ಮೆಗಾ ಹೀರೋ ವರುಣ್ ತೇಜ್ ಮತ್ತು ನಾಯಕಿ ಲಾವಣ್ಯ ತ್ರಿಪಾಠಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಈಗಾಗಲೇ ಇಟಲಿಯಲ್ಲಿ ಇವರಿಬ್ಬರ ಮದುವೆ ಸಮಾರಂಭ ಆರಂಭವಾಗಿದ್ದು, ಈ ಕುರಿತು ಫೋಟೋ ವೈರಲ್ ಆಗಿವೆ.
ಸೋಮವಾರ ನಡೆದ ಕಾಕ್‌ಟೈಲ್ ಪಾರ್ಟಿಯಲ್ಲಿ ಟಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು.
ಮಂಗಳವಾರ ಈ ಟಾಲಿವುಡ್ ಜೋಡಿಯ ಅರಿಶಿನ ಶಾಸ್ತ್ರ ಅದ್ಧೂರಿಯಾಗಿ ನಡೆಯಿತು. ಈ ಕುರಿತ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ನಿನ್ನೆ ರಾತ್ರಿ ನಡೆದ ಮೆಹೆಂದಿ ಸಮಾರಂಭದಲ್ಲಿ ಮೆಗಾ ಫ್ಯಾಮಿಲಿ, ಆಪ್ತರು ಭಾಗವಹಿಸಿದ್ದರು.
ಇಬ್ಬರ ಕುಟುಂಬಸ್ಥರು, ಟಾಲಿವುಡ್ ಸೆಲೆಬ್ರಿಟಿಗಳು, ಆಪ್ತರು, ಕೆಲವು ಸೆಲೆಬ್ರಿಟಿಗಳು ಇಂದು ಇಟಲಿಗೆ ತೆರಳಲಿದ್ದಾರೆ.
ಅರಿಶಿನ ಶಾಸ್ತ್ರದ ಫೋಟೋಗಳಲ್ಲಿ, ಲಾವಣ್ಯ ಮತ್ತು ವರುಣ್ ತೇಜ್ ಹಳದಿ ಬಟ್ಟೆಯಲ್ಲಿ ಮಿಂಚಿದ್ದಾರೆ.
ಲಾವಣ್ಯ ಹಳದಿ ಬಣ್ಣದ ಲೆಹೆಂಗಾ ಧರಿಸಿದ್ದು, ವರುಣ್ ಹಳದಿ ಬಣ್ಣದ ಕುರ್ತಾ ಮತ್ತು ಬಿಳಿ ಪ್ಯಾಂಟ್ ಧರಿಸಿದ್ದರು.
ಮೆಗಾ ಹಾಗೂ ಅಲ್ಲು ಹೀರೋಗಳು ಒಂದೇ ಟೀಮ್ ಡ್ರೆಸ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.