ಈ ಸಮಯದಲ್ಲಿ ಎಳನೀರು ಕುಡಿದರೆ ಬೇಸಿಗೆಯಲ್ಲಿ ದೇಹದಲ್ಲಿ ನೀರಿನ ಕೊರತೆ ಉಂಟಾಗುವುದೇ ಇಲ್ಲ

Right Time To Drink Coconut Water :ಎಳ ನೀರನ್ನು ಯಾವ ಸಮಯದಲ್ಲಿ ಕುಡಿಯುವುದು ಹೆಚ್ಚು ಪ್ರಯೋಜನಕಾರಿ ಎನ್ನುವುದನ್ನು ಅರಿತುಕೊಂಡು ಸೇವಿಸುವುದು ಬಹಳ ಮುಖ್ಯವಾಗಿರುತ್ತದೆ.   

Written by - Ranjitha R K | Last Updated : Apr 30, 2024, 09:19 AM IST
  • ಎಳ ನೀರನ್ನು ಮ್ಯಾಜಿಕ್ ಡ್ರಿಂಕ್ ಎಂದು ಕರೆಯಲಾಗುತ್ತದೆ.
  • ಇದು ನಮಗೆ ನೀಡುವ ಆರೋಗ್ಯ ಲಾಭ ಒಂದೆರಡಲ್ಲ.
  • ಎಳ ನೀರನ್ನು ಯಾವ ಸಮಯದಲ್ಲಿ ಕುಡಿಯುವುದು ಲಾಭಕಾರಿ ?
ಈ ಸಮಯದಲ್ಲಿ ಎಳನೀರು ಕುಡಿದರೆ ಬೇಸಿಗೆಯಲ್ಲಿ ದೇಹದಲ್ಲಿ ನೀರಿನ ಕೊರತೆ ಉಂಟಾಗುವುದೇ ಇಲ್ಲ   title=

Right Time To Drink Coconut Water :ಎಳ ನೀರನ್ನು ಮ್ಯಾಜಿಕ್ ಡ್ರಿಂಕ್ ಎಂದು ಕರೆಯಲಾಗುತ್ತದೆ.ಇದು ನಮಗೆ ನೀಡುವ ಆರೋಗ್ಯ ಲಾಭ ಒಂದೆರಡಲ್ಲ.  ಬೇಸಿಗೆಯ ಸುಡುವ ಶಾಖದಿಂದ ದೇಹವನ್ನು ಸುರಕ್ಷಿತವಾಗಿರಿಸುವುದು ಮಾತ್ರವಲ್ಲದೆ ದೇಹದಲ್ಲಿ ನೀರಿನ ಕೊರತೆಯಾಗದಂತೆ ಇದು ನೋಡಿಕೊಳ್ಳುತ್ತದೆ.   ಎಳ ನೀರು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಪಾನೀಯವಾಗಿದೆ.ಇದು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.ದೇಹದಲ್ಲಿನ ನಿರ್ಜಲೀಕರಣವನ್ನು ತಪ್ಪಿಸಲು ಬೇಸಿಗೆಯಲ್ಲಿ ಹೆಚ್ಚಾಗಿ ಎಳ ನೀರನ್ನು ಸೇವಿಸಲಾಗುತ್ತದೆ.ಆದರೆ ಎಳ ನೀರನ್ನು ಯಾವ ಸಮಯದಲ್ಲಿ ಕುಡಿಯುವುದು ಹೆಚ್ಚು ಪ್ರಯೋಜನಕಾರಿ ಎನ್ನುವುದನ್ನು ಅರಿತುಕೊಂಡು ಸೇವಿಸುವುದು ಬಹಳ ಮುಖ್ಯವಾಗಿರುತ್ತದೆ. 

