ಅದ್ದೂರಿ ಬಿಡುಗಡೆ

ಭಾರೀ ನಿರೀಕ್ಷೆ ಮೂಡಿಸಿದ್ದ ‘ಆದಿಪುರುಷ್’ ಚಿತ್ರವು ಜೂನ್ 16ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿತ್ತು.

ಒಳ್ಳೆಯ ನಿರೀಕ್ಷೆ ಇತ್ತು

ಶೂಟಿಂಗ್ ಪ್ರಾರಂಭದಿಂದಲೂ ಈ ಚಿತ್ರದ ಬಗ್ಗೆ ಪ್ರಭಾಸ್ ಅಭಿಮಾನಿಗಳಲ್ಲಿ ಒಳ್ಳೆಯ ನಿರೀಕ್ಷೆ ಇತ್ತು. ಆದರೆ ಸಿನಿಮಾ ರಿಲೀಸ್ ಬಳಿಕ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಗೆಲುವು ಬೇಕೇ ಬೇಕಿತ್ತು

ನಟ ಪ್ರಭಾಸ್ಗೆ ತುರ್ತಾಗಿ ಒಂದು ಗೆಲುವು ಬೇಕೇ ಬೇಕಿತ್ತು. ‘ಸಾಹೋ’, ‘ರಾಧೆ ಶ್ಯಾಮ್’ ಬಳಿಕ ‘ಆದಿಪುರುಷ್’ ಅವರಿಗೆ ಗೆಲುವು ತಂದುಕೊಡುತ್ತದೆ ಅಂತಾ ನಿರೀಕ್ಷಿಸಲಾಗಿತ್ತು.

ರಾಮನಾಗಿ ಪ್ರಭಾಸ್

ಓಂ ರಾವುತ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಆದಿಪುರುಷ್’ ಚಿತ್ರದಲ್ಲಿ ಪ್ರಭಾಸ್ ರಾಮನಾಗಿ, ಕೃತಿ ಸನೋನ್ ಸೀತೆಯಾಗಿ, ಸನ್ನಿ ಸಿಂಗ್ ಲಕ್ಷ್ಮಣನಾಗಿ ಮತ್ತು ಸೈಫ್ ಅಲಿ ಖಾನ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ.

ಸಖತ್ ಸುದ್ದಿ ಆಗಿದೆ

ಪ್ರಭಾಸ್ ಅಭಿನಯದ ‘ಆದಿಪುರುಷ್’ ಸಿನಿಮಾ ಬಿಡುಗಡೆ ಬಳಿಕ ವಿವಾದದ ಮೂಲಕವೇ ಸಖತ್ ಸುದ್ದಿ ಆಗಿದೆ.

ಭಾರೀ ಕುಸಿತ!

‘ಆದಿಪುರುಷ್’ ಬಾಕ್ಸ್ ಆಫೀಸ್ನಲ್ಲಿ ಭಾರೀ ಕುಸಿತ ಕಂಡಿದೆ. ರಿಲೀಸ್ ಆದ 3 ದಿನ ಭರ್ಜರಿ ಕಲೆಕ್ಷನ್ ಮಾಡಿದ್ದ ಈ ಸಿನಿಮಾ 4 ಮತ್ತು 5ನೇ ದಿನ ಹೇಳಿಕೊಳ್ಳುವಂತಹ ಕೆಲೆಕ್ಷನ್ ಮಾಡಿಲ್ಲ.

ಸಂಭಾಷಣೆಗೆ ಭಾರೀ ವಿರೋಧ

‘ಆದಿಪುರುಷ್’ ಸಿನಿಮಾದ ಸಂಭಾಷಣೆಗೆ ಸಿನಿ ಪ್ರಿಯರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಕಾರ್ಟೂನ್ ರೀತಿ ಪಾತ್ರಗಳನ್ನು ಚಿತ್ರಿಸಿ ‘ರಾಮಾಯಣ’ಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಫ್ಲಾಪ್ ಶೋ

ಇನ್ನು ನಟ ಪ್ರಭಾಸ್ಗೆ ಸಕ್ಸಸ್ ತಂದುಕೊಡುತ್ತದೆ ಎಂದು ನಿರೀಕ್ಷಿಸಿದ್ದ ‘ಆದಿಪುರುಷ್’ ಸಿನಿಮಾ ಹಲವು ಎಡವಟ್ಟುಗಳಿಂದ ಫ್ಲಾಪ್ ಶೋ ಆಗಿದೆ.

VIEW ALL

Read Next Story