ತಳ್ಳು ಗಾಡಿಯಲ್ಲಿ ಮಾವು ಮಾರುತ್ತಿದ್ದ ಅಪ್ಪ : ಕುಲ್ಫಿ ಮಾರುವ ಮೂಲಕ 400 ಕೋಟಿ ಮೌಲ್ಯದ ಕಂಪನಿ ಒಡೆಯನಾದ ಮಗ

Naturals Ice Cream Owner :ಏನನ್ನಾದರೂ ಸಾಧಿಸಲೇಬೇಕು ಎಂದು ಛಲ ಬಿಡದೆ ಮುನ್ನಡೆದು ಸಾಧಿಸಿ ತೋರಿಸುವವರು ಬಹಳ ವಿರಳ. ತಮ್ಮ ಕಷ್ಟದ ನಡುವೆಯೂ ಯಶಸ್ಸು ಸಾಧಿಸಿ ತೋರಿಸಿದವರು ಈ ವ್ಯಕ್ತಿ . 

Written by - Ranjitha R K | Last Updated : May 20, 2024, 09:09 AM IST
  • ಐಸ್ ಕ್ರೀಮ್ ಮ್ಯಾನ್'ಎಂದೇ ಖ್ಯಾತರಾಗಿದ್ದ ರಘುನಂದನ್ ಶ್ರೀನಿವಾಸ್ ಕಾಮತ್
  • ಇವರು ನ್ಯಾಚುರಲ್ಸ್ ಐಸ್ ಕ್ರೀಂ ಸಂಸ್ಥಾಪಕ
  • ಚಿಕ್ಕ ವಯಸ್ಸಿನಿಂದಲೂ ಶ್ರಮ ಜೀವಿ
ತಳ್ಳು ಗಾಡಿಯಲ್ಲಿ ಮಾವು ಮಾರುತ್ತಿದ್ದ ಅಪ್ಪ : ಕುಲ್ಫಿ ಮಾರುವ ಮೂಲಕ 400 ಕೋಟಿ  ಮೌಲ್ಯದ ಕಂಪನಿ ಒಡೆಯನಾದ ಮಗ  title=

Naturals Ice Cream Owner : ಐಸ್ ಕ್ರೀಮ್ ಮ್ಯಾನ್'ಎಂದೇ ಖ್ಯಾತರಾಗಿದ್ದ ನ್ಯಾಚುರಲ್ಸ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಶ್ರೀನಿವಾಸ್ ಕಾಮತ್ ನಿಧನರಾಗಿದ್ದಾರೆ.ರಘುನಂದನ್ ಶ್ರೀನಿವಾಸ್ ಕಾಮತ್ ತಮ್ಮದೇ ಆದ ಐಸ್ ಕ್ರೀಮ್ ಬ್ರಾಂಡ್ ಅನ್ನು ಪ್ರಾರಂಭಿಸಿದವರು.ಹಣ್ಣು ಮಾರುವವನ ಮಗ ಕೋಟಿಗಟ್ಟಲೆ ಕಂಪನಿಯ ಒಡೆಯನಾಗಬಹುದು ಎನ್ನುವುದನ್ನು ತಮ್ಮ ಸಾಧನೆಯ ಮೂಲಕ ಜಗತ್ತಿಗೆ ಸಾರಿ ಹೇಳಿದವರು. 

ರಘುನಂದನ್ ಶ್ರೀನಿವಾಸ್ ಕಾಮತ್ ಹೋರಾಟದ ಕಥೆ:  
ಏನನ್ನಾದರೂ ಸಾಧಿಸಲೇಬೇಕು ಎಂದು ಛಲ ಬಿಡದೆ ಮುನ್ನಡೆದು ಅದನ್ನು ಸಾಧಿಸಿ ತೋರಿಸುವವರು ಬಹಳ ವಿರಳ.ತಮ್ಮ ಕಷ್ಟದ ನಡುವೆಯೂ ಯಶಸ್ಸು ಸಾಧಿಸಿ ತೋರಿಸಿದವರು.ರಘುನಂದನ್ ಅವರ ತಂದೆ ಗಾಡಿಯಲ್ಲಿ ಮಾವಿನ ಹಣ್ಣುಗಳನ್ನು ಮಾರುತ್ತಿದ್ದರು.ಆದರೆ ಘುನಂದನ್ ತನ್ನದೇ ಆದ ಹಾದಿಯನ್ನು ಹಿಡಿಯುವ ಮೂಲಕ ತಮ್ಮ ಅದೃಷ್ದ ರೇಖೆಯನ್ನೇ ಬದಲಾಯಿಸಿಕೊಂಡರು. ಶ್ರಮದ ಆಧಾರದ ಮೇಲೆ 400 ಕೋಟಿ ರೂ.ಮೌಲ್ಯದ ಕಂಪನಿಯನ್ನು ತಲೆ ಎತ್ತಿ ನಿಲ್ಲಿಸಿದ್ದಾರೆ. 

