ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಬೆಳ್ಳಂಬೆಳಿಗ್ಗೆ ಗುಂಡಿನ ಸದ್ದು: ಬಂಧನದ ವೇಳೆ ಆರೋಪಿ ಕಾಲಿಗೆ ಗುಂಡೇಟು

Crime News: ಹಣದ ವಿಚಾರವಾಗಿ ಸ್ನೇಹಿತರಲ್ಲೇ ಜಗಳವಾಗಿ ಕೊನೆಗೆ ಮಸಣ ಸೇರಿದ ಹೇಮಂತಾಗೌಡನ  ಪ್ರಕರಣ ಬೆನ್ನಟ್ಟಿದ್ದ ಪೊಲೀಸರು A1ಆರೋಪಿಯಾದ ನರಸಿಂಹಮೂರ್ತಿ ಅಲಿಯಾಸ್ ಮಿಟ್ಟೆನನ್ನ ಕಳೆದ ಮೂರು ದಿನಗಳ ಹಿಂದೆಯೇ ಬಂದಿಸುವಲ್ಲಿ ಯಶಸ್ವಿಯಾಗಿದ್ದರು. 

Written by - Yashaswini V | Last Updated : May 17, 2024, 02:29 PM IST
  • ಇಂದು ಬೆಳಗ್ಗೆ 6-30ರ ಸುಮಾರಿಗೆ ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಲಿ ಶೂಟೌಟ್
  • ಹೇಮಂತ್ ಗೌಡ ಕೊಲೆ ಪ್ರಕರಣದ ಎರಡನೇ ಆರೋಪಿ ಶ್ರೀನಿವಾಸ್ @ ಚಿಕ್ಕಮಿಟ್ಟೆ ಕಾಲಿಗೆ ಗುಂಡು
  • ಈಗಾಗಲೇ ಮೂರು ದಿನಗಳ ಹಿಂದೆ ನರಸಿಂಹಮೂರ್ತಿ @ ಮಿಟ್ಟೆ ಪೊಲೀಸರಿಗೆ ಶರಣಾಗಿದ್ದಾನೆ
ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಬೆಳ್ಳಂಬೆಳಿಗ್ಗೆ ಗುಂಡಿನ ಸದ್ದು: ಬಂಧನದ ವೇಳೆ ಆರೋಪಿ ಕಾಲಿಗೆ ಗುಂಡೇಟು title=

Crime News: ಮೇ 11 ಆ ದಿನ ದೊಡ್ಡಬಳ್ಳಾಪುರ ನಗರ ಅಕ್ಷರಹ ಬೆಚ್ಚಿ ಬಿದ್ದಿತ್ತು. ಲಾಂಗ್ ಮಚ್ಚುಗಳು ತನ್ನ ಅಸಲಿ ವರಸೆ ತೋರಿಸಿದ್ದವು. ಕೆಂಪು ನೆತ್ತರನ್ನ ನೋಡಿ ದೊಡ್ಡಬಳ್ಳಾಪುರದ ನಗರ ಜನ ಒಂದು ಕ್ಷಣ ಧಂಗಾಗಿಹೋಗಿದ್ದರು.

ಹಣದ ವಿಚಾರವಾಗಿ ಸ್ನೇಹಿತರಲ್ಲೇ ಜಗಳವಾಗಿ ಕೊನೆಗೆ ಮಸಣ ಸೇರಿದ ಹೇಮಂತಾಗೌಡನ  ಪ್ರಕರಣ ಬೆನ್ನಟ್ಟಿದ್ದ ಪೊಲೀಸರು A1ಆರೋಪಿಯಾದ ನರಸಿಂಹಮೂರ್ತಿ ಅಲಿಯಾಸ್ ಮಿಟ್ಟೆನನ್ನ ಕಳೆದ ಮೂರು ದಿನಗಳ ಹಿಂದೆಯೇ ಬಂದಿಸುವಲ್ಲಿ ಯಶಸ್ವಿಯಾಗಿದ್ದರು. 

ಇದನ್ನೂ ಓದಿ- ಸಣ್ಣ ವಿಚಾರಕ್ಕೆ ಮನಸ್ಥಾಪ: ಪ್ರೀತಿಸಿ ಮದುವೆಯಾಗಿದ್ದ ನವ ಜೋಡಿ ನೇಣಿಗೆ ಶರಣು

ಇನ್ನು A2 ಆರೋಪಿಯಾದ ಶ್ರೀನಿವಾಸ್ ಅಲಿಯಾಸ್ ಚಿಕ್ಕಮಿಟ್ಟೆ ಮಾತ್ರ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ತಲೆಮರಿಸಿಕೊಂಡು ಓಡಾಡುತ್ತಿದ್ದ. ಆದರೆ, ಶ್ರೀನಿವಾಸ್ ಅಲಿಯಾಸ್ ಚಿಕ್ಕ ಮಿಟ್ಟೆ ಅಡಗಿದ್ದ ಜಾಗದ ಬಗ್ಗೆ ಖಚಿತ ಮಾಹಿತಿ ಕಲೆಹಾಕಿದ ಪೊಲೀಸರು ಬೆಳ್ಳಂಬೆಳಗೆ ರಾಜನಗುಂಟೆ ಸಮೀಪದ ಶ್ರೀರಾಮನಹಳ್ಳಿಯ ಬಳಿ ಆತನನ್ನು ಬಂಧಿಸಿದ್ದಾರೆ. 

ಇದನ್ನೂ ಓದಿ- ಯುವತಿ ಹತ್ಯೆ ಕೇಸ್‌: ಅಂಜಲಿ ಹಂತಕ ಪೊಲೀಸ್ ವಶಕ್ಕೆ

ಆದರೆ, ಪೊಲೀಸರಿಗೆ ಶರಣಾಗದೆ ಅಲ್ಲೂ ಕೂಡ ತನ್ನ ಅಸಲಿ ವರಸೆ ಶುರುಮಾಡಿ ಕಾನ್ಸ್ಟೇಬಲ್ ಚಂದ್ರು ಮೇಲೆ ಕಲ್ಲು ಎಸೆದು, ಚಾಕು ತೋರಿಸಿ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಇನ್ಸ್ಪೆಕ್ಟರ್ ಸಾದಿಕ್ ಪಾಷಾ   ಆರೋಪಿ ಶ್ರೀನಿವಾಸ್ ಅಲಿಯಾಸ್ ಚಿಕ್ಕಮಿಟ್ಟೆ  ಕಾಲಿಗೆ ಗುಂಡು ಹಾರಿಸಿ ಆತನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News