ಸತತ 5 ಗೆಲುವು ಕಂಡ RCB… ಸಾಲು ಸಾಲು ವಿಜಯದ ಹಿಂದಿರುವ ಮಾಸ್ಟರ್ ಪ್ಲಾನ್ ಇದುವೇ ಎಂದ ಯಶ್ ದಯಾಳ್

IPL 2024: ಆರ್‌ಸಿಬಿಯ ಪ್ಲೇಆಫ್ ಹಾದಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೋಡೆಯಂತಿತ್ತು. ಆದರೆ ಏಪ್ರಿಲ್ 12 ರಂದು RCB ದೆಹಲಿಯನ್ನು ಸೋಲಿಸಿತು. ಇದೀಗ, ಪ್ಲೇಆಫ್ ತಲುಪುವುದು ಆರ್‌’ಸಿಬಿಗೆ ಸುಲಭವೇನಲ್ಲ.

Written by - Bhavishya Shetty | Last Updated : May 13, 2024, 07:19 PM IST
    • ಹಲವು ವರ್ಷಗಳಿಂದ ಟ್ರೋಫಿ ಎತ್ತಿಹಿಡಿಯಲು ಹರಸಾಹಸ ಪಡುತ್ತಿರುವ ತಂಡ ಆರ್’ಸಿಬಿ
    • ಬೆಂಗಳೂರು ತಂಡ, ಇದೀಗ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ
    • ಆರ್‌ಸಿಬಿಯ ಪ್ಲೇಆಫ್ ಹಾದಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೋಡೆಯಂತಿತ್ತು
ಸತತ 5 ಗೆಲುವು ಕಂಡ RCB… ಸಾಲು ಸಾಲು ವಿಜಯದ ಹಿಂದಿರುವ ಮಾಸ್ಟರ್ ಪ್ಲಾನ್ ಇದುವೇ ಎಂದ ಯಶ್ ದಯಾಳ್ title=
Yash Dayal

IPL 2024: ಹಲವು ವರ್ಷಗಳಿಂದ ಟ್ರೋಫಿ ಎತ್ತಿಹಿಡಿಯಲು ಹರಸಾಹಸ ಪಡುತ್ತಿರುವ ತಂಡ ಆರ್’ಸಿಬಿ. IPL 2024ರ ಆರಂಭದಲ್ಲಿ, ಕಳಪೆ ಪ್ರದರ್ಶನ ತೋರಿದ್ದ ತಂಡ, ಅದಾದ ಬಳಿಕ ಅದ್ಭುತವಾಗಿ ಕಂಬ್ಯಾಕ್ ಮಾಡಿತ್ತು. ಸತತ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಬೆಂಗಳೂರು ತಂಡ, ಇದೀಗ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಇದನ್ನೂ ಓದಿ: ಟೀಂ ಇಂಡಿಯಾ ಸ್ಟಾರ್ ಯುವರಾಜ್ ಸಿಂಗ್ ಪತ್ನಿ ಯಾರೆಂದು ಗೊತ್ತೇ? ಈಕೆ ಬಾಲಿವುಡ್’ನ ಖ್ಯಾತ ನಟಿ.. ಸಲ್ಮಾನ್ ಖಾನ್ ಜೊತೆಯೂ ನಟಿಸಿದ್ರು ಈ ಬ್ಯೂಟಿ

ಆರ್‌ಸಿಬಿಯ ಪ್ಲೇಆಫ್ ಹಾದಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೋಡೆಯಂತಿತ್ತು. ಆದರೆ ಏಪ್ರಿಲ್ 12 ರಂದು RCB ದೆಹಲಿಯನ್ನು ಸೋಲಿಸಿತು. ಇದೀಗ, ಪ್ಲೇಆಫ್ ತಲುಪುವುದು ಆರ್‌’ಸಿಬಿಗೆ ಸುಲಭವೇನಲ್ಲ. ಏಕೆಂದರೆ, ಲೀಗ್ ಸುತ್ತಿನ ಕೊನೆಯ ಪಂದ್ಯದಲ್ಲಿ ಆರ್‌’ಸಿಬಿಗೆ ಸವಾಲೊಡ್ಡಲು ಚೆನ್ನೈ ಬರಲಿದೆ. ಪ್ಲೇಆಫ್ ಟಿಕೆಟ್ ಕಾಯ್ದಿರಿಸಲು, ರನ್ ರೇಟ್ ಅನ್ನು ಗಮನದಲ್ಲಿಟ್ಟುಕೊಂಡು ಆರ್‌ಸಿಬಿ ಚೆನ್ನೈ ವಿರುದ್ಧ ದೊಡ್ಡ ಗೆಲುವು ದಾಖಲಿಸಬೇಕಾಗಿದೆ.

RCBಯ ಮಾಸ್ಟರ್ ಪ್ಲಾನ್ ಏನು?

ಡೆಲ್ಲಿ ವಿರುದ್ಧದ ಪಂದ್ಯದ ಗೆಲುವಿನ ನಂತರ ಮಾತನಾಡಿದ ಯಶ್ ದಯಾಳ್, “ಕಳೆದ ಕೆಲವು ಪಂದ್ಯಗಳಲ್ಲಿ ನಮ್ಮ ಪ್ರದರ್ಶನ ಸಾಕಷ್ಟು ಸುಧಾರಿಸಿದೆ. ನನ್ನ ಪ್ರಕಾರ ಕೆಲವು ಪಂದ್ಯಗಳಲ್ಲಿ ಆಕ್ರಮಣಕಾರಿ ಆಟವಾಡಲು ಆರಂಭಿಸಿದ್ದೇವೆ. ಇದು ನಮಗೆ ಧನಾತ್ಮಕವಾಗಿದೆ. ಸೋಲಿನ ಸಂದರ್ಭದಲ್ಲಿ ಇಡೀ ತಂಡ ಡ್ರೆಸ್ಸಿಂಗ್ ರೂಮಿನಲ್ಲಿ ಒಂದಾಗಿತ್ತು. ನೀವು ನಿರಂತರವಾಗಿ ಪಂದ್ಯಗಳನ್ನು ಸೋತಾಗ, ನೈತಿಕತೆ ಕುಸಿಯುತ್ತದೆ. ಅದೇ ಅನುಭವ ನಮ್ಮಲ್ಲಾಗಿತ್ತು. ಆದರೆ ನಾವು ಅದನ್ನು ಒಪ್ಪಿಕೊಂಡು, ಉತ್ತಮ ಪುನರಾಗಮನವನ್ನು ಮಾಡಿದೆವು” ಎಂದಿದ್ದಾರೆ.

ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್ ಚರಿತ್ರೆಯಲ್ಲಿ ಒಂದೇ ಒಂದು ಬಾರಿಯೂ ಔಟ್ ಆಗಿಲ್ಲ ಈ ನಾಲ್ವರು ಆಟಗಾರರು! ಯಾರವರು ಗೊತ್ತಾ?

ದೆಹಲಿ ವಿರುದ್ಧ ಯಶ್ ದಯಾಳ್ ಅದ್ಭುತ ಬೌಲಿಂಗ್ ಮಾಡಿದ್ದು, ಪ್ರಮುಖ ಮೂವರು ಬ್ಯಾಟ್ಸ್ ಮನ್’ಗಳಿಗೆ ಪೆವಿಲಿಯನ್ ಹಾದಿ ತೋರಿಸಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News