ಇದನ್ನೂ ಓದಿ :2023-24 ಸಾಲಿನಲ್ಲಿ ರಾಜ್ಯದ ಜಿಎಸ್ ಟಿ ಸಂಗ್ರಹದಲ್ಲಿ ತೀವ್ರ ಕುಸಿತ! 

ರಘುನಂದನ್ ಶ್ರೀನಿವಾಸ ಕಾಮತ್ ಬಡ ಕುಟುಂಬದಲ್ಲಿ ಜನಿಸಿದರು.ಅವರ ತಂದೆ ಕರ್ನಾಟಕದ ಮಂಗಳೂರಿನ ಹಳ್ಳಿಯೊಂದರಲ್ಲಿ ಮಾವಿನ ಹಣ್ಣುಗಳನ್ನು ಮಾರುತ್ತಿದ್ದರು.6 ಮಂದಿ ಒಡಹುಟ್ಟಿದವರ ತುಂಬು  ಕುಟುಂಬ.ರಘುನಂದನ್ ಚಿಕ್ಕ ವಯಸ್ಸಿನಿಂದಲೇ ಕುಟುಂಬದ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದರು. 

ರೆಸ್ಟೋರೆಂಟ್‌ನಲ್ಲಿ ಕೆಲಸ :
ರಘುನಂದನ್ ಚಿಕ್ಕವಯಸ್ಸಿನಲ್ಲೇ ತಂದೆಯೊಂದಿಗೆ ಗಾಡಿಯಲ್ಲಿ ಕೆಲಸ ಆರಂಭಿಸಿದರು. ಹಣ್ಣುಗಳ ಸರಿಯಾದ ಆಯ್ಕೆಯನ್ನು ಅವರು  ಕಲಿತದ್ದು ಅಲ್ಲಿಂದಲೇ. ಹಣ್ಣನ್ನು ಬಹುಕಾಲ ಸಂರಕ್ಷಿಸುವುದು ಹೇಗೆ ಎಂಬ ಉಪಾಯವನ್ನೂ ಕೂಡಾ ಅವರು ತಮ್ಮ ತಂದೆಯಿಂದ ಪಡೆದುಕೊಂಡರು.ನಂತರ ಏನನ್ನಾದರೂ ಸಾಧಿಸಲೇಬೇಕು ಎನ್ನುವ ಹಟಕ್ಕೆ ಬಿದ್ದ ರಘುನಂದನ್ ಮಂಗಳೂರು ತೊರೆದು ಮುಂಬೈ ಹಾದಿ ಹಿಡಿದರು. 
14 ನೇ ವಯಸ್ಸಿನಲ್ಲಿ ಮುಂಬೈ ತಲುಪಿದ ರಘುನಂದನ್ ಅಲ್ಲಿ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು.ಐಸ್ ಕ್ರೀಮ್ ಮಾಡಲು ಕಲಿತರು. ಸ್ವಂತ ಉದ್ಯಮ ಆರಂಭಿಸುವ ಮಹದಾಸೆಯಿಂದ ಉಳಿತಾಯದ ಹಣ ಮತ್ತು 4 ಸಿಬ್ಬಂದಿಯೊಂದಿಗೆ,1984 ರಲ್ಲಿ ಸಣ್ಣ ಐಸ್ ಕ್ರೀಮ್ ಅಂಗಡಿ ಪ್ರಾರಂಭಿಸಿದರು.

ಇದನ್ನೂ ಓದಿ :   Gold And Silver Price: ಭಾರತದಲ್ಲಿ ಚಿನ್ನದ ದರ ಇಳಿದ: ಬೆಳ್ಳಿಯ ಬೆಲೆ ಕೊಂಚ ಹೆಚ್ಚಳ!!

