ಇವರೇ ನೋಡಿ ರವಿಮಾಮನ ʼಪ್ರೇಮಲೋಕ 2ʼ ಸಿನಿಮಾ ನಟಿ..! ಯಾರ್‌ ಗೊತ್ತಾ ಈ ಚೆಲುವೆ

Teju Ashwini in Premaloka 2 : ಕನ್ನಡ ಸಿನಿ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ್ದ, ವಿ ರವಿಚಂದ್ರನ್ ನಟಿಸಿ ನಿರ್ದೇಶನದ ಸಿನಿಮಾ ಪ್ರೇಮಲೋಕ. ಈ ಸಿನಿಮಾದ ಸಾಂಗ್‌ಗಳು ಇಂದಿಗೂ ಫೆಮಸ್‌. ಸಧ್ಯ ರವಿಮಾಮ ಪ್ರೇಮಲೋಕ 2 ಮೂಲಕ ಮತ್ತೊಮ್ಮೆ ಇತಿಹಾಸವನ್ನು ಸೃಷ್ಟಿಸಲು ಸಜ್ಜಾಗುತ್ತಿದ್ದು, ಇದೀಗ ಈ ಚಿತ್ರಕ್ಕೆ ಸಂಬಂಧಿಸಿ ಬಿಗ್‌ ಅಪ್‌ಡೇಟ್‌ ಹೊರಬಿದ್ದಿದೆ.

1 /6

ಹೌದು.. ಪ್ರೇಮಲೋಕ 2 ಚಿತ್ರವು ಪ್ರಸ್ತುತ ಸ್ಕ್ರಿಪ್ಟಿಂಗ್ ಹಂತದಲ್ಲಿದ್ದು, ಕ್ರೇಜಿಸ್ಟಾರ್‌ ಹಿರಿಯ ಮಗ ಮನೋರಂಜನ್ ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಗೆ ನಾಯಕಿ ಯಾರು...? ಎನ್ನುವುದೇ ದೊಡ್ಡ ಕುತೂಹಲಕಾರಿ ವಿಷಯವಾಗಿದೆ. ಇದೀಗ ಪ್ರೇಮಲೋಕಕ್ಕೆ ತಮಿಳು ಸುಂದರಿ ಎಂಟ್ರಿ ಕೊಡಲಿದ್ದಾಳೆ ಎನ್ನುವ ಮಾತು ಕೇಳಿ ಬಂದಿದೆ.  

2 /6

ಕಾಲಿವುಡ್‌ ನಟಿ ತೇಜು ಅಶ್ವಿನಿ ಪ್ರೇಮಲೋಕ 2 ಸಿನಿಮಾದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಈ ಕುರಿತು ನಟ ರವಿಚಂದ್ರನ್‌ ಆಗಲಿ ಚಿತ್ರತಂಡವಾಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ತೇಜು ಹೆಸರು ಮಾತ್ರ ಬಲವಾಗಿ ಕೇಳಿ ಬರುತ್ತಿದೆ.  

3 /6

ನರ್ತಕಿ ಮತ್ತು ನೃತ್ಯ ಸಂಯೋಜಕಿ ತೇಜು ಅಶ್ವಿನಿ ಕಲ್ಯಾಣ ಸಮಯಲ್ ಸಧಮ್ (Kalyana Samayal Sadham) ಧಾರಾವಾಹಿಯ ಪಾತ್ರದ ಮೂಲಕ ಖ್ಯಾತಿಯನ್ನು ಗಳಿಸಿದ್ದಾರೆ. ಎನ್ನ ಸೊಲ್ಲ ಪೊಗಿರೈ, ಮೂಂದ್ರಂ ಕಣ್ ಮತ್ತು ಕಾತು ವಾಕುಲಾ ರೆಂದು ಕಾದಲ್ ಚಿತ್ರಗಳ ಮೂಲಕ ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ.  

4 /6

ವರದಿಗಳ ಪ್ರಕಾರ, ತೇಜು ಕಳೆದ ಆರು ತಿಂಗಳಿನಿಂದ ಬೆಂಗಳೂರಿನಲ್ಲಿದ್ದು, ಪ್ರೇಮಲೋಕ 2 ತಂಡದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ, ತೇಜು ನಟ ಮನೋರಂಜನ್ ಅವರೊಂದಿಗೆ ಒಂದೆರಡು ಬಾರಿ ಕಾಣಿಸಿಕೊಂಡಿದ್ದು, ಪ್ರೇಮಲೋಕ 2ಗೆ ನಟಿಯ ಎಂಟ್ರಿ ಫಿಕ್ಸ್‌ ಎನ್ನುವುದ ಫಿಕ್ಸ್‌ ಆಗಿದೆ. ಸಧ್ಯ ಅಧಿಕೃತವಾಗಿ ಅನೌನ್ಸ್‌ ಮಾಡಬೇಕಿದೆ ಅಷ್ಟೇ..  

5 /6

ಪ್ರೇಮಲೋಕ ಕನ್ನಡ ಸಿನಿರಂಗದ ಮೈಲಿಗಲ್ಲು ಎಂದರೆ ತಪ್ಪಾಗದು. ಅಂದಿನ ಕಾಲದಲ್ಲಿ ಈ ಸಿನಿಮಾ ದೊಡ್ಡ ಬ್ಲಾಕ್ಬಸ್ಟರ್ ಹಿಟ್‌ ಆಗಿತ್ತು. ಅಲ್ಲದೆ, ನಟರಾಗಿದ್ದ ವಿ ರವಿಚಂದ್ರನ್ ಅವರನ್ನು ನಿರ್ದೇಶಕರಾಗಿ ಪರಿಚಯಿಸಿತು. ಪ್ರಸಿದ್ಧ ಚಲನಚಿತ್ರ ನಿರ್ಮಾಪಕ, ರವಿಚಂದ್ರನ್‌ ಅವರ ತಂದೆ ವೀರಸ್ವಾಮಿ ಒಡೆತನದ ಶ್ರೀ ಈಶ್ವರಿ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ನಿರ್ಮಿಸಿತ್ತು.  

6 /6

ಅದಲ್ಲದೆ, ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಈ ಸಿನಿಮಾ ಕ್ರೇಜ್‌ ತಂದು ಕೊಟ್ಟಿತು. ಹಂಸಲೇಖ ಅವರ ಪ್ರೇಮಲೋಕದ ಎಲ್ಲಾ ಹಾಡುಗಳು ಇಂದಿಗೂ ಸಖತ್‌ ಫೇಮಸ್‌. ಪ್ರೇಮಲೋಕ ಚಿತ್ರದಲ್ಲಿ ರವಿಚಂದ್ರನ್ ಮತ್ತು ಜೂಹಿ ಚಾವ್ಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ವಿಷ್ಣುವರ್ಧನ್‌ ಕಾಣಿಸಿಕೊಂಡಿದ್ದರು.