Eid Al Fitr 2023: ಯುಎಇ-ಸೌದಿಯಲ್ಲಿ ಇಂದು ಈದ್ ಆಚರಣೆ: ಭಾರತದಲ್ಲಿ ಚಂದ್ರದರ್ಶನ ಯಾವಾಗ? ಸಂಪೂರ್ಣ ಅಪ್ಡೇಟ್

Eid Al Fitr 2023 Date: ಶುಕ್ರವಾರದಿಂದ ಭಾನುವಾರದವರೆಗೆ ಯುಎಇಯಲ್ಲಿ ಎಲ್ಲಾ ಸರ್ಕಾರಿ-ಖಾಸಗಿ ಸಂಸ್ಥೆಗಳು ಮುಚ್ಚಲ್ಪಡುತ್ತವೆ. ಹಬ್ಬ ಆಚರಿಸಲು ಖಾಸಗಿಯವರಿಗೂ ಅಲ್ಲಿ ರಜೆ ನೀಡಲಾಗಿದೆ. ಯುಎಇಯ ಎಲ್ಲಾ ಸರ್ಕಾರಿ ಕಟ್ಟಡಗಳನ್ನು ದೀಪಗಳಿಂದ ಅಲಂಕರಿಸಿ, ಪಟಾಕಿ ಸಿಡಿಸಿ ಹಬ್ಬ ಆಚರಣೆ ಮಾಡಲಿದ್ದಾರೆ.

Written by - Bhavishya Shetty | Last Updated : Apr 21, 2023, 01:36 AM IST
    • ಇಸ್ಲಾಮಿಕ್ ತಿಂಗಳ ಶವ್ವಾಲ್ ಏಪ್ರಿಲ್ 21 ರಿಂದ ಪ್ರಾರಂಭವಾಗಲಿದೆ ಎಂದು ಸಮಿತಿ ಹೇಳಿದೆ.
    • ಇದರೊಂದಿಗೆ ಯುಎಇಯಲ್ಲಿ 3 ದಿನಗಳ ಈದ್ ಹಬ್ಬ ಆರಂಭವಾಗಿದೆ.
    • ಈಗ ದೇಶದ ಮುಸ್ಲಿಮರು ಏಪ್ರಿಲ್ 22 ರ ಶನಿವಾರದಂದು ಈದ್ ಅನ್ನು ಆಚರಿಸುತ್ತಾರೆ ಎಂದು ಹೇಳಲಾಗುತ್ತದೆ
Eid Al Fitr 2023: ಯುಎಇ-ಸೌದಿಯಲ್ಲಿ ಇಂದು ಈದ್ ಆಚರಣೆ: ಭಾರತದಲ್ಲಿ ಚಂದ್ರದರ್ಶನ ಯಾವಾಗ? ಸಂಪೂರ್ಣ ಅಪ್ಡೇಟ್  title=
Eid Celebration

Eid Al Fitr 2023 Date: ಈದ್ ಹಬ್ಬವನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌’ನಲ್ಲಿ ಶುಕ್ರವಾರ ಅಂದರೆ ಏಪ್ರಿಲ್ 21 ರಂದು ಆಚರಿಸಲಾಗುತ್ತದೆ. ಯುಎಇಯ ಚಂದ್ರ ವೀಕ್ಷಣಾ ಸಮಿತಿ ಗುರುವಾರ ಇದನ್ನು ಪ್ರಕಟಿಸಿದೆ. ರಂಜಾನ್‌’ನ ಕೊನೆಯ ದಿನ ಏಪ್ರಿಲ್ 20. ಇಸ್ಲಾಮಿಕ್ ತಿಂಗಳ ಶವ್ವಾಲ್ ಏಪ್ರಿಲ್ 21 ರಿಂದ ಪ್ರಾರಂಭವಾಗಲಿದೆ ಎಂದು ಸಮಿತಿ ಹೇಳಿದೆ. ಇದರೊಂದಿಗೆ ಯುಎಇಯಲ್ಲಿ 3 ದಿನಗಳ ಈದ್ ಹಬ್ಬ ಆರಂಭವಾಗಿದೆ.

ಇದನ್ನೂ ಓದಿ: ಅಸ್ಸಾಂ-ಯುಪಿ ಬಳಿಕ ಈ ರಾಜ್ಯದಲ್ಲೂ ಮದ್ರಸಾಗಳ ವಿರುದ್ಧ ಭುಗಿಲೆದ್ದ ಆಕ್ರೋಶ! ಸಿಎಂ ಶಾಕಿಂಗ್ ಹೇಳಿಕೆ

