ಐಪಿಎಲ್ 2024ರ ಏಳನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ವಿರುದ್ಧ ನಡೆಯಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡ 63 ರನ್ ಗಳ ಬಾರಿ ಅಂತರದಿಂದ ಗೆಲುವು ಸಾಧಿಸಿದೆ.
ಐಪಿಎಲ್ 2024ರ ಏಳನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ವಿರುದ್ಧ ನಡೆಯುತ್ತಿದ್ದು, ಚೆನ್ನೈ ಸೂಪರ್ ಕಿಂಗ್ಸ್ 207ರನ್ ಗಳ ಗೆಲುವಿನ ಗುರಿಯನ್ನು ನೀಡಿದೆ.
IND vs ENG :ಭಾರತ ಮತ್ತು ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ಅನ್ನು 122 ರನ್ ಗಳಿಗೆ ಅಲೌಟ್ ಮಾಡುವ ಮೂಲಕ 434 ರನ್ ಗಳ ಅಂತರದಿಂದ ದಾಖಲೆಯ ಜಯಗಳಿಸಿದೆ.
AUS vs PAK 3rd Test : ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೆ ಟೆಸ್ಟ್ ಪಂದ್ಯವು ಇಂದು( ಶನಿವಾರ) ಅಂತ್ಯಗೊಂಡಿದೆ. ಪಾಕ್ ವಿರದ್ದ ಆಸಿಸ್ ತಂಡವು ಭರ್ಜರಿ ಜಯಗಳಿಸಿದ್ದು, ಸರಣಿಯನ್ನು 3-0 ಅಂತರಗಳಿಂದ ವಶಮಾಡಿಕೊಂಡಿದೆ.
World Cup: ಐಸಿಸಿ ವಿಶ್ವಕಪ್ 2023ರ ಕುತೂಹಲಕಾರಿ ಪಂದ್ಯ ನಾಳೆ ಅಕ್ಟೋಬರ್ 14 ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಪಂದ್ಯ ವೀಕ್ಷಣೆಗೆ ಇಡೀ ವಿಶ್ವವೇ ಕಾತುರದಿಂದ ಕಾದು ಕುಳಿತಿದೆ. ಇದಕ್ಕೂ ಮೊದಲು, ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಪಿನ್ನರ್ಗಳು ಭಾರತದ ಸ್ಟಾರ್ ಬ್ಯಾಟ್ಸ್ಮನ್ಗಳ ಬಗ್ಗೆ ಆತಂಕಗೊಂಡಿದ್ದಾರೆ.
ಐಪಿಎಲ್ 2022 ರಲ್ಲಿ, ಈ ಎರಡು ತಂಡಗಳು ಈ ಪರಸ್ಥಿತಿಗೆ ಬರಲು ಒಂದು ದೊಡ್ಡ ತಪ್ಪನ್ನು ಮಾಡಿವೆ. ಹೌದು, ತಲಾ ಒಬ್ಬ ಮ್ಯಾಚ್ ವಿನ್ನರ್ ಆಟಗಾರನನ್ನು ಈ ತಂಡಗಳು ಕೈ ಬಿಟ್ಟಿವೆ. ಆ ಆಟಗಾರರು ಯಾರು? ಯಾಕೆ ಕೈ ಬಿಟ್ಟಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ..
Rohit Sharma: ಜೈಪುರದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 5 ವಿಕೆಟ್ಗಳ ಜಯ ಸಾಧಿಸುವ ಮೂಲಕ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಗೆಲುವಿನೊಂದಿಗೆ ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ಭಾರತ ವಿಶ್ವ ದಾಖಲೆ ನಿರ್ಮಿಸಿದೆ.
T20 WORLD CUP 2021: ಟೂರ್ನಿಯಲ್ಲಿ ಉಳಿಯಲು ಭಾರತ ಯಾವುದೇ ಬೆಲೆ ತೆತ್ತಾದರೂ ನ್ಯೂಜಿಲೆಂಡ್ ವಿರುದ್ಧದ ಮುಂದಿನ ಪಂದ್ಯವನ್ನು ಗೆಲ್ಲಲೇಬೇಕು. ನ್ಯೂಜಿಲೆಂಡ್ ಅನ್ನು ಸೋಲಿಸಿದ ಬಳಿಕ ಭಾರತದ ಕೆಲಸ ತುಂಬಾ ಸುಲಭವಾಗುತ್ತದೆ. ನಂತರ ಅಫ್ಘಾನಿಸ್ತಾನ, ಸ್ಕಾಟ್ಲೆಂಡ್ ಮತ್ತು ನಮೀಬಿಯಾದಂತಹ ದುರ್ಬಲ ತಂಡಗಳ ವಿರುದ್ಧ ಪಂದ್ಯಗಳನ್ನು ಆಡಬೇಕಿದೆ. ದುರ್ಬಲ ತಂಡಗಳ ವಿರುದ್ಧ ಭಾರತ ತನ್ನ ಮುಂದಿನ 3 ಪಂದ್ಯಗಳನ್ನು ಗೆಲ್ಲುವ ಮೂಲಕ ಸೆಮಿಫೈನಲ್ ತಲುಪುವ ಹಾದಿ ಸುಗಮವಾಗಲಿದೆ.