ಎಳ ನೀರು ಕುಡಿಯಲು ಸರಿಯಾದ ಸಮಯ : 
ಎಳ ನೀರನ್ನು ಕುಡಿಯಲು ಇಂಥದ್ದೇ ಸಮಯ ಎಂದೇನಿಲ್ಲ.ಅದನ್ನು ಯಾವುದೇ ಸಮಯದಲ್ಲಿ ಬೇಕಾದರೂ ಕುಡಿಯಬಹುದು.ಆದರೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮತ್ತು ಉಪಹಾರ ಮತ್ತು ಭೋಜನದ ಮಧ್ಯದ ಸಮಯದಲ್ಲಿ  ಕುಡಿಯುವುದು ಹೆಚ್ಚು ಉತ್ತಮ ಎಂದು ಪರಿಗಣಿಸಲಾಗಿದೆ.ಎಳ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ, ಅದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.ಚಯಾಪಚಯವನ್ನು ಹೆಚ್ಚಿಸುತ್ತದೆ.ಇದಲ್ಲದೆ,ನಿರ್ಜಲೀಕರಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳಿಂದಲೂ ಪರಿಹಾರ ನೀಡುತ್ತದೆ.ಬೆಳಗ್ಗೆ  ಎಳ ನೀರು ಕುಡಿದರೆ ಎದೆಯುರಿ,ಆಸಿಡಿಟಿಯಿಂದಲೂ ಮುಕ್ತಿ ಸಿಗುತ್ತದೆ. 

ಇದನ್ನೂ ಓದಿ : ಜೀರಿಗೆ ನೀರಿಗೆ ಎರಡು ಚಿಟಕಿ ಈ ಪುಡಿ ಬೆರೆಸಿ ಕುಡಿದರೆ ಯೂರಿಕ್ ಆಸಿಡ್ ಕರಗುವುದು!ಜೊತೆಗೆ ಮೂತ್ರಪಿಂಡದಿಂದ ಜಾರಿ ಬರುವುದು ಕಿಡ್ನಿ ಸ್ಟೋನ್ !

ವರ್ಕ್ ಔಟ್ ಮಾಡುವ ಮೊದಲು ಮತ್ತು ನಂತರ ಎಳ ನೀರನ್ನು ಕುಡಿಯಬಹುದು.ಇದು ಒಂದು ಜಲಸಂಚಯನಕಾರಿ ಪಾನೀಯವಾಗಿದ್ದು, ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. 

ಮಧ್ಯಾಹ್ನ ಎಳ ನೀರು ಕುಡಿದರೆ ಜೀರ್ಣಕ್ರಿಯೆ ಆರೋಗ್ಯವಾಗಿರಲು ಸಹಕಾರಿಯಾಗುತ್ತದೆ.ಇದು ಜೀರ್ಣಕಾರಿ ಸಮಸ್ಯೆಗಳನ್ನು ದೂರವಿಡುವುದರೊಂದಿಗೆ ಹೊಟ್ಟೆ ಉಬ್ಬುವಿಕೆಯಂಥಹ ಸಮಸ್ಯೆಗಳಿಂದಲೂ ಮುಕ್ತಿ ನೀಡುತ್ತದೆ.  

ಇದನ್ನೂ ಓದಿ : Egg Freezing ಗೆ ಮುಂದಾದ ಬಾಲೀವುಡ್ ನಟಿ Mrunal Thakur, ಏನಿದು ಅಂಡಾಣು ಫ್ರೀಜಿಂಗ್? ಹೇಗೆ ಮಾಡುತ್ತಾರೆ?

ರಾತ್ರಿ ಮಲಗುವ ಮುನ್ನ ತೆಂಗಿನ ನೀರನ್ನು ಕುಡಿದರೆ,ಇದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.ಇದು ಆತಂಕವನ್ನು ಕಡಿಮೆ ಮಾಡುವಲ್ಲಿ ಪರಿಣಾಮ ಬೀರುತ್ತದೆ.ಮಲಗುವ ಮುನ್ನ ಎಳ ನೀರು ಕುಡಿಯುವುದರಿಂದ ಒತ್ತಡ ನಿವಾರಣೆಯಾಗುತ್ತದೆ.ಅಲ್ಲದೆ, ಇದು ದೇಹದಿಂದ ಕೊಳಕು ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News