ಆರ್ಥಿಕ ವರ್ಷ 2023-24 ಗಾಗಿ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಲು ಇಂದೇ ಕೊನೆ ದಿನ.
#ITR ಫೈಲ್ ಮಾಡಲು ಅಂತಿಮ ದಿನಾಂಕವು ಜುಲೈ 31, 2023 ಆಗಿದೆ. ITR ಫೈಲ್ ಮಾಡಿದ ನಂತರ ಇ-ಪರಿಶೀಲನೆ ಮಾಡಲು ಮರೆಯದಿರಿ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್‌ನಲ್ಲಿ ತಿಳಿಸಿದೆ.
ಇನ್ನೂ ಐಟಿಆರ್ ಫೈಲ್ ಮಾಡದಿದ್ದರೆ ಏನಾಗಬಹುದು ಎಂಬ ಪ್ರಶ್ನೆ ನಿಮ್ಮಲ್ಲಿಯೂ ಇದ್ದರೆ, ಇಲ್ಲಿದೆ ಉತ್ತರ.
ನಿಗದಿತ ಸಮಯದಲ್ಲಿ ಐಟಿಆರ್ ಸಲ್ಲಿಸದಿದ್ದರೆ ಹನಕಾಸಿಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅವುಗಳೆಂದರೆ....
ನಿಗದಿತ ದಿನಾಂಕದೊಳಗೆ ITR ಅನ್ನು ಸಲ್ಲಿಸದಿದ್ದರೆ ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 234F ಅಡಿಯಲ್ಲಿ ದಂಡವನ್ನು ವಿಧಿಸಲಾಗುತ್ತದೆ.
ಈ ದಂಡದ ಮೊತ್ತ, 2.5 ಲಕ್ಷದಿಂದ 5 ಲಕ್ಷದವರೆಗೆ ಆದಾಯ ಹೊಂದಿರುವವರಿಗೆ 1,000 ರೂ. ವರೆಗೆ ದಂಡ ವಿಧಿಸಲಾಗುತ್ತದೆ. ರೂ. 5 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ರೂ. 5,000 ದಂಡವನ್ನು ವಿಧಿಸಲಾಗುತ್ತದೆ.
ಯಾವುದೇ ತೆರಿಗೆ ಹೊಣೆಗಾರಿಕೆಯ ಸಂದರ್ಭದಲ್ಲಿ, ITR ಸಲ್ಲಿಸುವವರೆಗೆ ಮತ್ತು ತೆರಿಗೆಗಳನ್ನು ಪಾವತಿಸುವವರೆಗೆ ನಿಗದಿತ ದಿನಾಂಕದ ನಂತರ ತೆರಿಗೆದಾರರ ಮೇಲೆ ತಿಂಗಳಿಗೆ 1 ಪ್ರತಿಶತದಷ್ಟು ಬಡ್ಡಿಯನ್ನು ವಿಧಿಸಲಾಗುತ್ತದೆ.
ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 234A ಭಾಗವಾಗಿ, ಈ ಬಡ್ಡಿ ಪಾವತಿ ಕಡ್ಡಾಯವಾಗಿದೆ.
ನೀವು ನಿಗದಿತ ದಿನಾಂಕದೊಳಗೆ ITR ಅನ್ನು ಸಲ್ಲಿಸದಿದ್ದರೆ, ಮರುಪಾವತಿ ಪ್ರಕ್ರಿಯೆಯಲ್ಲಿ ವಿಳಂಬವಾಗಬಹುದು.
ಸಮಯಕ್ಕೆ ಸರಿಯಾಗಿ ITR ಅನ್ನು ಸಲ್ಲಿಸದಿರುವುದು ಮರುಪಾವತಿಯ ಮೇಲಿನ ಬಡ್ಡಿಯ ನಷ್ಟಕ್ಕೆ ಕಾರಣವಾಗಬಹುದು. ಆದ್ದರಿಂದ, ಆದಾಯ ತೆರಿಗೆ ರಿಟರ್ನ್ ಅನ್ನು ಸಮಯಕ್ಕೆ ಸಲ್ಲಿಸುವುದು ಕಡಿತಗೊಳಿಸಲಾದ ಹೆಚ್ಚುವರಿ ತೆರಿಗೆಗಳಿಗೆ ಮರುಪಾವತಿಯನ್ನು ಪಡೆಯಲು ಏಕೈಕ ಮಾರ್ಗವಾಗಿದೆ.