Hondisi Bareyiri Movie: ಉಚಿತವಾಗಿಯೇ ನೋಡಿ ಹೊಂದಿಸಿ ಬರೆಯಿರಿ ಸಿನಿಮಾ

Hondisi Bareyiri Movie On Youtube : ಹೊಂದಿಸಿ ಬರೆಯಿರಿ ಸಿನಿಮಾಗೆ ಹಾಕಿದ್ದ ಹಣ ವಾಪಸ್ ಆಗದಿದ್ದರೂ ಚಿತ್ರತಂಡ ಇಂತಹ ಗಟ್ಟಿ ನಿರ್ಧಾರಕ್ಕೆ ಬಂದಿದೆ. 

Written by - YASHODHA POOJARI | Last Updated : May 20, 2024, 01:46 PM IST
  • ಹೊಂದಿಸಿ ಬರೆಯಿರಿ ಸಿನಿಮಾ
  • ಉಚಿತವಾಗಿಯೇ ನೋಡಿ ಹೊಂದಿಸಿ ಬರೆಯಿರಿ ಸಿನಿಮಾ
  • ಚಿತ್ರ ಇಷ್ಟವಾದರೆ ಹಣ ನೀಡಿ
Hondisi Bareyiri Movie: ಉಚಿತವಾಗಿಯೇ ನೋಡಿ ಹೊಂದಿಸಿ ಬರೆಯಿರಿ ಸಿನಿಮಾ title=

Hondisi Bareyiri: ರಾಮೇನಹಳ್ಳಿ ಜಗನ್ನಾಥ ನಿರ್ದೇಶನದ ಹಾಗೂ ಸಂಡೇ ಸಿನಿಮಾಸ್ ನಿರ್ಮಾಣ ಸಂಸ್ಥೆಯ ಚೊಚ್ಚಲ ಸಿನಿಮಾ  "ಹೊಂದಿಸಿ ಬರೆಯಿರಿ” ಯೂಟ್ಯೂಬ್ ‌ನಲ್ಲಿ ಬಿಡುಗಡೆಯಾಗಿದೆ. ಅಮೇಜಾನ್ ಪ್ರೈಮ್ ನಲ್ಲಿ ಇನ್ನೂ ಸ್ಟ್ರೀಮ್ ಆಗುತ್ತಿದ್ದರೂ, ಇದು ಭಾರತ, ಯುಎಸ್ ಎ ಮತ್ತು ಯುಕೆ ಹೊರತಾಗಿ ಬೇರೆ ದೇಶಗಳಲ್ಲಿ ಸ್ಟ್ರೀಮ್ ಆಗುತ್ತಿಲ್ಲ. ಹಾಗಾಗಿ ಉಳಿದ ಎಲ್ಲ ದೇಶಗಳ ಕನ್ನಡಿಗರಿಗೆ ತಲುಪಬೇಕು. ಥಿಯೇಟರ್ ನಲ್ಲಿ ಚಿತ್ರ ನೋಡಿರದ ಹಾಗೂ ಒಟಿಟಿ ಚಂದಾದಾರರ ಆಗದ ಎಲ್ಲರಿಗೂ  ಚಿತ್ರ  ತಲುಪಲಿ ಎನ್ನುವ ಉದ್ದೇಶ ಚಿತ್ರತಂಡ ಈ ನಿರ್ಧಾರ ಮಾಡಿದೆ.