ನ್ಯಾಚುರಲ್ಸ್ ಐಸ್ ಕ್ರೀಮ್ ಬಿಡುಗಡೆ :
ರಘುನಂದನ್ ಮುಂಬೈನ ಜುಹುವಿನಲ್ಲಿ ಮೊದಲ ಅಂಗಡಿ ತೆರೆದರು. ಆರಂಭದಲ್ಲಿ ಕೇವಲ ನಾಲ್ಕು ಉದ್ಯೋಗಿಗಳಿದ್ದರು.10 ಫ್ಲೇವರ್ ಗಳ ಐಸ್ ಕ್ರೀಂ ಮಾರಾಟ ಆರಂಭಿಸಿದರು.ಐಸ್ ಕ್ರೀಂ ಪಾರ್ಲರ್ ಗೆ ಹೆಚ್ಚು ಜನ ಬಾರದಿರುವುದನ್ನು ಗಮನಿಸಿದ ಅವರು ತನ್ನ ಅಂಗಡಿಗೆ ಜನರನ್ನು ಆಕರ್ಷಿಸಲು, ಐಸ್ ಕ್ರೀಮ್ ಜೊತೆಗೆ ಮುಂಬೈನ ನೆಚ್ಚಿನ ಪಾವ್ ಭಾಜಿ, ವಡಾ ಪಾವ್ ಮಾರಾಟ ಮಾಡಲು ಪ್ರಾರಂಭಿಸಿದರು.ರಘುನಂದನ್ ಮಸಾಲೆಯುಕ್ತ ಪಾವ್ ಬಾಜಿ ಮಾಡುತ್ತಿದ್ದರು.ಪಾವ್ ಬಾಜಿ ತಿಂದ ನಂತರ ತಣ್ಣನೆಯ ಐಸ್ ಕ್ರೀಂ ಅನ್ನು ಜನ ತಿನ್ನುತ್ತಾರೆ ಎನುವುದು ಕಾಮತ್ ಅವರಿಗೂ ಗೊತ್ತಿತ್ತು. ಹಣ್ಣುಗಳು, ಹಾಲು ಮತ್ತು ಸಕ್ಕರೆಯಿಂದ ನೈಸರ್ಗಿಕವಾಗಿ ತಯಾರಿಸಿದ ಐಸ್ ಕ್ರೀಮ್ ಅನ್ನು ಜನರು ಇಷ್ಟಪಡಲಾರಂಭಿಸಿದರು.ಕ್ರಮೇಣ ಅವರ ಪಾರ್ಲರ್ ನಲ್ಲಿ ಜನಸಂದಣಿ  ಹೆಚ್ಚಾಗತೊಡಗಿತು.  

ಮೊದಲ ವರ್ಷ 5 ಲಕ್ಷ ವಹಿವಾಟು :
ಮುಂಬೈನ ಜುಹು ಪ್ರದೇಶದಲ್ಲಿ 200 ಚದರ ಅಡಿ ವಿಸ್ತೀರ್ಣದ ತಮ್ಮ ಸಣ್ಣ ಅಂಗಡಿಯಿಂದ ಮೊದಲ ವರ್ಷದಲ್ಲಿ 5 ಲಕ್ಷ ರೂಪಾಯಿ ವ್ಯವಹಾರ ಮಾಡಿದರು. ಕ್ರಮೇಣ ಐಸ್ ಕ್ರೀಮ್ ಪಾರ್ಲರ್‌ನ ಹೊರಗೆ ಜನ ಸಾಲುಗಟ್ಟಿ ನಿಲ್ಲುವ ದಿನವೂ ಬಂದೇ ಬಿಟ್ಟಿತು. ಈಗ ಅವರು ಐಸ್ ಕ್ರೀಮ್ ಮಾರಲು ಪಾವ್ ಬಾಜಿ ಆಶ್ರಯಿಸಬೇಕಾಗಿರಲಿಲ್ಲ. ಐಸ್ ಕ್ರೀಂನ ಸಂಪೂರ್ಣ ಬ್ರಾಂಡ್ ಅನ್ನು ರಚಿಸಲು ಪಾವ್ ಬಾಜಿ ಮಾರಾಟವನ್ನು ನಿಲ್ಲಿಸಿದರು. 1994 ರಲ್ಲಿ ಅವರು ಇನ್ನೂ 5 ಮಳಿಗೆಗಳನ್ನು ತೆರೆದರು.ತನ್ನ ಐಸ್ ಕ್ರೀಂನಲ್ಲಿ ಯಾವುದೇ ರಾಸಾಯನಿಕಗಳನ್ನು ಸೇರಿಸದಿರಲು ನಿರ್ಧರಿಸಿದನು. ಕೆಲವೇ ವರ್ಷಗಳಲ್ಲಿ, ಅವರು ದೇಶಾದ್ಯಂತ 135 ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆದರು.ಅವರ ಶ್ರಮದಿಂದಾಗಿ ನ್ಯಾಚುರಲ್ಸ್ ಐಸ್ ಕ್ರೀಮ್ ವಹಿವಾಟು 400 ಕೋಟಿ ರೂ.ಗೆ ತಲುಪಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
     

Trending News