ಧೋನಿಯೂ ಅಲ್ಲ, ರೋಹಿತ್ ಶರ್ಮಾನೂ ಅಲ್ಲ… ಈ ಕ್ರಿಕೆಟಿಗನೇ ಟಿ20 ಕ್ರಿಕೆಟ್’ನಲ್ಲಿ ವಿಶ್ವದ ಅತ್ಯಂತ ಯಶಸ್ವಿ ನಾಯಕ!

most successful captain in international T20: ಭಾನುವಾರ ಡಬ್ಲಿನ್‌’ನಲ್ಲಿ ನಡೆದ ಎರಡನೇ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಪಾಕಿಸ್ತಾನವು ಐರ್ಲೆಂಡ್‌ ವಿರುದ್ಧ ಸೇಡು ತೀರಿಸಿಕೊಂಡಿದ್ದು, 7 ವಿಕೆಟ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ತಂಡದ ನಾಯಕ ಬಾಬರ್ ಅಜಮ್ ಇತಿಹಾಸ ನಿರ್ಮಿಸಿದ್ದಾರೆ.

Written by - Bhavishya Shetty | Last Updated : May 14, 2024, 07:24 PM IST
    • ಬಾಬರ್ ಆಜಮ್ ಅಂತಾರಾಷ್ಟ್ರೀಯ ಟಿ20ಯಲ್ಲಿ ವಿಶ್ವದ ಅತ್ಯಂತ ಯಶಸ್ವಿ ನಾಯಕ
    • ಗೆಲುವಿನೊಂದಿಗೆ ತಂಡದ ನಾಯಕ ಬಾಬರ್ ಅಜಮ್ ಇತಿಹಾಸ ನಿರ್ಮಿಸಿದ್ದಾರೆ
    • 45 ರಲ್ಲಿ ಪಾಕಿಸ್ತಾನಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದ ಆಜಮ್
ಧೋನಿಯೂ ಅಲ್ಲ, ರೋಹಿತ್ ಶರ್ಮಾನೂ ಅಲ್ಲ… ಈ ಕ್ರಿಕೆಟಿಗನೇ ಟಿ20 ಕ್ರಿಕೆಟ್’ನಲ್ಲಿ ವಿಶ್ವದ ಅತ್ಯಂತ ಯಶಸ್ವಿ ನಾಯಕ!  title=
Most Successful Captain

IRE vs PAK, T20I: ಪಾಕಿಸ್ತಾನ ನಾಯಕ ಬಾಬರ್ ಅಜಮ್ T20 ಅಂತರಾಷ್ಟ್ರೀಯ ಪಂದ್ಯದಲ್ಲಿ ಶ್ರೇಷ್ಠ ದಾಖಲೆಯನ್ನು ಮಾಡಿದ್ದಾರೆ. ಬಾಬರ್ ಆಜಮ್ ಈಗ ಅಂತಾರಾಷ್ಟ್ರೀಯ ಟಿ20ಯಲ್ಲಿ ವಿಶ್ವದ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾದ ದಿಗ್ಗಜ ಇರ್ಫಾನ್ ಪಠಾಣ್ ಪತ್ನಿ ಯಾರು ಗೊತ್ತಾ? ಮದುವೆಯಾಗಿ 8 ವರ್ಷ ಕಾಲ ಮುಖ ತೋರಿಸದೆ ಬದುಕಿದ್ಳು ಈ ಸುಂದರಿ

ಭಾನುವಾರ ಡಬ್ಲಿನ್‌’ನಲ್ಲಿ ನಡೆದ ಎರಡನೇ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಪಾಕಿಸ್ತಾನವು ಐರ್ಲೆಂಡ್‌ ವಿರುದ್ಧ ಸೇಡು ತೀರಿಸಿಕೊಂಡಿದ್ದು, 7 ವಿಕೆಟ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ತಂಡದ ನಾಯಕ ಬಾಬರ್ ಅಜಮ್ ಇತಿಹಾಸ ನಿರ್ಮಿಸಿದ್ದಾರೆ. ಅಂದರೆ ಬಾಬರ್ ಅಜಮ್ ಈಗ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು  ಪಂದ್ಯಗಳನ್ನು ಗೆದ್ದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬಾಬರ್ ಅಜಮ್ ಅವರು ಉಗಾಂಡಾದ ನಾಯಕ ಬ್ರಿಯಾನ್ ಮಸಾಬಾ ಅವರನ್ನು ಹಿಂದಿಕ್ಕಿ T20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶ್ವದ ಅತ್ಯಂತ ಯಶಸ್ವಿ ನಾಯಕ ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ. ಬಾಬರ್ ಅಜಮ್ 78 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 45 ರಲ್ಲಿ ಪಾಕಿಸ್ತಾನಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಈ ಅವಧಿಯಲ್ಲಿ ಪಾಕಿಸ್ತಾನ 26 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸೋಲನುಭವಿಸಿದೆ. 7 ಟಿ20 ಅಂತರಾಷ್ಟ್ರೀಯ ಪಂದ್ಯಗಳು ಅನಿರ್ದಿಷ್ಟವಾಗಿವೆ.

ಅಂತಾರಾಷ್ಟ್ರೀಯ ಟಿ20ಯಲ್ಲಿ ಯಶಸ್ವಿ ನಾಯಕ

1. ಬಾಬರ್ ಅಜಮ್ (ಪಾಕಿಸ್ತಾನ) - 45 ಪಂದ್ಯಗಳಲ್ಲಿ ಗೆಲುವು

2. ಬ್ರಿಯಾನ್ ಮಸಾಬಾ (ಉಗಾಂಡಾ) - 44 ಪಂದ್ಯಗಳಲ್ಲಿ ಗೆಲುವು

3. ಅಸ್ಗರ್ ಅಫ್ಘಾನ್ (ಅಫ್ಘಾನಿಸ್ತಾನ) - 42 ಪಂದ್ಯಗಳಲ್ಲಿ ಗೆಲುವು

4. ಇಯಾನ್ ಮಾರ್ಗನ್ (ಇಂಗ್ಲೆಂಡ್) - 42 ಪಂದ್ಯಗಳಲ್ಲಿ ಗೆಲುವು

5. ರೋಹಿತ್ ಶರ್ಮಾ (ಭಾರತ) - 41 ಪಂದ್ಯಗಳಲ್ಲಿ ಗೆಲುವು

6. ಮಹೇಂದ್ರ ಸಿಂಗ್ ಧೋನಿ (ಭಾರತ) - 41 ಪಂದ್ಯಗಳಲ್ಲಿ ಗೆಲುವು

7. ಆರನ್ ಫಿಂಚ್ (ಆಸ್ಟ್ರೇಲಿಯಾ) - 40 ಪಂದ್ಯಗಳಲ್ಲಿ ಗೆಲುವು

ಇದನ್ನೂ ಓದಿ:  ಟೆಸ್ಟ್ ಕ್ರಿಕೆಟ್ ಚರಿತ್ರೆಯಲ್ಲಿ ಒಂದೇ ಒಂದು ಬಾರಿಯೂ ಔಟ್ ಆಗಿಲ್ಲ ಈ ನಾಲ್ವರು ಆಟಗಾರರು! ಯಾರವರು ಗೊತ್ತಾ?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News