ಯೂರಿಕ್ ಆಸಿಡ್ ಸಮಸ್ಯೆಯುಳ್ಳವರು ಈ ಆಹಾರಗಳನ್ನು ಸೇವಿಸಲೇಬಾರದು!

ಯೂರಿಕ್ ಆಸಿಡ್

ಯೂರಿಕ್ ಆಸಿಡ್ ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸಲು ಫ್ಯೂರಿನ್ ಆಹಾರವು ಕಾರಣವಾಗುತ್ತದೆ. ಪ್ಯೂರಿನ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿದಾಗ ರಕ್ತದಲ್ಲಿ ಯೂರಿಕ್ ಆಮ್ಲದ ಪ್ರಮಾಣವು ಹೆಚ್ಚಾಗಲು ಪ್ರಾರಂಭಿಸುತ್ತದೆ.

ಸೇವಿಸಬಾರದ ಆಹಾರಗಳು

ಯೂರಿಕ್ ಆಸಿಡ್ ಹೆಚ್ಚಾಗಲು ಕಾರಣವಾಗುವ ಆಹಾರಗಳಿಂದ ದೂರವಿದ್ದರೆ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಮಾಂಸಾಹಾರ

ಹೆಚ್ಚಿನ ಯೂರಿಕ್ ಆಮ್ಲ ಹೊಂದಿರುವ ಜನರು ಮಾಂಸಾಹಾರ ತ್ಯಜಿಸಬೇಕು. ಏಕೆಂದರೆ ಫ್ಯೂರಿನ್ ಸಮೃದ್ಧವಾಗಿರುವ ಈ ಆಹಾರಗಳು ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣವನ್ನು ಹೆಚ್ಚಿಸುತ್ತವೆ.

ಆಲ್ಕೋಹಾಲ್

ಆಲ್ಕೋಹಾಲ್ ಮತ್ತು ಬಿಯರ್ ಸೇವನೆಯು ಯೂರಿಕ್ ಆಸಿಡ್ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತದೆ. ಆಲ್ಕೋಹಾಲ್ ದೇಹದಲ್ಲಿ ನಿರ್ಜಲೀಕರಣವನ್ನು ಉಂಟುಮಾಡುತ್ತದೆ. ಇದರ ಸೇವನೆಯು ಸಂಧಿವಾತದ ಅಪಾಯವನ್ನೂ ಹೆಚ್ಚಿಸುತ್ತದೆ.

ಕಡಲೆಕಾಯಿ

ಪ್ರೋಟೀನ್ ಭರಿತ ಕಡಲೆಕಾಯಿಯು ಯೂರಿಕ್ ಆಸಿಡ್ ರೋಗಿಗಳ ಸಮಸ್ಯೆಯನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ. ಏಕೆಂದರೆ ಇದರಲ್ಲಿ ಪ್ರೋಟೀನ್ ಜೊತೆಗೆ ಪ್ಯೂರಿನ್ ಸಮೃದ್ಧವಾಗಿದೆ.

ಸಿಟ್ರಸ್ ಹಣ್ಣು

ಸಿಟ್ರಸ್ ಹಣ್ಣುಗಳನ್ನು ಸೇವಿಸುವುದರಿಂದ ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಾಗುತ್ತದೆ.

ಸಕ್ಕರೆ

ಸಕ್ಕರೆ ಕೂಡ ಯೂರಿಕ್ ಆಸಿಡ್ ಸಮಸ್ಯೆಯನ್ನು ಹೆಚ್ಚು ಮಾಡಬಹುದು, ಹೀಗಾಗಿ ಸಕ್ಕರೆಯ ಬದಲಿಗೆ ಜೇನುತುಪ್ಪವನ್ನು ಸೇವಿಸಬಹುದು.

ಸೂಚನೆ

ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.

VIEW ALL

Read Next Story