ಪ್ಲೇಆಫ್ ತಲುಪಿದ ಹೈದರಾಬಾದ್ ತಂಡ.. ಖುಷಿಯಲ್ಲಿ ಸನ್‌ರೈಸರ್ಸ್‌ ಮಾಜಿ ನಾಯಕನ್ನು ಅಪ್ಪಿಕೊಂಡ ಕಾವ್ಯಾ ಮಾರನ್!!‌

Kavya Maran Viral video: ಸನ್‌ರೈಸರ್ಸ್ ಹೈದರಾಬಾದ್ ಪಂದ್ಯವನ್ನು ರದ್ದುಗೊಳಿಸಿದ ನಂತರ ಸಾಮಾಜಿಕ ಮಾದ್ಯಮದಲ್ಲಿ ಕಾವ್ಯಾ ಮಾರನ್‌ ಅವರ ವೀಡಿಯೊವೊಂದನ್ನು ಶೇರ್‌ ಮಾಡಲಾಗಿದೆ.   

Written by - Savita M B | Last Updated : May 17, 2024, 04:44 PM IST
  • ಸನ್‌ರೈಸರ್ಸ್ ಹೈದರಾಬಾದ್ ಸಾಮಾಜಿಕ ಮಾಧ್ಯಮದಲ್ಲಿ ಕ್ಯೂಟ್ ವೀಡಿಯೊವೊಂದನ್ನು ಹಂಚಿಕೊಂಡಿದೆ.
  • ಐಪಿಎಲ್ 2024 ರ 66 ನೇ ಪಂದ್ಯವು ಹೈದರಾಬಾದ್ ಮತ್ತು ಗುಜರಾತ್ ನಡುವೆ ನಡೆಯಬೇಕಿತ್ತು.
ಪ್ಲೇಆಫ್ ತಲುಪಿದ ಹೈದರಾಬಾದ್ ತಂಡ.. ಖುಷಿಯಲ್ಲಿ ಸನ್‌ರೈಸರ್ಸ್‌ ಮಾಜಿ ನಾಯಕನ್ನು ಅಪ್ಪಿಕೊಂಡ ಕಾವ್ಯಾ ಮಾರನ್!!‌  title=

IPL 2024 SRH vs GT: ಸನ್‌ರೈಸರ್ಸ್ ಹೈದರಾಬಾದ್ ಸಾಮಾಜಿಕ ಮಾಧ್ಯಮದಲ್ಲಿ ಕ್ಯೂಟ್ ವೀಡಿಯೊವೊಂದನ್ನು ಹಂಚಿಕೊಂಡಿದೆ. ಇದರಲ್ಲಿ, ತಂಡದ ಮಾಲೀಕ ಕಾವ್ಯಾ ಮಾರನ್ ಗುಜರಾತ್ ಟೈಟಾನ್ಸ್ ಆಟಗಾರ ಕೇನ್ ವಿಲಿಯಮ್ಸನ್ ಅವರನ್ನು ತಬ್ಬಿಕೊಂಡಿದ್ದು ಕಂಡು ಬಂದಿದೆ..

ಐಪಿಎಲ್ 2024 ರ 66 ನೇ ಪಂದ್ಯವು ಹೈದರಾಬಾದ್ ಮತ್ತು ಗುಜರಾತ್ ನಡುವೆ ನಡೆಯಬೇಕಿತ್ತು. ಆದರೆ ಈ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಪಂದ್ಯ ರದ್ದಾದ ಬಳಿಕ ಉಭಯ ತಂಡಗಳಿಗೂ ತಲಾ 1 ಅಂಕ ನೀಡಲಾಯಿತು. ಈ ಅಂಕದೊಂದಿಗೆ ಹೈದರಾಬಾದ್ ಪ್ಲೇ ಆಫ್‌ಗೆ ಅರ್ಹತೆ ಪಡೆಯಿತು.

ಇದನ್ನೂ ಓದಿ-RCB-CSK ಪಂದ್ಯ ರದ್ದಾದರೆ ಪ್ಲೇಆಫ್‌ನಲ್ಲಿ ಯಾರು ಸ್ಥಾನ ಪಡೆಯುತ್ತಾರೆ?

ವಾಸ್ತವವಾಗಿ ಹೈದರಾಬಾದ್ ತಂಡ X ನಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ಕಾವ್ಯಾ ವಿಲಿಯಮ್ಸನ್‌ನನ್ನು ತಬ್ಬಿಕೊಂಡಿದ್ದಾರೆ.. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. ಇದು 1.5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, 11 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. 

ಸದ್ಯ ಹೈದರಾಬಾದ್ ಪ್ಲೇ ಆಫ್‌ಗೆ ಅರ್ಹತೆ ಪಡೆದಿದೆ. ಈ ತಂಡವು ಐಪಿಎಲ್ 2024 ರಲ್ಲಿ ಇದುವರೆಗೆ 13 ಪಂದ್ಯಗಳನ್ನು ಆಡಿದೆ. ಅದರಲ್ಲಿ 7 ಪಂದ್ಯ ಗೆದ್ದು 5ರಲ್ಲಿ ಸೋಲು ಕಂಡಿದ್ದು, ಒಂದು ಪಂದ್ಯ ರದ್ದಾಗಿದೆ. ಇದರೊಂದಿಗೆ ತಂಡವು 15 ಅಂಕಗಳನ್ನು ಹೊಂದಿದೆ.

ಇದನ್ನೂ ಓದಿ-ನಡೆಯುತ್ತಿದೆ ಟೀಂ ಇಂಡಿಯಾದ ಮುಂದಿನ ಕೋಚ್ ಹುಡುಕಾಟ!ಬಿಸಿಸಿಐನ ಈ ಷರತ್ತುಗಳನ್ನು ಈಡೇರಿಸುವವನಿಗೆ ಪಟ್ಟ!

ಹೈದರಾಬಾದ್‌ಗಿಂತ ಮೊದಲು ಇನ್ನೂ ಎರಡು ತಂಡಗಳು ಪ್ಲೇ ಆಫ್‌ಗೆ ತಲುಪಿವೆ. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಂಬರ್ 1 ಮತ್ತು ನಂಬರ್ 2 ಸ್ಥಾನವನ್ನು ಆಕ್ರಮಿಸಿಕೊಂಡಿವೆ.

ಪ್ಲೇಆಫ್ ತಲುಪುವ ನಾಲ್ಕನೇ ತಂಡ ಯಾವುದೆಂದು ತಿಳಿಯಲು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ.. ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯದ ನಂತರ ನಾಲ್ಕನೇ ತಂಡವನ್ನು ನಿರ್ಧರಿಸಲಾಗುವುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=O-hDphMYFMg

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News