ಪತಿಗೆ ಗೊತ್ತಿಲ್ಲದಂತೆ ಈ ಕೆಲಸ ಮಾಡಿ : ಮಹಿಳೆಯರಿಗೆ ಸುಧಾಮೂರ್ತಿ ಕಿವಿಮಾತು

ಇನ್ಫೋಸಿಸ್ ಕಂಪನಿ

ಇನ್ಫೋಸಿಸ್ ಕಂಪನಿ ಮಾಲೀಕ ಎನ್ ಆರ್ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ. ಐಟಿ ಕಂಪನಿಯನ್ನು ಭಾರತಕ್ಕೆ ತಂದ ಕೀರ್ತಿ ನಾರಾಯಣ ಮೂರ್ತಿಯವರಿಗೆ ಮಾತ್ರವಲ್ಲ ಅವರ ಪತ್ನಿಗೂ ಸಲ್ಲುತ್ತದೆ.

ಸುಧಾ ಮಾತು

ಕೆಲ ಸಮಯದ ಹಿಂದೆ ಕಪಿಲ್ ಶರ್ಮಾ ಕಾರ್ಯಕ್ರಮಕ್ಕೆ ಬಂದಿದ್ದ ಸುಧಾ ಮೂರ್ತಿ ಅವರೇ ಈ ಬಗ್ಗೆ ಮಾತನಾಡಿದ್ದಾರೆ.

ಉಳಿತಾಯದ ಹಣ

ಪತಿ ಕಂಪನಿ ಆರಂಭಿಸುವ ಯೋಚನೆಯಲ್ಲಿದ್ದಾಗ ತನ್ನ ಬಳಿ ಹೆಚ್ಚು ಹಣ ಇರಲಿಲ್ಲ ಎಂದು ಹೇಳಿದ್ದರಂತೆ. ಆಗ ಸುಧಾ ಮೂರ್ತಿ ತಾನು ಕೂಡಿಟ್ಟಿದ್ದ ಹಣ ನೀಡಿ ಸಹಾಯ ಮಾಡಿದರಂತೆ.

ಗಂಡನಿಗೆ ಹೇಳದೆ ಹಣವನ್ನು ಉಳಿಸಿ

ತಮ್ಮ ಪತಿಗೆ ತಿಳಿಯದಂತೆ ಸ್ವಲ್ಪ ಸ್ವಲ್ಪ ಹಣವನ್ನು ಕೂಡಿಡುವ ಬುದ್ದಿ ಮಹಿಳೆಗೆ ಇರಬೇಕು ಎಂದು ಸುಧಾ ಮೂರ್ತಿ ಹೇಳಿದ್ದಾರೆ.

ರಹಸ್ಯವಾಗಿ ಉಳಿಸುವುದು ಏಕೆ ಮುಖ್ಯ?

ನೀವು ಮಾಡುವ ಉಳಿತಾಯದ ಬಗ್ಗೆ ಯಾರಿಗೂ ಹೇಳಬಾರದು.ಯಾಕೆಂದರೆ ಗಂಡಸರಿಗೆ ಮನೆಯಲ್ಲಿ ಹಣವಿದೆ ಎಂದು ತಿಳಿದಾಗ ಅದನ್ನು ಖರ್ಚು ಮಾಡಲು ತುಂಬಾ ಹಾತೊರೆಯುತ್ತಾರೆ ಎಂದಿದ್ದಾರೆ. .

ಪತಿಗೆ ಸಹಾಯ

ನಿಮ್ಮ ಪತಿಯನ್ನು ಆರ್ಥಿಕವಾಗಿ ಬೆಂಬಲಿಸಲು ಕೆಲಸ ಮಾಡುವುದು ಅನಿವಾರ್ಯವಲ್ಲ. ಮಹಿಳೆಯರು ತಮ್ಮ ಬುದ್ಧಿವಂತಿಕೆಯನ್ನು ಬಳಸಿಕೊಂಡು ಮನೆಯ ನಿರ್ವಹಣೆಗಾಗಿ ನೀಡಿದ ಹಣವನ್ನು ಉಳಿಸಬಹುದು.

ಗಂಡನ ಕಷ್ಟಕ್ಕೆ ಬೆಂಬಲ

ಹೀಗೆ ಮಹಿಳೆ ತಾನು ಉಳಿಸಿದ ಹಣವನ್ನೇ ಗಂಡನ ಕಷ್ಟಕ್ಕೆ ನೀಡಿ ಬೆಂಬಲವಾಗಿ ನಿಲ್ಲಬಹುದು ಎಂದು ಹೇಳಿದ್ದಾರೆ.

ಗಂಡನಿಂದ ಗೌರವ

ನುರಿತ ಮಹಿಳೆಗೆ ಮಾತ್ರ ಕಡಿಮೆ ಆದಾಯದಿಂದಲೂ ಹಣವನ್ನು ಉಳಿಸುವ ಕೌಶಲ್ಯವಿರುತ್ತದೆ. ಅಂತಹ ಮಹಿಳೆಯರು ತಮ್ಮ ಗಂಡನಿಂದ ಬಹಳ ಗೌರವವನ್ನು ಪಡೆಯುತ್ತಾರೆ .

VIEW ALL

Read Next Story