಡಿನ ಮೂಲಕ ರಾಜ್ಯಕ್ಕೆ ರಾಗಾ ಎಂಟ್ರಿ; ನಾಯಕನನ್ನು ಸ್ವಾಗತಿಸಿದ ರಾಜ್ಯ ನಾಯಕರ ದಂಡು!!

ಇನ್ನು ಮೃತ ಪ್ರಶಾಂತನ ಪೋಷಕರು‌ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡುತ್ತಿದ್ದಂತೆಯೇ ಬೆಳಗಾವಿ ಕೆ.ಎಲ್.ಇ ಆಸ್ಪತ್ರೆಯ ವೈದ್ಯರಾದ ಡಾ ಸಂತೋಷ ಪಾಟೀಲ ಪರಿಶೀಲಿಸಿ, ಪ್ರಶಾಂತನ ದೇಹದಿಂದ ಲೀವರ್, 2 ಕಿಡ್ನಿ, ಹೃದಯ, ಚರ್ಮ, ಕಣ್ಣುಗಳನ್ನು ತೆಗೆದು ಬೇರೆಯವರಿಗೆ ಹಾಕಬಹುದು ಎಂದು ತಿಳಿಸಿದರು.
 
ಇದನ್ನೂ ಓದಿ- ಭಾರತ್ ಜೋಡೋ ಯಾತ್ರೆಗೆ ಖಾಕಿ ಅಲರ್ಟ್!!

ಪ್ರಶಾಂತ ವಿಠ್ಠಲ ಮಲ್ಲೆವಾಡಿ(ಪೂಜಾರಿ) ತನ್ನ ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸುತ್ತಿದ್ದರೂ ಕೂಡ ಈ ಯುವಕನ ಪೋಷಕರು ಮಗನ ಸಾವಿನ ನೋವಿನಂಚಿನಲ್ಲೂ ಕೈಗೊಂಡ ಮಗನ ಅಂಗಾಂಗ ದಾನದ ನಿರ್ಧಾರ, ನಾಲ್ಕೈದು ಜನರ ಬಾಳಿಗೆ ಬೆಳಕು ನೀಡಿದ್ದು ನಿಜಕ್ಕೂ ಶ್ಲಾಘನೀಯ ಹಾಗೂ ಇತರರಿಗೆ ಮಾದರಿ ಆಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News