ವರದಿಯ ಪ್ರಕಾರ, ಶುಕ್ರವಾರದಿಂದ ಭಾನುವಾರದವರೆಗೆ ಯುಎಇಯಲ್ಲಿ ಎಲ್ಲಾ ಸರ್ಕಾರಿ-ಖಾಸಗಿ ಸಂಸ್ಥೆಗಳು ಮುಚ್ಚಲ್ಪಡುತ್ತವೆ. ಹಬ್ಬ ಆಚರಿಸಲು ಖಾಸಗಿಯವರಿಗೂ ಅಲ್ಲಿ ರಜೆ ನೀಡಲಾಗಿದೆ. ಯುಎಇಯ ಎಲ್ಲಾ ಸರ್ಕಾರಿ ಕಟ್ಟಡಗಳನ್ನು ದೀಪಗಳಿಂದ ಅಲಂಕರಿಸಿ, ಪಟಾಕಿ ಸಿಡಿಸಿ ಹಬ್ಬ ಆಚರಣೆ ಮಾಡಲಿದ್ದಾರೆ.

ಮತ್ತೊಂದೆಡೆ, ಆಸ್ಟ್ರೇಲಿಯಾ, ಸಿಂಗಾಪುರ, ಇಂಡೋನೇಷ್ಯಾ, ಮಲೇಷ್ಯಾ, ಬ್ರೂನಿ, ಥೈಲ್ಯಾಂಡ್, ಜಪಾನ್ ಮತ್ತು ಫಿಲಿಪೈನ್ಸ್‌ನಲ್ಲಿ ವಾಸಿಸುವ ಮುಸ್ಲಿಮರು ಏಪ್ರಿಲ್ 22 ಶನಿವಾರದಂದು ಈದ್ ಅಲ್ ಫಿತರ್ (ಈದ್ ಅಲ್ ಫಿತರ್ 2023) ಆಚರಿಸುವುದಾಗಿ ಘೋಷಿಸಿದ್ದಾರೆ. ಗುರುವಾರ ಅಲ್ಲಿ ಈದ್‌’ನ ಚಂದ್ರ ಕಾಣದಿರುವುದು ಇದಕ್ಕೆ ಕಾರಣ. ಇನ್ನು, ಯುಎಇ, ಸೌದಿ ಅರೇಬಿಯಾ, ಬಹ್ರೇನ್, ಕತಾರ್ ಸೇರಿದಂತೆ ಎಲ್ಲಾ ಗಲ್ಫ್ ರಾಷ್ಟ್ರಗಳಲ್ಲಿ ಏಪ್ರಿಲ್ 21 ಶುಕ್ರವಾರದಂದು ಈದ್ ಹಬ್ಬವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ಭಾರತದ ಸಂತಸದ ರಾಜ್ಯ ಯಾವುದು ಗೊತ್ತಾ? ನೂತನ ಅಧ್ಯಯನ ಹೇಳಿದ್ದೇನು?

ಆದರೆ ರಬ್ ದೇಶದಲ್ಲಿ ಬರಿಗಣ್ಣು ಅಥವಾ ದೂರದರ್ಶಕದ ಸಹಾಯದಿಂದ ಗುರುವಾರ ಚಂದ್ರನನ್ನು ನೋಡುವುದು ಸಂಪೂರ್ಣವಾಗಿ ಅಸಾಧ್ಯ ಎಂದು ಕೇಂದ್ರವು ಟ್ವಿಟರ್‌ನಲ್ಲಿ ಹೇಳಿಕೆಯನ್ನು ಪೋಸ್ಟ್ ಮಾಡಿದೆ. ಈ ಸಮಯದಲ್ಲಿ ಚಂದ್ರ ಎಷ್ಟು ಚಿಕ್ಕದಾಗಿರಲಿದೆ ಎಂದರೆ ಪಶ್ಚಿಮ ಆಫ್ರಿಕಾದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ಎಲ್ಲಿಯೂ ಕಾಣಿಸಲು ಸಾಧ್ಯವಿಲ್ಲ. ಅಲ್ಲಿಯೂ ಚಂದ್ರನನ್ನು ನೋಡಲು ನಿಖರವಾದ ದೂರದರ್ಶಕ, ವೃತ್ತಿಪರ ವೀಕ್ಷಕ ಮತ್ತು ಸ್ಪಷ್ಟ ಹವಾಮಾನದ ಅಗತ್ಯವಿದೆ. ಇಲ್ಲದೇ ಹೋದರೆ ಅಲ್ಲಿಯೂ ಚಂದ್ರ ಕಾಣುವುದಿಲ್ಲ. ಈದ್‌’ನ ಚಂದ್ರನು ಗುರುವಾರ ಭಾರತದಲ್ಲಿ ಗೋಚರಿಸಿಲ್ಲ, ಆದ್ದರಿಂದ ಈಗ ದೇಶದ ಮುಸ್ಲಿಮರು ಏಪ್ರಿಲ್ 22 ರ ಶನಿವಾರದಂದು ಈದ್ ಅನ್ನು ಆಚರಿಸುತ್ತಾರೆ ಎಂದು ಹೇಳಲಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News