ಮಗು ಹುಟ್ಟಿದ ಎರಡೇ ತಿಂಗಳಲ್ಲಿ ತುಂಬಾ ನೋವು ಅನುಭವಿಸಿದ್ದೆ: ಕಾಜಲ್ ಶಾಕಿಂಗ್ ಕಾಮೆಂಟ್ಸ್

Kajal Aggarwal On Indian 2 Movie : ತೆಲುಗಿನಲ್ಲಿ ಸ್ಟಾರ್ ಹೀರೋಯಿನ್ ಆಗಿ ಅವಕಾಶಗಳು ಅರಸಿ ಬರುತ್ತಿದ್ದ ಸಮಯದಲ್ಲೇ ನಟಿ ಕಾಜಲ್ ಅಗರ್ವಾಲ್‌ ಮದುವೆಯಾಗಿ ಎಲ್ಲರಿಗೂ ಶಾಕ್ ನೀಡಿದ್ದರು. 

Written by - Chetana Devarmani | Last Updated : May 20, 2024, 03:54 PM IST
  • ತೆಲುಗಿನ ಸ್ಟಾರ್ ಹೀರೋಯಿನ್ ಕಾಜಲ್ ಅಗರ್ವಾಲ್‌
  • ಮಗು ಹುಟ್ಟಿದ ಎರಡೇ ತಿಂಗಳಲ್ಲಿ ತುಂಬಾ ನೋವು ಅನುಭವಿಸಿದ್ದೆ
  • ಇಂಡಿಯನ್ 2 ಸಿನಿಮಾ ಬಗ್ಗೆ ಕಾಜಲ್ ಅಗರ್ವಾಲ್‌ ಹೇಳಿಕೆ
ಮಗು ಹುಟ್ಟಿದ ಎರಡೇ ತಿಂಗಳಲ್ಲಿ ತುಂಬಾ ನೋವು ಅನುಭವಿಸಿದ್ದೆ: ಕಾಜಲ್ ಶಾಕಿಂಗ್ ಕಾಮೆಂಟ್ಸ್  title=

Kajal Aggarwal : ತೆಲುಗಿನಲ್ಲಿ ಸ್ಟಾರ್ ಹೀರೋಯಿನ್ ಆಗಿ ಅವಕಾಶಗಳು ಅರಸಿ ಬರುತ್ತಿದ್ದ ಸಮಯದಲ್ಲೇ ನಟಿ ಕಾಜಲ್ ಅಗರ್ವಾಲ್‌ ಮದುವೆಯಾಗಿ ಎಲ್ಲರಿಗೂ ಶಾಕ್ ನೀಡಿದ್ದರು. ಬಳಿಕ ಗಂಡು ಮಗುವಿಗೆ ಜನ್ಮ ನೀಡಿದರು. ಚಲನಚಿತ್ರಗಳಿಂದ ಕೆಲವು ದಿನಗಳವರೆಗೆ ಗ್ಯಾಪ್ ತೆಗೆದುಕೊಂಡರು. ಆದರೆ ಕಾಜಲ್ ಕ್ರೇಜ್ ಮಾತ್ರ ಕಡಿಮೆಯಾಗಲಿಲ್ಲ. ಮದುವೆಯ ನಂತರವೂ ಕಾಜಲ್‌ಗೆ ಹಲವಾರು ಅವಕಾಶಗಳು ಒದಗಿಬಂದವು. 

ಭಗವಂತ ಕೇಸರಿ ಸಿನಿಮಾ ಮೂಲಕ ಕಾಜಲ್‌ಗೆ ಕಮ್ ಬ್ಯಾಕ್ ಮಾಡಿದರು. ಈ ಸಿನಿಮಾದಲ್ಲಿ ಕಾಜಲ್ ಗೆ ದೊಡ್ಡ ಪಾತ್ರ ಇಲ್ಲದಿದ್ದರೂ ಈ ಸಿನಿಮಾದ ಯಶಸ್ಸಿನಿಂದ ಕಾಜಲ್ ಕೆರಿಯರ್ ನ ಹಿಟ್ ಸಿನಿಮಾ ಎನಿಸಿಕೊಂಡಿದೆ. ಕಾಜಲ್‌ ಅವರ ಮುಂಬರುವ ಚಿತ್ರ ಇಂಡಿಯನ್ 2 ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ‌ 

ಇದನ್ನೂ ಓದಿ: ಪ್ರಮೋದ್ ನಾರಾಯಣ್ ನಿರ್ಮಾಣದ ನೂತನ ಚಿತ್ರದ ನಾಯಕರಾಗಿ ‌ರಿಷಿ

ಈ ಸಿನಿಮಾದ ಬಗ್ಗೆ ಮಾತನಾಡಿದ ಕಾಜಲ್, ''ಮಗು ಹುಟ್ಟಿದ ತಕ್ಷಣ ಎರಡು ತಿಂಗಳಲ್ಲೇ ಕುದುರೆ ಸವಾರಿ ಕಲಿಯಲು ಹೋಗಿದ್ದೆ. ಶಂಕರ್ ಅವರ ಇಂಡಿಯನ್ 2 ಗಾಗಿ ನಾನು ಕುದುರೆ ಸವಾರಿ ಕಲಿಯಬೇಕಾಗಿತ್ತು. ಆದರೆ ಆಗ ನನಗೆ ತುಂಬಾ ನೋವಾಗುತ್ತಿತ್ತು. ಆದರೆ ನಾನು ಕಷ್ಟಪಡಬೇಕಿತ್ತು ಎಂದರು. 

ಸುಮಾರು ನಾಲ್ಕು ವರ್ಷಗಳ ಹಿಂದೆ ಓಕೆ ಮಾಡಿದ ಸಿನಿಮಾ ಅದು. ನನಗೆ ಬೇಡವಾದರೆ ಬೇರೆಯವರನ್ನು ಕರೆದುಕೊಂಡು ಮಾಡುತ್ತಾರೆ. ಆದರೆ ಆ ಸಿನಿಮಾ ಮಾಡಬೇಕೆಂದುಕೊಂಡಿದ್ದೆ. ನನ್ನ ಡೇಟ್ಸ್ ಅಡ್ಜಸ್ಟ್ ಆಗುವಂತೆ ನಿರ್ದೇಶಕ ಶಂಕರ್ ಸರ್ ಕೂಡ ಪ್ಲಾನ್ ಮಾಡಿ ಸಪೋರ್ಟ್ ಮಾಡಿದ್ದಾರೆ. ನಿನ್ನ ಜಾಗದಲ್ಲಿ ನಾನು ಬೇರೆಯವರನ್ನು ತೆಗೆದುಕೊಳ್ಳುವುದಿಲ್ಲ.. ಸ್ವಲ್ಪವೂ ಭಯಪಡಬೇಡ ಎಂದು ಹೇಳಿದ್ದರು. ತುಂಬಾ ಕಷ್ಟವಾದರೂ ಇಷ್ಟಪಟ್ಟು ಮಾಡಿದ್ದು, ಹೆಮ್ಮೆ ಅನಿಸುತ್ತಿದೆ ಎಂದು ನಟಿ ಕಾಜಲ್‌ ಹೇಳಿದ್ದಾರೆ. 

ಇದನ್ನೂ ಓದಿ: "ಶಾರುಖ್ ಖಾನ್ - ಕರಣ್​ ಜೋಹರ್ ಸಲಿಂಗ ಕಾಮಿಗಳು" : ವಿವಾದಕ್ಕೆ ಕಾರಣವಾಯ್ತು ಖ್ಯಾತ ಸಿಂಗರ್‌ ಹೇಳಿಕೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News