IPL 2021 CSK vs DC: ಎಂ.ಎಸ್. ಧೋನಿಯವರ ವಿನ್ನಿಂಗ್ ಶಾಟ್ ಕಂಡ ಕ್ಷಣ ಅವರ ಪತ್ನಿ ಸಾಕ್ಷಿ ಧೋನಿಯವರ ಕಣ್ತುಂಬಿ ಬಂದಿತು. ಭಾನುವಾರ ದೆಹಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ ಧೋನಿ ಮತ್ತೆ ತಮ್ಮ ಶಕ್ತಿ ಪ್ರದರ್ಶಿಸಿದರು. ಕೊನೆಯ ಓವರ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯವನ್ನು ತಿರುಗಿಸಿದರು. ಸೋಲಿನ ದವಡೆಯಿಂದ ತಂಡವನ್ನು ಪಾರುಮಾಡಿದರು.
T20 World Cup: ವಿಶ್ವಕಪ್ ಮಾತ್ರವಲ್ಲ ಸಾಮಾನ್ಯವಾಗಿ ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದ ಬಗ್ಗೆ ಇಡೀ ವಿಶ್ವದಾದ್ಯಂತ ಹೆಚ್ಚು ಕ್ರೇಜ್ ಇದೆ. ಟಿ 20 ವಿಶ್ವಕಪ್ ಬಗ್ಗೆ ಹೇಳುವುದಾದರೆ ಪಾಕಿಸ್ತಾನದ ವಿರುದ್ಧ ಭಾರತದ ದಾಖಲೆ ತುಂಬಾ ಚೆನ್ನಾಗಿದೆ. ಟಿ 20 ವಿಶ್ವಕಪ್ನಲ್ಲಿ ಇದುವರೆಗೆ ಭಾರತ ಮತ್ತು ಪಾಕಿಸ್ತಾನ ನಡುವೆ 5 ಪಂದ್ಯಗಳು ನಡೆದಿದ್ದು, ಅದರಲ್ಲಿ ಐದು ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದಿದೆ. 2016 ರ ವಿಶ್ವಕಪ್ ಪಂದ್ಯದಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾ 6 ವಿಕೆಟ್ ಗಳಿಂದ ಪಾಕಿಸ್ತಾನವನ್ನು ಸೋಲಿಸಿತ್ತು.
T20 World Cup 2021: ಐಪಿಎಲ್ ನಂತರ ಟಿ 20 ವಿಶ್ವಕಪ್ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ಭಾರತ-ಪಾಕಿಸ್ತಾನದ ನಡುವಿನ ಪಂದ್ಯ ಎಂದರೆ ಸಾಮಾನ್ಯಕ್ಕಿಂತ ಕೊಂಚ ಹೆಚ್ಚಿನ ಕುತೂಹಲವೇ ಇರಲಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಪಾಕಿಸ್ತಾನದ ವಿರುದ್ಧ ಭಾರತದ ದಾಖಲೆ ತುಂಬಾ ಚೆನ್ನಾಗಿದೆ. ಟಿ 20 ವಿಶ್ವಕಪ್ನಲ್ಲಿ ಇದುವರೆಗೆ ಭಾರತ ಮತ್ತು ಪಾಕಿಸ್ತಾನ ನಡುವೆ 5 ಪಂದ್ಯಗಳು ನಡೆದಿದ್ದು, ಅದರಲ್ಲಿ ಐದು ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದಿದೆ. ಈ ಮಹತ್ವದ ಪಂದ್ಯದಲ್ಲಿ, ಭಾರತ ತನ್ನ ಬಲಿಷ್ಠ ಪ್ಲೇಯಿಂಗ್ XI ನೊಂದಿಗೆ ಬರುತ್ತದೆ. ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾದ ಪ್ಲೇಯಿಂಗ್ XI ಹೇಗಿರಲಿದೆ ಎಂಬುದನ್ನು ನೋಡೋಣ.
ಮೊಟೆರಾದ ಕ್ರೀಡಾಂಗಣವನ್ನು ಹೊಸ ರೀತಿಯಲ್ಲಿ ಸಿದ್ಧಪಡಿಸಲಾಗಿದೆ ಮತ್ತು ಇಲ್ಲಿರುವ ಪಿಚ್ ಭಾರತೀಯ ತಂಡಕ್ಕೆ ಸಂಪೂರ್ಣವಾಗಿ ಹೊಸದು. ಅದಾಗ್ಯೂ ಯಾವುದೇ ರೀತಿಯ ಅಪಾಯವನ್ನು ತೆಗೆದುಕೊಳ್ಳದೆ ಸೋಲನ್ನು ತಪ್ಪಿಸಲು ಭಾರತೀಯ ತಂಡ ಬಯಸುತ್ತದೆ. ಮುಂದಿನ ಎರಡು ಟೆಸ್ಟ್ ಪಂದ್ಯಗಳಲ್ಲಿ ಒಂದೊಮ್ಮೆ ಟೀಂ ಇಂಡಿಯಾ ಸೋಲುಂಡರೆ ಡಬ್ಲ್ಯುಟಿಸಿ (WTC) ಫೈನಲ್ ಪಂದ್ಯದ ಹಾದಿ ಕಷ್ಟಕರವಾಗಲಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಡೆದ ಮೊದಲ ಹೊನಲು-ಬೆಳಕಿನ ಪಂದ್ಯವನ್ನು ಐತಿಹಾಸಿಕವಾಗಿಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ಈ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಎಲ್ಲಾ ಮಾಜಿ ನಾಯಕರು ಕಾಮೆಂಟ್ರಿ ನೀಡುವ ಬಗ್ಗೆ ಚರ್ಚಿಸಲಾಗಿದೆ. ಆದರೆ ಒಂದು ಹೆಸರು ಮಾತ್ರ ಹೆಚ್ಚಿನ ಚರ್ಚೆಯಲ್ಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.