ಹೊಂದಿಸಿ ಬರೆಯಿರಿ ಸಿನಿಮಾಗೆ ಹಾಕಿದ್ದ ಹಣ ವಾಪಸ್ ಆಗದಿದ್ದರೂ ಚಿತ್ರತಂಡ ಇಂತಹ ಗಟ್ಟಿ ನಿರ್ಧಾರಕ್ಕೆ ಬಂದಿದೆ. ಹಾಗಂತ ಯೂಟ್ಯೂಬ್ ನಲ್ಲಿ ರೆಂಟಲ್ ಮೊಡೆಲ್  ಆಯ್ಕೆ ಮಾಡಿ ಒಂದಿಷ್ಟು ಹಣ ನಿಗದಿ ಪಡಿಸಿ ನೋಡಿ ಎಂದು ಕೇಳುವುದಕ್ಕಿಂತ, ಉಚಿತವಾಗಿ ಯೂಟ್ಯೂಬ್ ನಲ್ಲಿ  ಎಲ್ಲರೂ ಸಿನಿಮಾ ನೋಡಲಿ, ಅವರಿಗೆ ಸಿನಿಮಾ ಇಷ್ಟವಾದರೆ ಮಾತ್ರ ತೋಚಿದಷ್ಟು ಹಣ ಕೊಡಲಿ ಎಂಬ ನಿರ್ಧಾರ ಮಾಡಿದೆ ಚಿತ್ರತಂಡ. ಹೀಗಾಗಿ ನಿರ್ಮಾಣ ಸಂಸ್ಥೆ “Sunday cinemas” ನ QR CODE , UPI ID  ಹಾಗೂ ಬ್ಯಾಂಕ್ Details ಅನ್ನು ಲಗತ್ತಿಸಿಲಾಗಿದೆ ಜೊತೆಗೆ You tube Description ನಲ್ಲು ಇದರ ಬಗ್ಗೆ ಮಾಹಿತಿ ಇದೆ. 

ಇದನ್ನೂ ಓದಿ: Janhvi Kapoor: 13 ವರ್ಷದವಳಿದ್ದಾಗಲೇ ಲೈಂಗಿಕ ಕಿರುಕುಳ ಅನುಭವಿಸಿದ್ದೇನೆ ಎಂದ ನಟಿ ಜಾನ್ವಿ ಕಪೂರ್ ! 

ನಮ್ಮ “ಹೊಂದಿಸಿ ಬರೆಯಿರಿ”  ಚಿತ್ರದ you tube link ನ್ನು ನಿಮ್ಮ social media ದಲ್ಲಿ, whats app Status ನಲ್ಲಿ  share ಮಾಡುವ ಮೂಲಕ  ಎಲ್ಲರಿಗೂ ತಲುಪಿಸಿ. ನಮ್ಮ ಸಂಸ್ಥೆಯ ಮುಂದಿನ ಸಿನಿಮಾಗಳಿಗೆ ಪ್ರೋತ್ಸಾಹಿಸಿ, ಈಗಾಗಲೇ ಪ್ರೀ ಪ್ರೊಡಕ್ಷನ್ ಹಂತದಲ್ಲಿರುವ ನಮ್ಮ ಮುಂದಿನ ಚಿತ್ರದ ವಿವರಣೆಯನ್ನು  ಆದಷ್ಟು ಬೇಗ  ಹಂಚಿಕೊಳ್ಳುತ್ತೇವೆ ಎಂದಿದ್ದಾರೆ ರಾಮೇನಹಳ್ಳಿ ಜಗನ್ನಾಥ.

ರಾಮೇನಹಳ್ಳಿ ಜಗನ್ನಾಥ ನಿರ್ದೇಶನದ ಜೊತೆಗೆ ತಮ್ಮ ಸ್ನೇಹಿತರ ಜೊತೆಗೂಡಿ ಸಂಡೇ ಸಿನಿಮಸ್ ಬ್ಯಾನರ್ ನಡಿ ನಿರ್ಮಾಣ ಮಾಡಿರುವ ಹೊಂದಿಸಿ ಬರೆಯಿರಿ ಸಿನಿಮಾದಲ್ಲಿ ಪ್ರವೀಣ್ ತೇಜ್, ನವೀನ್ ಶಂಕರ್, ಶ್ರೀ ಮಹದೇವ್, ಅನಿರುದ್ದ್ ಆಚಾರ್ಯ, ಭಾವನಾ ರಾವ್, ಐಶಾನಿ ಶೆಟ್ಟಿ, ಸಂಯುಕ್ತ ಹೊರ್ನಾಡ್, ಅರ್ಚನಾ ಜೋಯಿಸ್ ಹಲವರು ನಟಿಸಿದ್ದಾರೆ.

ಇದನ್ನೂ ಓದಿ: South Actress: 64ನೇ ವಯಸ್ಸಿನಲ್ಲಿ ಶ್ರೀಮಂತ ಉದ್ಯಮಿ ಜೊತೆ 3ನೇ ಮದುವೆಯಾದ ಖ್ಯಾತ ನಟಿ ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News