ನೇಹಾ ಕೊಲೆ ವೈಯಕ್ತಿಕ ವಿಚಾರವಲ್ಲ, ದೇಶದ ಸಾಮಾಜಿಕ ವಿಚಾರ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

Former CM Basavaraja Bommai: ಇಂದು ಹಾವೇರಿಯಲ್ಲಿ ನೇಹಾ ಹತ್ಯೆ ಖಂಡಿಸಿ ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು

Written by - Prashobh Devanahalli | Last Updated : Apr 22, 2024, 03:32 PM IST
    • ನೇಹಾ ಹಿರೇಮಠ ಕೊಲೆಯ ಹಿಂದೆ ದೊಡ್ಡ ಷಡ್ಯಂತ್ರ ಇದೆ
    • ಇದರ ಹಿಂದೆ ದೇಶದ ಸಾಮಾಜಿಕ ವಿಚಾರ ಇದೆ
    • ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ
ನೇಹಾ ಕೊಲೆ ವೈಯಕ್ತಿಕ ವಿಚಾರವಲ್ಲ, ದೇಶದ ಸಾಮಾಜಿಕ ವಿಚಾರ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ title=
Basavaraja Bommai

ಹಾವೇರಿ: ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಯ ಹಿಂದೆ ದೊಡ್ಡ ಷಡ್ಯಂತ್ರ ಇದ್ದು, ಇದು ವೈಯಕ್ತಿಕ ವಿಚಾರವಲ್ಲ. ಇದರ ಹಿಂದೆ ದೇಶದ ಸಾಮಾಜಿಕ ವಿಚಾರ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅವರು ಇಂದು ಹಾವೇರಿಯಲ್ಲಿ ನೇಹಾ ಹತ್ಯೆ ಖಂಡಿಸಿ ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು. ನಾವು ಅತ್ಯಂತ ದುಖ ಆಘಾತದ ಸಂದರ್ಭದಲ್ಲಿ ಸೇರಿದ್ದೇವೆ.  ಹೆಣ್ಸು ಮಕ್ಕಳು ಮಾತನಾಡಿದ್ದು ಕರಳು  ಕಿತ್ತು ಬರುವಂತಿದೆ. ಅವನು ಹಾಡಹಗಲೆ ಭಯಂಕರ ಕೊಲೆ ಮಾಡಿದ್ದಾನೆ ಎಂದರೆ ಅವನು ಒಬ್ಬನೇ ಇಲ್ಲ. ಇದು ಕೇವಲ ವೈಯಕ್ತಿಕ ವಿಚಾರ ಅಲ್ಲ. ಇದರ ಹಿಂದೆ ದೇಶದ ಸಾಮಾಜಿಕ ವಿಚಾರ ಇದೆ ಎಂದು ಹೇಳಿದರು.

ಇದನ್ನೂ ಓದಿ: ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಸಿಕ್ಸರ್ ಹೊಡೆದ ಆಟಗಾರ ಯಾರು ಗೊತ್ತಾ? 99 ರಷ್ಟು ಮಂದಿಗೆ ಇದಕ್ಕೆ ಉತ್ತರವೇ ಗೊತ್ತಿಲ್ಲ!

ನಾವು ಅಧಿಕಾರದಲ್ಲಿ ಇದ್ದಾಗ ಚಿಕ್ಕಮಗಳೂರಿನಲ್ಲಿ ಅಮಾಯಕ ಮಹಿಳೆಯ ಮೇಲೆ ಅತ್ಯಾಚಾರ ನಡೆದಾಗ ಅವನನ್ನು ಗಲ್ಲಿಗೇರಿಸುವಂತೆ ಕ್ರಮ ಕೈಗೊಂಡಿದ್ದೇವು. ನೇಹಾ ತಂದೆ ರಾಜ್ಯದ ಪೊಲಿಸರ ಮೇಲೆ ನಂಬಿಕೆ ಇಲ್ಲ ಅಂತ ಹೇಳಿದ್ದಾರೆ. ರಾಜ್ಯ ಸರ್ಕಾರದ ನಡವಳಿಕೆ ಅವರಿಗೆ ಬೇಸರ ತರಿಸಿದೆ. ಈ ಪ್ರಕರಣವನ್ನು ಸಿಬಿಐಗೆ ಕೊಡಬೇಕು ಎಂದು ಹೆಳಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಿ ನೇಹಾಗೆ ನ್ಯಾಯ ಸಿಗುವವರೆಗೂ ನಾವು ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಇದೊಂದೆ ಪ್ರಕರಣ ಅಲ್ಲ. ಹಾವೇರಿಯಲ್ಲಿ ಅಲ್ಪ ಸಂಖ್ಯಾತರ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದಾಗ ರಾಜ್ಯ ಸರ್ಕಾರ ಅವರನ್ನು ರಕ್ಷಿಸುವ ಕೆಲಸ ಮಾಡಿದ್ದರು. ಆ ಮಹಿಳೆ ಬಹಿರಂಗವಾಗಿ ಹೇಳಿಕೆ ಕೊಟ್ಟ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿದರು. ರಾಜ್ಯದಲ್ಲಿ ಒಂದೇ ಕೊಮಿನ ಹೆಣ್ಣು ಮಕ್ಕಳು ಯಾಕೆ ಸಾಯುತ್ತಿದ್ದಾರೆ. ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ ಎಂದರು.

ಇದನ್ನೂ ಓದಿ: Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ!

 ಪ್ರತಿ ಮನೆಯ ಹೆಣ್ಣು ಮಗಳು ನಮ್ಮ ಮಕ್ಕಳು, ಎಲ್ಲ ಕಡೆ ಹೆಣ್ಣು ಮಕ್ಕಳು ಅವನನ್ನು ಗಲ್ಲಿಗೇರಿಸುವಂತೆ ಆಗ್ರಹಿಸುತ್ತಿದ್ದಾರೆ. ಇದೊಂದು ಅಗ್ನಿಕುಂಡವಾಗಿದೆ. ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ರಾಜ್ಯ ಜಂಗಲ್ ರಾಜ್ ಆಗಿದೆ. ಸಿಎಂ ಒಂದು ಟ್ವೀಟ್ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಅಲ್ಲದೇ ಅವಳ ಬಗ್ಗೆ ಅನಗತ್ಯ ಆರೋಪ ಮಾಡುವ ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ. ಈ ಬಗ್ಗೆಯೂ ತನಿಖೆ ಆಗಬೇಕು‌. ನಾವು ವಿದ್ಯಾರ್ಥಿಗಳ ಹೋರಾಟದ ಜೊತೆಗಿದ್ದೇವೆ. ಈಗ ನಡೆಯುತ್ತಿರುವುದು ಜನ ಶಕ್ತಿ ಮತ್ತು ಅಧಿಕಾರ ಶಕ್ತಿ ನಡುವೆ ನಡೆಯುವ ಹೋರಾಟ. ಜನಶಕ್ತಿಯ ಹೋರಾಟಕ್ಕೆ ಯಾವಾಗಲೂ ಜಯ ಸಿಗುತ್ತದೆ. ಆರೋಪಿಗೆ ತಕ್ಕ ಶಿಕ್ಷೆಯಾಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News