Mumbai Indians : ಮುಂಬೈ ಟೀಂಗೆ ಎಂಟ್ರಿ ನೀಡಲಿದ್ದಾನೆ ಮಾರಣಾಂತಿಕ ಬೌಲರ್‌! 

ಮುಂಬೈ ಇಂಡಿಯನ್ಸ್ ಇನ್ನೂ ಐಪಿಎಲ್ 2022 ರಲ್ಲಿ ತನ್ನ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಈಗ ಅನುಭವಿ ವೇಗದ ಬೌಲರ್ ಮುಂಬೈ ಇಂಡಿಯನ್ಸ್ ಸೇರಬಹುದು.

Written by - Channabasava A Kashinakunti | Last Updated : Apr 20, 2022, 05:56 PM IST
  • ತಂಡಕ್ಕೆ ಎಂಟ್ರಿ ನೀಡಲಿದ್ದಾನೆ ಈ ಬೌಲರ್
  • ಐಪಿಎಲ್‌ನಲ್ಲಿ ಶಕ್ತಿ ಪ್ರದರ್ಶನ ಮಾಡುವರೆ ಧವಳ್
  • ಕುದ್ದು ಒತ್ತಾಯಿಸಿದ್ದಾರೆ ರೋಹಿತ್ ಶರ್ಮಾ
Mumbai Indians : ಮುಂಬೈ ಟೀಂಗೆ ಎಂಟ್ರಿ ನೀಡಲಿದ್ದಾನೆ ಮಾರಣಾಂತಿಕ ಬೌಲರ್‌!  title=

ಮುಂಬೈ : ಮುಂಬೈ ಇಂಡಿಯನ್ಸ್ ಐಪಿಎಲ್ 2022 ರಲ್ಲಿ ಅತ್ಯಂತ ಕೆಟ್ಟ ಫಾರ್ಮ್‌ನೊಂದಿಗೆ ಫೈಟ್ ಮಾಡುತ್ತಿದೆ. ಈ ತಂಡವು ಸತತ 6 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಮುಂಬೈ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಮುಂಬೈ ಇಂಡಿಯನ್ಸ್ ಇನ್ನೂ ಐಪಿಎಲ್ 2022 ರಲ್ಲಿ ತನ್ನ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಈಗ ಅನುಭವಿ ವೇಗದ ಬೌಲರ್ ಮುಂಬೈ ಇಂಡಿಯನ್ಸ್ ಸೇರಬಹುದು.

ತಂಡಕ್ಕೆ ಎಂಟ್ರಿ ನೀಡಲಿದ್ದಾನೆ ಈ ಬೌಲರ್

ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ವೇಗದ ಬೌಲರ್ ಧವಳ್ ಕುಲಕರ್ಣಿ ಮುಂಬೈ ಇಂಡಿಯನ್ಸ್ ಟೀಂಗೆ ನೀಡಬಹುದು. 33 ವರ್ಷದ ಧವಳ್ ಕುಲಕರ್ಣಿ ಐಪಿಎಲ್ 2022ರಲ್ಲಿ ಕಾಮೆಂಟರಿ ಮಾಡುತ್ತಿದ್ದಾರೆ. ಐಪಿಎಲ್ ಮೆಗಾ ಹರಾಜಿನಲ್ಲಿ ಧವನ್ ಕುಲಕರ್ಣಿ ಅವರನ್ನು ಯಾವುದೇ ತಂಡ ಖರೀದಿಸಿಲ್ಲ. ಧವಳ್ ಕುಲಕರ್ಣಿ ಮುಂಬೈ ನಿವಾಸಿಯಾಗಿದ್ದು, ಮುಂಬೈನ ಬ್ರಬನ್ ಸ್ಟೇಡಿಯಂ, ವಾಂಖೆಡೆ ಸ್ಟೇಡಿಯಂ ಮತ್ತು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಹೇಗೆ ಬೌಲಿಂಗ್ ಮಾಡಬೇಕೆಂದು ಅವರಿಗೆ ಚೆನ್ನಾಗಿ ಗೊತ್ತು. ಧವಳ್ ಮೊದಲು 2021 ರವರೆಗೆ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರು. ಮುಂಬೈ ಪರ ಹಲವು ಪಂದ್ಯಗಳನ್ನು ಗೆದ್ದಿದ್ದಾರೆ. 

ಇದನ್ನೂ ಓದಿ : ಅತಿಯಾ ಶೆಟ್ಟಿ ಜತೆ ಹಸೆಮಣೆ ಏರಲು ಸಜ್ಜಾದ್ರಾ ಕ್ರಿಕೆಟಿಗ ಕೆ.ಎಲ್.ರಾಹುಲ್!? 

ಐಪಿಎಲ್‌ನಲ್ಲಿ ಶಕ್ತಿ ಪ್ರದರ್ಶನ ಮಾಡುವರೆ ಧವಳ್

ಧವಳ್ ಕುಲಕರ್ಣಿ ಐಪಿಎಲ್‌ನ 92 ಪಂದ್ಯಗಳಲ್ಲಿ 86 ವಿಕೆಟ್ ಪಡೆದಿದ್ದಾರೆ. ಧವಳ್ ಕುಲಕರ್ಣಿ ಅವರನ್ನು ಮುಂಬೈ ಇಂಡಿಯನ್ಸ್ 75 ಲಕ್ಷಕ್ಕೆ ಖರೀದಿಸಿತು. ಧವಲ್ ಭಾರತದ ಪರ 12 ಏಕದಿನ ಪಂದ್ಯಗಳಲ್ಲಿ 19 ವಿಕೆಟ್ ಹಾಗೂ 2 ಟಿ20 ಪಂದ್ಯಗಳಲ್ಲಿ 3 ವಿಕೆಟ್ ಪಡೆದಿದ್ದಾರೆ. ಧವಲ್ ಎಸೆದ ಬಾಲ್ ಆಡುವುದು ಯಾರಿಗೂ ಸುಲಭವಲ್ಲ ಮತ್ತು ಇವರು ಸ್ಲೋ ಬೌಲಿಂಗ್‌ಗೆ ಪ್ರಸಿದ್ಧರಾಗಿದ್ದಾರೆ.

ಕುದ್ದು ಒತ್ತಾಯಿಸಿದ್ದಾರೆ ರೋಹಿತ್ ಶರ್ಮಾ

ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್‌ನ ವೇಗದ ಬೌಲಿಂಗ್ ದಾಳಿಗೆ ಮಣಿಯಲು ಬಯಸಿದ್ದಾರೆ, ಆದ್ದರಿಂದ ಧವಳ್ ಕುಲಕರ್ಣಿ ಅವರನ್ನು ತಂಡಕ್ಕೆ ಸೇರಿಸಲು ರೋಹಿತ್ ಶರ್ಮಾ ಒತ್ತಾಯಿಸಿದ್ದಾರೆ. ಮುಂಬೈ ವೇಗದ ಬೌಲರ್‌ಗಳಾದ ಜಸ್ಪ್ರೀತ್ ಬುಮ್ರಾ, ಜಯದೇವ್ ಉನದ್ಕತ್ ಮತ್ತು ಟೈಮಲ್ಸ್ ಮಿಲ್ಸ್ ಐಪಿಎಲ್ 2022 ರಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ.

ಇದನ್ನೂ ಓದಿ : RCB ವಿರುದ್ಧ ಸೋಲಿನ ನಂತರ ಕೆಎಲ್ ರಾಹುಲ್ ಗೆ ಬಿತ್ತು 12 ಲಕ್ಷ ದಂಡ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News